ಐಶ್ವರ್ಯಾ ರೈ ಬಚ್ಚನ್ ಐವತ್ತರ ಹತ್ತಿರಹತ್ತಿರ ಬಂದರೂ ಚಾರ್ಮ್ ಕಳೆದುಕೊಂಡವರಲ್ಲ. ಆದರೆ ಲೇಟ್ ಪ್ರೆಗ್ನೆನ್ಸಿ ಕಾರಣ ವೈದ್ಯರು ಸಿ ಸೆಕ್ಷನ್‌ ಮಾಡಿಕೊಳ್ಳುವಂತೆ ಹೇಳಿದರೂ ಐಶ್ ನಾರ್ಮಲ್ ಡೆಲಿವರಿಗೇ ಪಟ್ಟು ಹಿಡಿದಿದ್ದರಂತೆ. ಅದನ್ನೀಗ ನೆನೆಸಿಕೊಂಡು 'ನನ್ ಸೊಸೆ ಗಟ್ಟಿಗಿತ್ತಿ' ಅಂದಿದ್ದಾರೆ ಬಿಗ್‌ಬಿ ಅಮಿತಾಬ್ ಬಚ್ಚನ್.

ಐಶ್ವರ್ಯಾಲೇಟ್ ಪ್ರೆಗ್ನೆನ್ಸಿ ಆದ್ರೂ ನಾರ್ಮಲ್ ಡೆಲಿವರಿಯೇ ಬೇಕು ಎಂದು ಹಠ ಹಿಡಿದಿದ್ದ ಐಶ್, ಸೊಸೆ ಗಟ್ಟಿಗಿತ್ತಿ ಅಂದ ಬಿಗ್‌ಬಿ ರೈ ಬಚ್ಚನ್ ಮೊನ್ನೆ ತಾನೇ ನಲವತ್ತೊಂಭತ್ತಕ್ಕೆ ಕಾಲಿಟ್ಟರು. ಐವತ್ತರ ಹತ್ತಿರತ್ತಿರ ಬಂದರೂ ಚಾರ್ಮ್ ಕಳೆದುಕೊಂಡವರಲ್ಲ ಐಶ್. ಹಾಗಂತ ಈಕೆ ಬರೀ ಬ್ಯೂಟಿಯಲ್ಲಷ್ಟೇ ಕ್ವೀನ್ ಅಂದ್ಕೊಂಡ್ರೆ ತಪ್ಪಾಗುತ್ತೆ. ತನ್ನ ಸೊಸೆ ಎಷ್ಟೇ ನೋವಿದ್ದರೂ ಹಲ್ಲುಕಚ್ಚಿ ಸಹಿಸಿದ ಗಟ್ಟಿಗಿತ್ತಿ ಹೆಣ್ಣು ಅಂತ ಇವರ ಮಾವ ಅಮಿತಾಬ್‌ ಬಚ್ಚನ್ ಅವರೇ ಹೊಗಳಿದ್ದಾರೆ. ಅಮಿತಾಬ್ ಹಾಗೂ ಜಯಾ ಬಚ್ಚನ್ ಸೊಸೆಯನ್ನು ಹಿಂದಿನಿಂದಲೂ ಹೊಗಳುತ್ತಲೇ ಬಂದಿದ್ದಾರೆ. ಅಂಥಾ ದೊಡ್ಡ, ವಿಶ್ವಮಟ್ಟದಲ್ಲಿ ಹೆಸರಿರುವ ನಟಿಯಾದರೂ ಮನೆಯಲ್ಲಿ ಮಗಳಂಥಾ ಸೊಸೆ ಅವಳು ಅಂತ ಜಯಾ ಪಬ್ಲಿಕ್ ನಲ್ಲೇ ಶ್ಲಾಘಿಸಿದ್ದರು. ಈಕೆ ಸೊಸೆಯಾಗಿ ಸಿಕ್ಕಿದ್ದು ತನ್ನ ಪುಣ್ಯ ಅನ್ನೋ ಹಾಗೆ ಮಾತಾಡಿದ್ದರು. ಬಚ್ಚನ್ ಅವರದು ಕೂಡು ಕುಟುಂಬ. ತಾನಷ್ಟು ದೊಡ್ಡ ನಟಿಯಾದರೂ ಐಶ್ ಆ ಕುಟುಂಬದಲ್ಲೇ ಒಂದಾಗಿ ಬದುಕಿದವರು. ಅಷ್ಟೇ ಅಲ್ಲ, ತನ್ನ ಮಗಳು ಆರಾಧ್ಯಗೆ ಈಕೆಯೇ ಕೂತು ಹೋಂವರ್ಕ್ ಮಾಡಿಸುತ್ತಾರೆ. ಆಕೆಯ ಜೊತೆಗೆ ಸಮಯ ಕಳೆಯುತ್ತಾರೆ. ಅತ್ತೆ ಮಾವನನ್ನು ಆಧರಿಸುತ್ತಾರೆ. ಗಂಡನ ಜೊತೆಗೂ ಚೆನ್ನಾಗಿದ್ದಾರೆ. ಈ ಬಗ್ಗೆ ಮೆಚ್ಚುಗೆ ಸೂಚಿಸುತ್ತಲೇ ಇದೀಗ ತನ್ನ ಸೊಸೆಯ ಗಟ್ಟಿತನವನ್ನು ಮಾವ ಬಿಗ್‌ ಬಿ ಅಮಿತಾಬ್ ಬಚ್ಚನ್ ರಿವೀಲ್ ಮಾಡಿದ್ದಾರೆ.

