'ವಿಲನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಆ್ಯಮಿ ಚಾಕ್ಸನ್ ತಾಯಿತನವನ್ನು ಸಂಭ್ರಮಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಗನೊಂದಿಗೆ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮಗು ಹುಟ್ಟುವ ಮೊದಲೇ ಲ್ಯಾವೀಶ್ ಜೆಂಡರ್ ಪಾರ್ಟಿ ಮಾಡಿ ವಿಡಿಯೋ ಮೂಲಕ ತನ್ನ ಅಭಿಮಾನಿಗಳಿಗೆ ಹುಟ್ಟುವುದು ಮಗನೇ ಎಂದು ಬಹಿರಂಗಪಡಿಸಿದ್ದರು. ಇಷ್ಟು ದಿನ ಹಾಟ್ ಸೆಲೆಬ್ರಿಟಿ ಪಟ್ಟದಲ್ಲಿದ್ದ ಆ್ಯಮಿ ಇದೀಗ ಹಾಟ್ ಮಮ್ಮಿ ಸೆಲೆಬ್ರಿಟಿ ಪಟ್ಟಿಗೆ ಸೇರಿದ್ದಾರೆ.

 

 
 
 
 
 
 
 
 
 
 
 
 
 

Light of my life ❤️

A post shared by Amy Jackson (@iamamyjackson) on Nov 21, 2019 at 7:26am PST

ಸೆಪ್ಟೆಂಬರ್ 23ರಂದು ಹೊಸ ಅಥಿತಿಯನ್ನು ಬರ ಮಾಡಿಕೊಂಡ 'ಮಿಸ್ ವರ್ಲ್ಡ್ ಟೀನ್' ಪಟ್ಟ ಗಿಟ್ಟಿಸಿಕೊಂಡ ಮಾಡಲೆ ಕಮ್ ನಟಿ, ಮಗ ಆ್ಯಂಡ್ರಿಯಾನನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಮೊದಲ ಮಗುವಾದ ಕಾರಣ ಆ್ಯಂಡ್ರಿಯಾ ತಮ್ಮ ಪೋಷಕರ ಸಂಪೂರ್ಣ ಗಮನ ಪಡೆದುಕೊಳ್ಳುತ್ತಿದ್ದಾನೆ.

ಪ್ರಗ್ನೆನ್ಸಿಯಲ್ಲಿ ಇವೆಲ್ಲಾ ಕಾಮನ್; ಟಾಪ್‌ಲೆಸ್ ಆಗಿ ನಿಂತ ಹೆಬ್ಬುಲಿ ನಟಿ!

ಜಾರ್ಜ್‌ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಆ್ಯಮಿ ಚಾಕ್ಸನ್ ಈ ವರ್ಷದ ಆದಿಯಲ್ಲಿಯೇ ಬಹಿರಂಗ ಪಡಿಸಿದ್ದರು. ಕೆಲವು ಮೂಲಗಳ ಪ್ರಕಾರ 2020ರಲ್ಲಿ ಆ್ಯಮಿ ಚಾಕ್ಸನ್ ಮತ್ತು ಜಾರ್ಜ್‌ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರಿಬ್ಬರ ಟ್ರೆಡಿಷನಲ್‌ ಮದುವೆಗೆ ಮಗನೂ ಸಾಕ್ಷಿಯಾಗಲಿದ್ದಾನೆ.