ಮುಂಬೈ(ಜ.13): ಜನವರಿ 24ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ 16 ಆಟಗಾರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಗೆ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದರೆ, ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ.

ನ್ಯೂಜಿಲೆಂಡ್ ಪ್ರವಾಸಕ್ಕೆ ಬಲಿಷ್ಠ ಭಾರತ ತಂಡ ಪ್ರಕಟ!

ಬರೋಬ್ಬರಿ ನಾಲ್ಕುವರೆ ವರ್ಷಗಳ ಬಳಿಕ ತಂಡ ಕೂಡಿಕೊಂಡಿದ್ದ ಸಂಜು ಸ್ಯಾಮ್ಸನ್'ಗೆ ಲಂಕಾ ವಿರುದ್ಧ ಜನವರಿ 10ರಂದು ನಡೆದ ಕೊನೆಯ ಟಿ20 ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು. ಲಂಕಾ ವಿರುದ್ಧ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್'ಗಟ್ಟುವಲ್ಲಿ ಸ್ಯಾಮ್ಸನ್ ಯಶಸ್ವಿಯಾಗಿದ್ದರು. ಆದರೆ ಮರು ಓವರ್'ನಲ್ಲಿನ ಮೊದಲ ಎಸೆತದಲ್ಲೇ ಎಲ್'ಬಿ ಬಲೆಗೆ ಬಿದ್ದು ನಿರಾಸೆಯೊಂದಿಗೆ ಪೆವಿಲಿಯನ್ ಸೇರಿದ್ದರು. ಅಂದಹಾಗೆ ಸಂಜು 2015ರ ಜೂನ್'ನಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಇದಾಗಿ ಮೂರ್ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಆಯ್ಕೆ ಮಾಡಿತಾದರೂ ಸಂಜುಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಕೇವಲ ಎರಡು ಎಸೆತ ಆಡಿದ್ದಕ್ಕೆ ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

6 ತಿಂಗಳಿನಿಂದ ಕಾಡ್ತಿದೆ ಧೋನಿಗೆ 'ಆ' ಒಂದು ನೆನಪು..!

ಕೇವಲ ಒಂದು ಮ್ಯಾಚ್ ಆಡಲು ಅವಕಾಶ ನೀಡಿ ಆ ನಂತರ ಕೈಬಿಟ್ಟಿದ್ದು ಎಷ್ಟು ಸರಿ? ಮೊದಲ ಪಂದ್ಯದ ಬಳಿಕ ಶಿವಂ ದುಬೆ ಅವರನ್ನು ಕೈಬಿಟ್ಟಿದ್ದರೆ, ಆತನ ಸ್ಕೋರ್ 10+ ರನ್'ಗಳಿಗಿಂತ ಹೆಚ್ಚಿಗೆ ಆಗುತ್ತಿರಲಿಲ್ಲ ಎಂದು ಆಯ್ಕೆ ಸಮಿಯನ್ನು ಒಬ್ಬರು ಪ್ರಶ್ನಿಸಿದ್ದಾರೆ.

ಮತ್ತೊಬ್ಬರು 5 ವರ್ಷಗಳ ಅಂತರದಲ್ಲಿ ಕೇವಲ ಎರಡು ಬಾಲ್ ಆಡಲು ಅವಕಾಶ ನೀಡಿ ಆ ನಂತರ ತಂಡದಿಂದ ಹೊರಹಾಕಿದ್ದೀರ. ಈಗ ನಿಮಗೆ ನೀರು ತಂದು ಕೊಡುವವರು ಯಾರು ಎಂದು ವ್ಯಂಗ್ಯವಾಡಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದ ವೇಳೆ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಟಿ20 ಸರಣಿಯ ಮೊದಲ ಪಂದ್ಯ ಜನವರಿ 24ರಿಂದ ಆರಂಭವಾಗಲಿದೆ. ಇನ್ನುಇದಾದ ಬಳಿಕ ಕಿವೀಸ್ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್'ಶಿಪ್ ಆಡಲಿದೆ.

ಇನ್ನು ಲಂಕಾ ವಿರುದ್ಧದ ಸರಣಿಗೆ ತಂಡ ಸೇರಿಕೊಂಡಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಕಿವೀಸ್ ಪ್ರವಾಸಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳುವುದಕ್ಕೆ ಯಶಸ್ವಿಯಾಗಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ತಾನಗಿಟ್ಟಿಸಿಕೊಳ್ಳಲು ಮತ್ತೊಮ್ಮೆ ವಿಫಲರಾಗಿದ್ದಾರೆ.