Asianet Suvarna News Asianet Suvarna News

ಭಾರತಕ್ಕೆ ಬರ್ತಿದ್ದಹಾಗೆ ಇಂಡಿಯಾ ಗೇಟ್ ಮುಂದೆ 'ಬಾಯ್ ಫ್ರೆಂಡ್'ಗೆ ಲಿಪ್‌ ಕಿಸ್ ಕೊಟ್ಟ ವಿಲನ್ ನಟಿ ಆ್ಯಮಿ

 ಭಾರತಕ್ಕೆ ಬರ್ತಿದ್ದಹಾಗೆ ಇಂಡಿಯಾ ಗೇಟ್ ಮುಂದೆ 'ಬಾಯ್ ಫ್ರೆಂಡ್'ಗೆ ಲಿಪ್‌ ಕಿಸ್ ಕೊಟ್ಟ ವಿಲನ್ ನಟಿ ಆ್ಯಮಿ ಜಾಕ್ಸನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅನೇಕ ವರ್ಷಗಳ ಬಳಿಕ ಆ್ಯಮಿ ಭಾರತಕ್ಕೆ ಬಂದಿದ್ದಾರೆ.

Amy Jackson shares a kiss with boyfriend Ed Westwick at Gateway of India sgk
Author
First Published Jul 22, 2023, 6:17 PM IST

ವಿಲನ್.. ಶಿವಣ್ಣ - ಕಿಚ್ಚ ಸುದೀಪ್ ನಟನೆಯ ಮೆಗಾ ಕಾಂಬೋ ಪಿಚ್ಚರ್. ಆ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದು ಆ್ಯಮಿ ಜಾಕ್ಸನ್. ಚೊಚ್ಚಲ ಕನ್ನಡ ಸಿನಿಮಾವಾದ್ರೂ ನಟನೆ, ಸೌಂದರ್ಯದಿಂದ ಉಬ್ಬೇರಿಸಿದ್ರು. ಅಂದ್ಹಾಗೆ ವಿಲನ್ ರಿಲೀಸ್ ಆಗಿದ್ದೇ ಆಯ್ತು, ಆನಂತರದಲ್ಲಿ ಆ್ಯಮಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಬಳಿಕ ಗರ್ಭಿಣಿ ಎನ್ನುವ ಸುದ್ದಿ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಸುದ್ದಿ ನೀಡಿದರು. ಬಳಿಕ ಮಗುವಿನ ಜೊತೆ ಸಮಯ ಕಳೆಯುತ್ತಿದ್ದ ನಟಿ ಆ್ಯಮಿ ಸಿನಿಮಾರಂಗದಿಂದ ದೂರ ಇದ್ದರು. ಅಷ್ಟೆಯಲ್ಲದೆ ಭಾರತದ ಕಡೆ ಮುಖಮಾಡಿರಲಿಲ್ಲ. ಇದೀಗ ಅನೇಕ ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾರೆ. 

ಐದು ವರ್ಷಗಳ ಲಾಂಗ್ ಗ್ಯಾಪ್ ಬಳಿಕ 'ವಿಲನ್' ನಟಿ ಆ್ಯಮಿ ಜಾಕ್ಸನ್ ಭಾರತಕ್ಕೆ ವಾಪಸ್ಸಾಗಿದ್ದಾರೆ. ಆ್ಯಮಿ ಇಂಡಿಯಾಗೆ ವಾಪಸ್ಸಾದ ಸುದ್ದಿ ಕೇಳಿ ಅಭಿಮಾನಿಗಳು ಖುಷಿ‌ಪಟ್ಟಿದ್ರು. ಇತ್ತ ಆ್ಯಮಿಯೂ ಇಷ್ಟದೂರ ಬಂದಿರೋ ಬಗ್ಗೆ ಖುಷಿ ಹಂಚಿಕೊಂಡಿದ್ರು. ಭಾರತಕ್ಕೆ ಮರಳುವ ಕ್ಷಣಕ್ಕಾಗಿ ನಾನು ಕಾಯ್ತಿದ್ದೆ ಅಂತಾ ಹೇಳಿದ್ರು. ಇದೀಗ ಆ್ಯಮಿ ತನ್ನಿಷ್ಟದ ಜಾಗಗಳಿಗೆ ಭೇಟಿ ಕೊಡೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಬರೀ ಆ್ಯಮಿ ಒಬ್ಬರೇ ಅಲ್ಲ, ಅವರೊಟ್ಟಿಗೆ ಬಾಯ್ ಫ್ರೆಂಡ್ ಕೂಡ ಸುತ್ತಾಟಕ್ಕೆ ಜೊತೆಯಾಗಿದ್ದಾರೆ.

