ಅಮಿತಾಭ್ ಬಚ್ಚನ್ ಅವರು ತಮ್ಮ ವೃತ್ತಿಜೀವನದಲ್ಲಿ 36 ವರ್ಷ ಕಿರಿಯ ನಟಿ ಜೊತೆ ಕಿಸ್ಸಿಂಗ್ ಸೀನ್‌ನಲ್ಲಿ ನಟಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಚಿತ್ರವು 57 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತಮ್ಮ ಸಿನಿ ಕೆರಿಯರ್‌ನಲ್ಲಿ ಹಲವು ಕಲಾವಿದರೊಂದಿಗೆ ನಟಿಸಿದ್ದಾರೆ. ಇಂದಿಗೂ ಸಿನಿಮಾಗಳಲ್ಲಿಯೂ ಸಕ್ರಿಯವಾಗಿರುವ ನಟ ಅಮಿತಾಭ್ ಬಚ್ಚನ್ ಚಿತ್ರವೊಂದರಲ್ಲಿ ನಟಿಯೊಂದಿಗೆ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಆದ್ರೆ ಚಿತ್ರದ ಈ ಕಿಸ್ ಸೀನ್ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಕಾರಣ ನಟಿ ಮತ್ತು ಅಮಿತಾಭ್ ಬಚ್ಚನ್ ನಡುವಿನ ವಯಸ್ಸಿನ ಅಂತರ 36 ವರ್ಷ ಆಗಿತ್ತು. ತಮಗಿಂತ 36 ವರ್ಷದ ನಟಿಗೆ ಕಿಸ್ ಮಾಡಿದರೂ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ನಿರೀಕ್ಷೆಯಷ್ಟು ಕಲೆಕ್ಷನ್ ಮಾಡಲಿಲ್ಲ. ಆದ್ರೆ ಈ ಸಿನಿಮಾ 57 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಅಮಿತಾಭ್ ಬಚ್ಚನ್ ತಮ್ಮ ಸುದೀರ್ಘ ಚಲನಚಿತ್ರ ವೃತ್ತಿಜೀವನದಲ್ಲಿ ಪರದೆ ಮೇಲೆ ಒಮ್ಮೆ ಮಾತ್ರ ಕಿಸ್ ಮಾಡಿದ್ದಾರೆ. ಮೊದಲ ಬಾರಿಗೆ ಅಂತಹ ದೃಶ್ಯ ಮಾಡಿದಾಗ ಅಮಿತಾಭ್ ಬಚ್ಚನ್ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇಷ್ಟು ಚಿಕ್ಕ ವಯಸ್ಸಿನ ನಟಿಯೊಂದಿಗೆ ಕಿಸ್ ಮಾಡುವ ಅಗತ್ಯವಿತ್ತಾ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಟೀಕೆ ಟಿಪ್ಪಣಿಗಳ ನಡುವೆ ಬಿಡುಗಡೆಯಾದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ನಾಯಕಿ ಯಾರು ಮತ್ತು ಆ ಚಿತ್ರ ಯಾವುದು ಎಂಬುದರ ಮಾಹಿತಿ ಇಲ್ಲಿದೆ.
