ವಿವಾಹ ವಾರ್ಷಿಕೋತ್ಸವ ದಿನದಂದು ಆಕ್ಸಿಜನ್ ಸಿಲಿಂಡರ್ ದಾನ ಮಾಡಿದ ನಟಿ ಅಮೃತಾ ರಾವ್!

ವಿವಾಹ ವಾರ್ಷಿಕೋತ್ಸವವನ್ನು ಈ ವರ್ಷ ಬೇರೆಯೇ ರೀತಿ ಆಚರಿಸಲು ನಟಿ ಅಮೃತಾ ರಾವ್‌ ಮುಂದಾಗಿದ್ದಾರೆ. 

Amrita Rao and Rj Anmol mark their Wedding Anniversary by a pledge to donate oxygen cylinders vcs

ಬಾಲಿವುಡ್ ನಟಿ ಅಮೃತಾ ಹಾಗೂ ಆರ್‌ಜೆ ಅನ್‌ಮೋಲ್‌ ತಮ್ಮ ವಿವಾಹ ವಾರ್ಷಿಕೋತ್ಸವನ್ನು ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

'ಈ ವರ್ಷದ ವಿವಾಹ ವಾರ್ಷಿಕೋತ್ಸವದ ದಿನದಂದು ನಾವು ಜನರಿಗೆ ಆಕ್ಸಿಜನ್ ಸಿಲಿಂಡರ್‌ ದಾನ ಮಾಡುವುದಾಗಿ ನಿರ್ಧಾರಿಸಿದ್ದೇವೆ. ಈಗ ಹಂಚಿಕೊಂಡಿರುವ ಪೋಟೋ ತುಂಬಾ ದಿನಗಳ ಹಿಂದೆ ಕ್ಲಿಕ್ ಮಾಡಿದ್ದು. ಕಳೆದ ತಿಂಗಳಿಂದ ನಾವು ಆಕ್ಸಿಜರ್ಮನಿ ಮುಂಬೈ ತಂಡದ ಜೊತೆ ಕೆಲಸ ಮಾಡುತ್ತಿರುವೆವು. ನೀವೆಲ್ಲರೂ ನಮಗೆ ಸಹಕರಿಸಿದ್ದೀರಾ. ದಯವಿಟ್ಟು ಹೀಗೆ ಮುಂದುವರೆಸಿ...' ಎಂದು ಬರೆದುಕೊಂಡು ಲಿಂಕ್ ಶೇರ್ ಮಾಡಿಕೊಂಡಿದ್ದಾರೆ. 

Amrita Rao and Rj Anmol mark their Wedding Anniversary by a pledge to donate oxygen cylinders vcs

2013ರಲ್ಲಿ 'ಸತ್ಯಾಗ್ರಹ' ಹಾಗೂ 2019ರಲ್ಲಿ ಬಿಡುಗಡೆಯಾದ 'ಠಾಕ್ರೆ' ಚಿತ್ರದಲ್ಲಿ ಅಮೃತಾ ಅಭಿನಯಿಸಿದ್ದಾರೆ. 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ  ನಂತರ ಸಿನಿಮಾರಂಗಕ್ಕೆ ಬೈ ಹೇಳಿದ್ದರು. ಅಮೃತಾಗೆ ಒಂದು ಮಗುವಿಗೆ ತಾಯಿ ಆಗಿ ವೈವಾಹಿಕ ಜೀವದಲ್ಲಿ ಬ್ಯುಸಿಯಾಗಿದ್ದರು. ಇದೀಗ ಸಮಾಜ ಸೇವೆ ಮೂಲಕ ಜನರ ನಡುವೆ ಕಾಣಿಸಿಕೊಂಡು ಮತ್ತೆ ಗುರುತಿಸಿಕೊಳ್ಳುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ಬಳಿ 'ಶ್ವಾಸ' ಸೇವೆ ಲಭ್ಯ; ನಟ ಭುವನ್, ನಟಿ ಹರ್ಷಿಕಾ ಸಮಾಜ ಸೇವೆ! 

Latest Videos
Follow Us:
Download App:
  • android
  • ios