ಬಾಲಿವುಡ್‌ನ ಫೇಮಸ್ ಶೋ ಕೌನ್ ಬನೇಗಾ ಕರೋಡ್‌ ಪತಿಯಲ್ಲಿ ಅಮಿತಾಬ್ ಬಚ್ಚನ್ ಇತ್ತೀಚೆಗೆ ಮನಮುಟ್ಟುವ ಘಟನೆಯೊಂದನ್ನು ಶೇರ್ ಮಾಡಿದ್ದಾರೆ. ತನ್ನ ಯವ್ವನದಲ್ಲಿ ನಡೆದ ಘಟನೆ ಬಗ್ಗೆ ಅಮಿತಾಬ್ ಮಾತನಾಡಿದ್ದಾರೆ.

ಹಿಂದೊಮ್ಮೆ ಎರಡು ರೂಪಾಯಿ ಬೇಕು ಅಂದ್ರೂ ನನ್ನ ಕೈಯಲ್ಲಿರ್ಲಿಲ್ಲ ಎಂದಿದ್ದಾರೆ ನಟ ಅಮಿತಾಭ್ ಬಚ್ಚನ್. ಇತ್ತೀಚಿನ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬಾಲಿವುಡ್ ಬಿಗ್‌ ಬಿ ಈ ವಿಷಯ ಹೇಳಿದ್ದಾರೆ.

'ಅಂಗಾಂಗ ದಾನ ಮಾಡ್ತೇನೆ' ಬಿಗ್‌ಬಿ ಘೋಷಣೆ, ಮೆಚ್ಚುಗೆಗಳ ಮಹಾಪೂರ

ಬಾಲಿವುಡ್‌ನ ಫೇಮಸ್ ಶೋ ಕೌನ್ ಬನೇಗಾ ಕರೋಡ್‌ ಪತಿಯಲ್ಲಿ ಅಮಿತಾಬ್ ಬಚ್ಚನ್ ಇತ್ತೀಚೆಗೆ ಮನಮುಟ್ಟುವ ಘಟನೆಯೊಂದನ್ನು ಶೇರ್ ಮಾಡಿದ್ದಾರೆ. ತನ್ನ ಯವ್ವನದಲ್ಲಿ ನಡೆದ ಘಟನೆ ಬಗ್ಗೆ ಅಮಿತಾಬ್ ಮಾತನಾಡಿದ್ದಾರೆ.

ಶೋಗೆ ಬಂದ ಸ್ಪರ್ಧಿ ಆರ್ಥಿಕವಾಗಿ ಅವರ ಕುಟುಂಬ ತುಂಬ ಕಷ್ಟದಲ್ಲಿದೆ ಎಂದಾಗ ಅಮಿತಾಭ್ ಈ ಘಟನೆಯನ್ನು ಹೇಳಿದ್ದಾರೆ. ಶಾಲೆಯ ಕ್ರಿಕೆಟ್ ತಂಡಕ್ಕೆ ಸೇರಲು ಬಯಸಿದ್ರಂತೆ ಅಮಿತಾಭ್, ಆದರೆ ಸೇರೋಕಾಗಿರಲಿಲ್ಲ ಎಂದಿದ್ದಾರೆ ನಟ.

ಅಮಿತಾಬ್‌ - ಅಕ್ಷಯ್ : ಬಾಲಿವುಡ್ ಸೆಲೆಬ್ರೆಟಿಗಳ ಲ್ಯಾವಿಷ್‌ ಮನೆಗಳು!

ಶೋಗೆ ಬಂದ ಜೈ ಕುರುಕ್ಷೇತ್ರ ಎಂದಾತ ಬಾಲ್ಯದ ಸ್ಟೋರಿ ಹೇಳಿದ್ದಾನೆ. ಶಾಲೆಗೆ ಹೋಗುವ ಸಂದರ್ಭ 7 ರೂಪಾಯಿ ಸ್ನ್ಯಾಕ್ಸ್ ಕೊಳ್ಳಲು ಹಣ ನೀಡುವಷ್ಟು ಸಾಮರ್ಥ್ಯ ಅಮ್ಮನಿಗಿರಲಿಲ್ಲ ಎಂದಿದ್ದಾನೆ.

ಇದನ್ನು ಕೇಳಿದ ಅಮಿತಾಭ್ ಬಚ್ಚನ್ ತಮ್ಮ ಜೀವನದ ಘಟನೆಯನ್ನು ಹೇಳಿದ್ದಾರೆ. ಶಾಲೆಯ ಕ್ರಿಕೆಟ್ ಟೀಂ ಸೇರಲು 2 ರೂಪಾಯಿ ಬೇಕಿತ್ತು. ಆದರೆ 2 ರೂಪಾಯಿ ನೀಡಲು ಅಮಿತಾಭ್‌ಗೆ ಸಾಧ್ಯವಾಗಿರಲಿಲ್ಲ.

ಬಚ್ಚನ್ ಕುಟುಂಬದ ಸಣ್ಣ ಸೊಸೆ ಜಯಾ ಬಚ್ಚನ್ ಕೋ ಸಿಸ್ಟರ್‌ ರಮೋಲಾ ಹೇಗಿದ್ದಾರೆ ಗೊತ್ತಾ?

ಅಮಿತಾಭ್‌ ತಾಯಿ ನಮ್ಮಲ್ಲಿ ಅಷ್ಟು ಹಣ ಇಲ್ಲ ಎಂದಿದ್ದರಂತೆ. 2 ರುಪಾಯಿಯ ಮೌಲ್ಯ ಎಷ್ಟಿದೆ ಎಂದರೆ ನನಗೆ ಇಂದಿಗೂ ಆ ಘಟನೆ ನೆನಪಿದೆ ಎಂದಿದ್ದಾರೆ. ಇನ್ನು ಫೋಟೋಗ್ರಫಿ ಬಗ್ಗೆ ಅಮಿತಾಭ್‌ಗೆ ಸಿಕ್ಕಾಪಟ್ಟೆ ಇಷ್ಟವಿತ್ತಂತೆ.

ನನಗೆ ಫೋಟೋಗ್ರಫಿ ಇಷ್ಟವಿತ್ತು. ಅದರೆ ನನ್ನ ತಂದೆ ಹರಿವಂಶ ರೈ ಬಚ್ಚನ್ ಮೊದಲು ರಷ್ಯಾ ಹೋದಾಗ ಕ್ಯಾಮೆರಾ ತಂದರು . ಅದಾಗಲೇ ನಾನು ನಟನಾಗಿದ್ದೆ ಎನ್ನುತ್ತಾರೆ ಅಮಿತಾಭ್. ಈಗಲೂ ಆ ಕ್ಯಾಮೆರಾ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ. ಕೌನ್ ಬನೇಗಾ ಕರೋಡ್‌ ಪತಿಯ 12ನೇ ಸೀಸನ್ ನಡೆಯುತ್ತಿದೆ.