57 ಪ್ರಶಸ್ತಿಯನ್ನು ಪಡೆದುಕೊಂಡ ಸಿನಿಮಾ ಹೆಸರು ಬ್ಲ್ಯಾಕ್. ಈ ಚಿತ್ರದಲ್ಲಿ ನಟಿ ರಾಣಿ ಮುಖರ್ಜಿ ಜೊತೆ ಅಮಿತಾಭ್ ಬಚ್ಚನ್ ಕಿಸ್ ಮಾಡಿದ್ದರು. ಬ್ಲ್ಯಾಕ್ ಚಿತ್ರದಲ್ಲಿ ರಾಣಿ ಮುಖರ್ಜಿ ಅವರು, ನೋಡಲು, ಕೇಳಲು ಮತ್ತು ಮಾತು ಬಾರದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಇಂತಹ ಹುಡುಗಿಯ ಜೀವನದಲ್ಲಿ ಓರ್ವ ಶಿಕ್ಷಕ ಬರುತ್ತಾನೆ. ಈ ಶಿಕ್ಷಕ, ಮಾತನಾಡದೇ, ನೋಡದೇ ಮತ್ತು ಕೇಳದೆ ಎಲ್ಲವನ್ನೂ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಕಲಿಸುತ್ತಾನೆ. ಒಂದು ಸನ್ನಿವೇಶದಲ್ಲಿ ಕಿಸ್ ಅನುಭವ ಹೇಗಿರುತ್ತೆ ಎಂದು ಯುವತಿ ಕೇಳುತ್ತಾಳೆ. ಈ ಪ್ರಶ್ನೆಗೆ ಕಿಸ್ ಮಾಡಿಯೇ ತೋರಿಸುತ್ತಾರೆ. ಈ ಶಿಕ್ಷಕನ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಕಪಾಳಕ್ಕೆ ಹೊಡೆದಿದ್ದ ನಟಿ, ಸೇಡು ತೀರಿಸಿಕೊಳ್ಳೋ ಪ್ರತಿಜ್ಞೆ ಮಾಡಿದ್ರು ಬಿಗ್ ಬಿ
ರಾಣಿ ಮುಖರ್ಜಿ ಮತ್ತು ಅಮಿತಾಬ್ ಬಚ್ಚನ್ ಈ ಚಿತ್ರ ಮಾಡಿದಾಗ ಇಬ್ಬರ ವಯಸ್ಸಿನ ಅಂತರ 36 ವರ್ಷ ಆಗಿತ್ತು. ಬಾಕ್ಸ್ ಆಫಿಸ್‌ನಲ್ಲಿ ಬ್ಲ್ಯಾಕ್ ಸಿನಿಮಾ 32.21 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸ್ಯಾಟ್‌ಲೈಟ್ ರೈಟ್ಸ್ ಸೇರಿದಂತೆ ಚಿತ್ರ ಒಟ್ಟು 40.18 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಚಿತ್ರ ಗಳಿಕೆಯ ವಿಷಯದಲ್ಲಿ ಸಾಧಾರಣ ಚಿತ್ರವಾಗಿದ್ದರೂ, ಪ್ರಶಸ್ತಿಗಳನ್ನು ಗಳಿಸುವ ವಿಷಯದಲ್ಲಿ ಅತ್ಯುತ್ತಮವಾಗಿತ್ತು. IMDb ಸೈಟ್ ಪ್ರಕಾರ, ಈ ಚಿತ್ರವು ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸುಮಾರು 57 ಪ್ರಶಸ್ತಿಗಳನ್ನು ಗೆದ್ದಿದೆ.
2005ರಲ್ಲಿ ಬಿಡುಗಡೆಯಾದ ಬ್ಲ್ಯಾಕ್ ಸಿನಿಮಾವನ್ನು ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಹೆಲೆನ್ ಕೆಲ್ಲೆರ್ ಅವರ ದಿ ಸ್ಟೋರಿ ಆಫ್ ಮೈ ಲೈಫ್ ಕಾದಂಬರಿ ಆಧಾರಿತವಾಗಿತ್ತು. ಸಂಜಯ್ ಲೀಲಾ ಭನ್ಸಾಲಿ ಮತ್ತು ಅಂಶುಮಾನ್ ಸ್ವಾಮಿ ಜೊತೆಯಾಗಿ ಬಂಡವಾಳ ಹೂಡಿಕೆ ಮಾಡಿದ್ದರು. 4ನೇ ಫೆಬ್ರವರಿ 2025ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: ಕೌನ್ ಬನೇಗಾ ಕರೋಡಪತಿ ಹೊಸ ಹೋಸ್ಟ್ ಯಾರು? ಬಚ್ಚನ್ ಬದಲಿಗೆ ಬರುತ್ತಿರೋ ನಟಿ ಯಾರು?
.
