ಖೇಲ್ ಖತಂ, ಹಣ ಹೋಯ್ತು, ಏನ್ಮಾಡಲಿ ಈಗ? ಎಲಾನ್ ಮಸ್ಕ್ ವಿರುದ್ಧ ಬಿಗ್ ಬಿ ಅಮಿತಾಭ್ ಬಚ್ಚನ್ ಅಸಮಾಧಾನ

ಖೇಲ್ ಖತಂ, ಹಣ ಹೋಯ್ತು, ಏನ್ಮಾಡ್ಲಿ ಈಗ? ಎಂದು ಅಮಿತಾಭ್ ಬಚ್ಚನ್, ಎಲಾನ್ ಮಸ್ಕ್ ವಿರುದ್ಧ  ಅಸಮಾಧಾನ ಹೊರಹಾಕಿದ್ದಾರೆ.

Amitabh Bachchan wants Elon Musk to refund money he paid for Blue Tick and says Paisa hajam sgk

ಅನೇಕ ಸೆಲೆಬ್ರಿಟಿಗಳ ಟ್ವಿಟ್ಟರ್ ಬ್ಲೂ ಕಿಟ್ ಮಾಯವಾಗಿತ್ತು. ಒಂದು ದಿನದ ಬಳಿಕ ಮತ್ತೆ ಅನೇಕ ಗಣ್ಯರು ಬ್ಲೂ ಟಿಕ್ ವಾಪಾಸ್ ಆಗಿತ್ತು. ಬ್ಲೂಟಿಕ್ ಪಡೆಯಲು ಶುಲ್ಕ ಪಾವತಿಸದ ಕಾರಣ ಬಹುತೇಕ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿತ್ತು. ಸ್ಟಾರ್‌ಗಳಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಸುದೀಪ್, ಯಶ್ ಸೇರಿದಂತೆ ಅನೇಕ ಕಲಾವಿದರ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯವಾಗಿತ್ತು. ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಬ್ಲೂಟಿಕ್ ಹೊಂದಲು ಶುಲ್ಕ ವಿಧಿಸಲಾಗಿತ್ತು. ಶುಲ್ಕ ಪಾವತಿಸದೆ ಇದ್ದವರ ಬ್ಲೂ ಟಿಕ್ ಅನ್ನು ಕಿತ್ತುಕೊಳ್ಳಲಾಗಿತ್ತು. ಈ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಅಮಿತಾಭ್ ಬಚ್ಚನ್ ಸಾಲು ಸಾಲು ಟ್ವೀಟ್ ಮಾಡಿದ್ದರು. 

ಇದೀಗ ಎಲಾನ್ ಮಸ್ಕ್ ಮತ್ತೆ ನಿಯಮ ಬದಲಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ನಟ ಅಮಿತಾಭ್ ಬಚ್ಚನ್ ಅಸಮಾಧಾನ ಹೊರಹಾಕಿದ್ದಾರೆ. ‘ನಾನು ದುಡ್ಡು ಕಳೆದುಕೊಂಡೆ’ ಎಂದು ಅವರು ಹೇಳಿದ್ದಾರೆ. ಖೇಲ್ ಖತಮ್, ಹಣ ಹೋಯ್ತು ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ. 

ಹೊಸ ಸಿನಿಮಾದ ಪ್ರಕಾರ 1 ಮಿಲಿಯನ್ ಅಂದರೆ 10 ಲಕ್ಷಕ್ಕಿಂತ ಅಧಿಕ ಹಿಂಬಾಲಕರು ಇರುವ ಟ್ವಿಟರ್​ ಬಳಕೆದಾರರ ಖಾತೆಯಲ್ಲಿ ಬ್ಲೂಟಿಕ್ ಹಾಗೆಯೇ ಉಳಿಯುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಹಾಗಾಗಿ 1 ಮಿಲಿಯನ್​ಗಿಂತ ಅಧಿಕ ಫಾಲೋವರ್ಸ್ ಇರುವವರ ಖಾತೆಗೆ ಬ್ಲೂಟಿಕ್ ಮರಳಿದೆ. ಆದರೆ ಅಮಿತಾಭ್ ಆಗಲೇ ಹಣ ಪಾವತಿಸಿದ್ದರು. ಇದರಿಂದ ಬಚ್ಚನ್ ಬೇಸರಗೊಂಡಿದ್ದಾರೆ. 

ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಮಾಯ; ಸಿನಿ ಸೆಲೆಬ್ರಿಟಗಳ ರಿಯಾಕ್ಷನ್ ಹೀಗಿದೆ

ಬ್ಲೂಟಿಕ್ ಪಡೆಯಲು ಮಿತಾಭ್ ಹಣ ಪಾವತಿಸಿದ ಬಳಿಕ ಮಸ್ಕ್ ಕಡೆಯಿಂದ ಹೊಸ ಘೋಷಣೆ ಆಗಿದೆ. ‘ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎಂದು ಹೇಳಿದ್ರಿ. ನಾನು ಹಣ ಪಾವತಿಸಿದೆ. ಆದರೀಗ 1 ಮಿಲಿಯನ್​ಗಿಂತ ಹೆಚ್ಚಿನ ಹಿಂಬಾಲಕರಿದ್ದರೆ ಬ್ಲೂಟಿಕ್​ ಹಾಗೆಯೇ ಇರುತ್ತದೆ ಎಂದು ಈಗ ನೀವು ಹೇಳುತ್ತಿದ್ದೀರಿ. ನನಗೆ 48.4 ಮಿಲಿಯನ್ ಹಿಂಬಾಲಕರಿದ್ದಾರೆ. ನನ್ನ ಹಣ ಈಗಾಗಲೇ ಹೋಗಿದೆ. ನಾನೀಗ ಏನು ಮಾಡಬೇಕು?’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ. 'ನಾನೀಗ ಒಂದು ಹಾಡನ್ನು ಹೇಳುವುದಾ. ಅದನ್ನು ನೀವು ಕೇಳಿಸಿಕೊಳ್ಳಲು ರೆಡಿ ಇದ್ದೀರಾ?' ಎಂದು ಅಮಿತಾಭ್ ಪ್ರಶ್ನೆ ಮಾಡಿದ್ದಾರೆ.

ಟ್ವಿಟರ್ ಹೊಸ ನಿಯಮದಿಂದ ತಲೆ ಕೆಡಿಸಿಕೊಂಡ ಬಿಗ್ ಸ್ಟಾರ್ .. ಬ್ಲೂಟಿಕ್‌ ಬೇಕು ಅಂದ್ರೆ ಪಾವತಿಸಬೇಕು ದುಡ್ಡು.!

ಟ್ವಿಟ್ಟರ್ ಬ್ಲೂಟಿಕ್ ವಿಚಾರದಲ್ಲಿ ಈಗ ಅನೇಕ ಗೊಂದಲಗಳು ಮೂಡಿವೆ. ಎಲಾನ್ ಮಾಸ್ಕ್ ದಿನಕ್ಕೊಂದು ನಿಮಯ ಟ್ವಿಟ್ಟರ್ ಬಳಕೆದಾರರ ಕಿರಿಕಿರಿಗೆ ಕಾರಣವಾಗಿದೆ. ಇನ್ಮುಂದೆ ಟ್ವಿಟ್ಟರ್ ಬ್ಲೂ ಟಿಕ್ ಎಲ್ಲರ ಸೆಲೆಬ್ರಿಟಿಗಳ ಖಾತೆಯಲ್ಲಿ ಮುಂದುವರೆಯುತ್ತಾ ಅಥವಾ ಮಸ್ಕ್ ಮತ್ತೊಂದು ನಿಯಮ ಜಾರಿ ಮಾಡಿ ಇನ್ನೋನು ಮಾಡ್ತಾರೋ ಗೊತ್ತಿಲ್ಲ.    

Latest Videos
Follow Us:
Download App:
  • android
  • ios