ಐಶ್ವರ್ಯಾ ರೈ ಗರ್ಭಿಣಿಯಾದದ್ದು ಮೂವತ್ತೆಂಟನೇ ವಯಸ್ಸಿಗೆ. ಮೊದಲ ಮಗುವಿಗೆ ಇದು ವಿಳಂಬ ಗರ್ಭಧಾರಣೆ. ಸಾಮಾನ್ಯವಾಗಿ ಇದನ್ನು ರಿಸ್ಕ್ ಪ್ರೆಗ್ನೆನ್ಸಿ ಅಂತ ವೈದ್ಯರು ನೋಡ್ತಾರೆ. ಐಶ್ವರ್ಯಾ ರೈ ಅವರಿಗೂ ಅದನ್ನೇ ಹೇಳಿದ್ದರು. ಆದರೆ ಐಶ್ ತನಗೆ ನಾರ್ಮಲ್ ಡೆಲಿವರಿಯೇ ಆಗಬೇಕು ಅಂತ ಪಟ್ಟು ಹಿಡಿದಿದ್ದರು. ಸುಮಾರು ಮೂರ್ನಾಲ್ಕು ಗಂಟೆಗೂ ಹೆಚ್ಚು ಅತಿಯಾದ ಹೆರಿಗೆ ನೋವು ತಿಂದಿದ್ದರು. ಇದನ್ನೆಲ್ಲ ನೋಡುತ್ತಿದ್ದ ಇವರ ಅಮಿತಾಬ್, ಜಯಾ, ಅಭಿಷೇಕ್ ಸಿ ಸೆಕ್ಷನ್‌ ಮಾಡಬಹುದಲ್ವಾ, ಇಷ್ಟೆಲ್ಲ ನೋವು ತಿನ್ನೋದ್ಯಾಕೆ ಅಂತ ಪದೇ ಪದೇ ಹೇಳಿದರೂ ಐಶ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅಷ್ಟು ಹೊತ್ತು ನೋವು ತಿಂದರೂ, ಸಾಕಷ್ಟು ರಿಸ್ಕ್ ಫ್ಯಾಕ್ಟರ್‌ ಇದ್ದರೂ ಈಕೆ ನಾರ್ಮಲ್ ಡೆಲಿವರಿಯನ್ನೇ ಆಯ್ಕೆ ಮಾಡಿಕೊಂಡಿದ್ದರು. ಎಷ್ಟು ಸಮಯ ಬೇಕಾದರೂ ಆಗಲಿ, ಎಷ್ಟೇ ನೋವು ಬೇಕಿದ್ದರೂ ಆಗಲಿ ತಾನು ನಾರ್ಮಲ್ ಡೆಲಿವರಿಯನ್ನೇ ಆಯ್ಕೆ ಮಾಡ್ತೀನಿ ಅಂತ ಐಶ್ ಗಟ್ಟಿಯಾಗಿ ಹೇಳ್ತಿದ್ರಂತೆ. ಯಾವ ಪೇನ್ ಕಿಲ್ಲರ್ ತಿನ್ನಲೂ ನಿರಾಕರಿಸಿದ್ದಾರೆ. ಸೊಸೆಯ ಈ ಧೈರ್ಯವನ್ನು ಅಮಿತಾಬ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ತಿರಸ್ಕರಿಸಿ, ಬೇರೆ ನಟಿಯರಿಗೆ ಸಹಾಯ ಮಾಡಿದ ಐಶ್ವರ್ಯಾ ರೈ