ಬಿಟ್ರನ್ ಗೆಳೆಯ ಎಡ್ ವೆಸ್ಟ್‌ವಿಕ್ ಜೊತೆ ನೆನ್ನೆ ಮುಂಬೈನ ಇಂಡಿಯಾ ಗೇಟ್‌ಗೆ ವಿಸಿಟ್ ಮಾಡಿದ್ದಾರೆ. ಬರೀ ಭೇಟಿ ಕೊಡೋದಲ್ದೇ ಇಂಡಿಯಾ ಮುಂದೆಯೇ ಹಸಿ - ಬಿಸಿ ಚುಂಬನವನ್ನೂ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅಭಿಮಾನಿಗಳು ಉಬ್ಬೇರಿಸುವಂತೆ ಮಾಡಿದ್ದಾರೆ. ಅಂದ್ಹಾಗೆ ಆ್ಯಮಿ ಗೆಳೆಯ ಎಡ್ ಕೂಡ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡವ್ರು. ಬ್ರಿಟಿಷ್ ಆ್ಯಕ್ಟರ್ ಆಗಿತೋ ಎಡ್ 'ಗಾಸಿಪ್ ಗರ್ಲ್' ಅನ್ನೋ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.‌ ಇದೀಗ ಗೆಳೆತಿ ಆ್ಯಮಿ ಜೊತೆ ಇಂಡಿಯಾಗೆ ಬಂದಿರೋ ಎಡ್ ಮತ್ತಷ್ಟು ಪ್ರಸಿದ್ಧ ಭಾಗಗಳನ್ನು ಎಕ್ಸ್ಪ್ಲೋರ್ ಮಾಡೋ ಕೌತುಕದಲ್ಲಿದ್ದಾರೆ.

ಅನೇಕ ವರ್ಷಗಳ ನಂತ್ರ ಇಂಡಿಯಾಗೆ ಕಾಲಿಟ್ಟ 'ವಿಲನ್' ನಾಯಕಿ ಆ್ಯಮಿ ಜಾಕ್ಸನ್

ತಮಿಳಿನ 'ಮಿಷನ್ ಚಾಪ್ಟರ್ 1- ಅಚಂ ಎನ್ಬತ್ತು ಇಲ್ಲೈ' ಸಿನಿಮಾ ಕಂಪ್ಲೀಟ್ ಆಗಿದ್ದು, ಬಣ್ಣದ ಮೂಲಕ ಮತ್ತೆ ಜನರೆದುರು ಬರೋ ಸೂಚನೆ ಕೊಟ್ಟಿದ್ದಾರೆ. ಕೊನೆಯದಾಗಿ ಆ್ಯಮಿ ಜಾಕ್ಸನ್ ದಿ ವಿಲನ್ ಸಿನಿಮಾ ಮೂಲಕ ಕಾಣಿಸಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟಿಸಿದ್ದರು. ಈ ಸಿನಿಮಾ ಬಳಿಕ ಅ್ಯಮಿ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ.

 
 
 
 
 
 
 
 
 
 
 
 
 
 
 

A post shared by Amy Jackson (@iamamyjackson)

ಎಲ್ಲಿ ನೋಡಿದ್ರೂ ಮುತ್ತು ಕೊಡೋದೇ; ಜೋಗಿ ಪ್ರೇಮ್ ನಾಯಕಿ ಆ್ಯಮಿ ಜಾಕ್ಸನ್‌ ಕಾಲೆಳೆದ ನೆಟ್ಟಿಗರು

ಮದ್ರಾಸಪಟ್ಟಿನಂ ಎನ್ನುವ ತಮಿಳು ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಕಾಣಿಸಿಕಂಡರು. ಬಳಿಕ ಹಿಂದಿಗೆ ಹಾರಿದರು. ಬಳಿಕ ತಮಿಳು ಮತ್ತು ತೆಲುಗು ಎರಡು ಸಿನಿಮಾಗಳಲ್ಲಿ ಬ್ಯುಸಿಯಾದರು. ಬಳಿಕ ದಿಢೀರ್ ಮಗುಮಾಡಿಕೊಂಡು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ ಆ್ಯಮಿ. ಇದೀಗ ಮತ್ತೆ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ.    

Follow Us:
Download App:
  • android
  • ios