Asianet Suvarna News Asianet Suvarna News

'ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ. ಆಕೆಯ ಸಾವಿನಿಂದ ನನಗೆ ಗರ ಬಡಿದಂತಾಗಿದೆ: ಮಂಡ್ಯ ರಮೇಶ್ ಭಾವುಕ

:'ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ. ಆಕೆಯ ಸಾವು ನಂಬಲಾಗುತ್ತಿಲ್ಲ. ಒಂಥರಾ ಗರ ಬಡಿದಂಗಾಗಿದೆ ಎಂದು ಅಪರ್ಣಾ ಸಾವಿನ ಸುದ್ದಿ ಕೇಳಿ ನಟ ಮಂಡ್ಯ ರಮೇಶ್ ಭಾವುಕರಾದರು.

Anchor aparna vastarey passes away Mandya Ramesh tears rav
Author
First Published Jul 12, 2024, 9:31 AM IST | Last Updated Jul 12, 2024, 9:30 AM IST

Aparna vastarey ::'ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ. ಆಕೆಯ ಸಾವು ನಂಬಲಾಗುತ್ತಿಲ್ಲ. ಒಂಥರಾ ಗರ ಬಡಿದಂಗಾಗಿದೆ ಎಂದು ಅಪರ್ಣಾ ಸಾವಿನ ಸುದ್ದಿ ಕೇಳಿ ನಟ ಮಂಡ್ಯ ರಮೇಶ್ ಭಾವುಕರಾದರು.

ಆಕೆಯ ಕನ್ನಡ ತುಂಬಾ ಖುಷಿ ಕೊಟ್ಟಿದೆ. ಅಪರ್ಣಾಳ ಮನುಷ್ಯತ್ವ ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿದೆ. ಅಂತಹ ಅಪರ್ಣಾಗೆ ಇಷ್ಟೊಂದು ಭೀಕರವಾಗಿ ಸಾವು ಬಂದಿದ್ದು ಆಘಾತವಾಗಿದೆ. ಕನ್ನಡನಾಡು ಶುದ್ಧ ಕನ್ನಡತಿಯನ್ನ ಕಳೆದುಕೊಂಡಿದೆ. ನಿರೂಪಣೆ ಹೇಗೆ ಮಾಡಬೇಕು ಎಂಬುದಕ್ಕೆ ಅಪರ್ಣಾ ಉತ್ತಮ ನಿದರ್ಶನದಂತಿದ್ದಳು. ಆಕೆಯ ಶುದ್ಧ ಕನ್ನಡ ಉಚ್ಚಾರಣೆ ಆಹಾ, ಚೆಂದವಾಗಿ ಮಾತಾಡಬಲ್ಲ ಅಪರ್ಣಾ ನಿಜವಾಗಿಯೂ ನಿರೂಪಣೆ ಶಾಲೆ ತೆಗೆಯಬೇಕಿತ್ತು. ನಾನು ಅಪರ್ಣಾಳಿಗೆ ಇದನ್ನೇ ಹೇಳಿದ್ದೆ. ಇಂದು ಕನ್ನಡದ ದೊಡ್ಡ ಶಕ್ತಿ ಕಣ್ಮರೆಯಾಗಿದೆ ಎಂದು ಕಣ್ಣೀರಾದ ಮಂಡ್ಯ ರಮೇಶ್.

ಅಪರ್ಣಾ ಭಾಷೆಯ ಮಹತ್ವವನ್ನು ಸೂಕ್ಷ್ಮವಾಗಿ ಬೇರೆಯವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದರು. ಶುದ್ಧ ಕನ್ನಡವನ್ನು ಎಲ್ಲಿಯವರೆಗೆ ಪ್ರೀತಿಸ್ತಾರೋ ಅಲ್ಲಿವರೆಗೂ ಅಪರ್ಣಾ ನೆನಪಲ್ಲಿ ಇರ್ತಾರೆ. ಆಕೆ ಮಜಾ ಟಾಕೀಸ್‌ನಲ್ಲಿ ತುಂಬಾ ತಮಾಷೆ ಮಾಡ್ತಿದ್ರು. ಆದರೆ ಅಪರ್ಣಾ ದೊಡ್ಡ ಸಂಸ್ಕಾರವಂತರಾಗಿದ್ದರು. ಮಾತೃತ್ವದ ಹೆಣ್ಣು ಅವರಾಗಿದ್ದರು. ನಾವು ಆಸ್ಟ್ರೇಲಿಯಾಗೆ ಹೋಗಿದ್ದ ಸಂದರ್ಭ ಯಾವಾಗಲೂ ತುಂಬಾ ಕಾಡುತ್ತೆ. ತಮಾಷೆಯನ್ನೂ ಸಹ ಶುದ್ಧ ಕನ್ನಡದಲ್ಲೇ ಮಾಡ್ತಿದ್ರು. ಅವರ ತಂದೆ ದೊಡ್ಡ ಪತ್ರಕರ್ತರು. ಅಪ್ಪನ ಹೆಸರು, ಮಾತಿನ ಧಾಟಿ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡ ಮಗಳು ಆಕೆ. ಅಪರ್ಣಾರ ಧ್ವನಿಯೇ ವಿಶೇಷ. ಆಕೆಯ ಸಂದರ್ಶನ, ಆಕೆ ನಡೆಸಿಕೊಟ್ಟ ಕಾರ್ಯಕ್ರಮಗಳು ಅದ್ಭುತ, ಮತ್ತೆ ಮತ್ತೆ ಕೆಳಬೇಕೆನಿಸುತ್ತೆ ಆ ಧ್ವನಿ..
 

Latest Videos
Follow Us:
Download App:
  • android
  • ios