ಅಂದಹಾಗೆ ಐಶ್ ಮಗಳು ಆರಾಧ್ಯ ಹುಟ್ಟಿದ್ದೂ ನವೆಂಬರ್‌ನಲ್ಲೇ. ನವೆಂಬರ್ 16, 2011ರಲ್ಲಿ ಆರಾಧ್ಯ ಐಶ್ ಅಭಿಷೇಕ್ ಮಗಳಾಗಿ ಬಚ್ಚನ್ ಕುಟುಂಬದ ಪುಟ್ಟ ಕೂಸಾಗಿ ಬರ್ತಾಳೆ. ಇಂದಿಗೂ ಆರಾಧ್ಯನಿಗೆ ಅಮ್ಮ ಅಂದರೆ ಹೆಚ್ಚು ಪ್ರೀತಿ. ಅಮ್ಮ ಅಂಥಾ ದೊಡ್ಡ ಸೆಲೆಬ್ರಿಟಿ ಆಗಿದ್ದರೂ, ಆಕೆಗೆ ಆ ಮಟ್ಟಿನ ಜನಪ್ರಿಯತೆ (Popularity)ಇದ್ದರೂ ತನಗೆ ಮಾತ್ರ ಅಮ್ಮನ ಸಂಪೂರ್ಣ ಪ್ರೀತಿ(Love) ನೀಡಿರುವ ಬಗ್ಗೆ ಆರಾಧ್ಯಳಿಗೆ ಹೆಮ್ಮೆ ಇದೆ. ಮಧ್ಯಾಹ್ನ ಬಂದಾಗ ಎಲ್ಲ ಅಮ್ಮಂದಿರಂತೆ ಹೋಂವರ್ಕ್(Homework) ಹೇಳಿಕೊಟ್ಟು, ಅವಳ ಮರುದಿನದ ತರಗತಿಗೆ ತಯಾರು ಮಾಡುವ, ಮಗುವಿನ ಎಲ್ಲ ಕೆಲಸಗಳನ್ನೂ ಐಶ್ ಪ್ರೀತಿಯಿಂದಲೇ ಮಾಡ್ತಾರೆ.

50 ದಾಟಿದರೂ ಟಬು ಮದುವೆಯಾಗದಿರಲು ಕಾರಣ ಅಜಯ್‌ ದೇವ್ಗನ್‌ ಅಂತೆ!

ಐಶ್‌ನ ಇಂಥಾ ವಿಶೇಷ ಗುಣಗಳ ಬಗ್ಗೆ ಅಮಿತಾಬ್ ಮಾತಾಡಿದ್ದು ಇದೀಗ ವೈರಲ್(Viral) ಆಗಿದೆ. ಸೊಸೆ, ಮೊಮ್ಮಗಳನ್ನು ಬಹಳ ಇಷ್ಟ ಪಡುವ ಬಿಗ್‌ಬಿ(Big B) ಸೊಸೆಯ ಒಳ್ಳೆಯ ಗುಣ, ಉತ್ತಮ ನಡತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಬಚ್ಚನ್ ಫ್ಯಾನ್ಸ್, ಐಶ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.