ಒಂದೊಳ್ಳೆ ಕಾರಣಕ್ಕೆ ಪ್ರೀತಿಯಿಂದ ಬೆಳೆಸಿದ ಕೂದಲು ದಾನ ಮಾಡಿದ ಅನುಪಮಾ ಗೌಡ
ನಟಿ, ನಿರೂಪಕಿ ಅನುಪಮಾ ಗೌಡ ಪ್ರೀತಿಯಿಂದ ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. ಈ ಬಗ್ಗೆ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕಿರುತೆರೆಯ ಖ್ಯಾತ ನಟಿ, ನಿರೂಪಕಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ(Anupama Gowda) ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ. ಪ್ರೀತಿಯಿಂದ ಬೆಳೆಸಿದ ಉದ್ದ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅಂದಹಾಗೆ ಅನುಪಮಾ ಗೌಡ ವರ್ಷಗಳಿಂದ ಬೆಳೆಸಿದ್ದ ಸುಂದರ ಕೂದಲಿಗೆ ಕತ್ತರಿ ಹಾಕಿದ್ದು ಕ್ಯಾನ್ಸರ್ ರೋಗಿಗಳಿಗೆ ದಾನ(Donate Her Hair To Cancer Patients) ಮಾಡುವ ಉದ್ದೇಶದಿಂದ. ಈ ಮೂಲಕ ಅನುಪಮಾ ಎಲ್ಲರಿಗೂ ಮಾದರಿ ಆಗುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕೂದಲು ಕತ್ತರಿಸಿರುವುದನ್ನು ಕೈಯಲ್ಲಿ ಹಿಡಿದು ದೀರ್ಘವಾದ ಪೋಸ್ಟ್ ಹಾಕಿದ್ದಾರೆ.
ಅನುಪಮಾ ಪೋಸ್ಟ್ ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ವೇತಾ ಚಂಗಪ್ಪ, ವಾಸುಕಿ ವೈಭವ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ನಲ್ಲಿ ಅನುಪಮಾ ಗೌಡ, 'ನನ್ನ ಕೂದಲು ಸಹ ನನ್ನ ಪಯಣದ ಒಂದು ಭಾಗವಾಗಿದೆ. ಇವತ್ತು ಇದನ್ನ ನನ್ನ ಆತ್ಮವಿಶ್ವಾಸದ ಸಂತಸವನ್ನು ಅಗತ್ಯವಿರೋರಿಗೆ ದಾನ ಮಾಡಲು ಸಂತೋಷವಾಗುತ್ತಿದೆ. ನಾನು ದೀರ್ಘ ಸಮಯದಿಂದ ಕುದಲಿಗೆ ಕತ್ತರಿ ಹಾಕಿರಲಿಲ್ಲ ಮತ್ತು ತುಂಬಾ ಪ್ರೀತಿಯಿಂದ ಬೆಳೆಸಿದ್ದೆ. ಅಲ್ಲಿರುವ ನನ್ನ ಅದ್ಭುತ ಹೋರಾಟಗಾರರಿಗೆ ನನ್ನ ಕೈಲಾದಷ್ಟು ಮಾಡುವ ಸಮಯ ಇದು. ಇದು ಅವರ ಜೀವನದಲ್ಲಿ ಒಂದು ಸಣ್ಣ ಸಂತೋಷವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವ ಸಂಸ್ಥೆಗೆ ದಾನ ಮಾಡಿದ್ದೇನೆ. ಈ ಪೋಸ್ಟ್ ಅನ್ನು ನಾನು ಹಾಕುತ್ತಿರುವ ಉದ್ದೇಶ ಇನ್ನಷ್ಟು ಜನರಿಗೆ ಪ್ರೇರಣೆ ಆಗಲಿ' ಎಂದು ಬರೆದುಕೊಂಡಿದ್ದಾರೆ.
ಅನುಪಮಾ ಗೌಡ ಸದ್ಯ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಬಳಿಕ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿರುವ ಅನುಪಮಾ ಗೌಡ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುವ ಮೂಲಕ ಸ್ಟಾರ್ ನಿರೂಪಕಿಯಾಗಿ ಹೊರಹೊಮ್ಮಿದ್ದಾರೆ. ಸದ್ಯ ಕನ್ನಡ ಕಿರುತೆರೆಯ ಬೇಡಿಕೆಯ ನಿರೂಪಕರಲ್ಲಿ ಅನುಪಮಾ ಗೌಡ ಕೂಡ ಒಬ್ಬರಾಗಿದ್ದಾರೆ.
1 ಶರ್ಟ್‌ಗೆ 1 ರೂಪಾಯಿ ಕೊಡುತ್ತಿದ್ದರು, ನಿರೂಪಕಿ ಅನುಪಮಾ ಜೀವನದ ಕಥೆ ಹೇಳಿದ ತಾಯಿ!
ಇನ್ನು ಅನುಪಮಾ ಅವರ ಬಣ್ಣದ ಲೋಕದ ಪಯಣದ ಬಗ್ಗೆ ಹೇಳುವುದಾದರೆ ಹಳ್ಳಿ ದುನಿಯಾ ಶೋ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಬಳಿಕ ಚಿ ಸೌ ಸಾವಿತ್ರಿ ಎನ್ನುವ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅಕ್ಕ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಈ ಧಾರಾವಾಹಿ ಅನುಪಮಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡರು. ಬಿಗ್ ಬಾಸ್ ನಲ್ಲೂ ಅನುಪಮಾ ಉತ್ತಮ ಪ್ರದರ್ಶನ ನಡುವ ನೀಡುವ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಬಿಗ್ ಬಾಸ್ ನಿಂದ ಹೊರಬರುತ್ತಿದ್ದಂತೆ ಅನುಪಮಾ ನಿರೂಪಕಿಯಾಗಿ ಕಲರ್ಸ ಕನ್ನಡ ವೇದಿಕೆ ಏರಿದರು. ನಿರೂಪಣೆ ಅನುಪಮಾ ವೃತ್ತಿ ಜೀವನಕ್ಕೆ ಮತ್ತೊಂದು ದೊಡ್ಡ ತಿರವು ನೀಡಿತು.
ಸ್ಯಾಂಡಲ್‌ವುಡ್ ನಟಿಯರ ಐಕಾನಿಕ್ ಲುಕ್ ರೀ-ಕ್ರಿಯೇಟ್ ಮಾಡಿದ ಕಿರುತೆರೆ ಚೆಲುವೆಯರು!
ಮಜಾ ಭಾರತ, ರಾಜಾ ರಾಣಿ ಮತ್ತು ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಿರೂಪಣೆ ಮೂಲಕ ಅನುಪಮಾ ಮತ್ತಷ್ಟು ಜನರ ಹೃದಯ ಗೆದ್ದರು. ಸದ್ಯ ನಮ್ಮಮ್ಮ ಸೂಪರ್ ಸ್ಟಾರ್ ಶೋ ಮುಕ್ತಾಯವಾಗಿದ್ದು ಮುಂದಿನ ಯಾವ ಶೋ ಮೂಲಕ ಪ್ರೇಕ್ಷಕರ ಮುಂದೆ ಬರ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ನಗಾರಿ, ಆ ಕರಾಳ ರಾತ್ರಿ, ತ್ರಯಂಬಕ, ಬೆಂಕಿಯಲ್ಲಿ ಅರಳಿದ ಹೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಕರಾಳ ರಾತ್ರಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.