ಪಾನ್ ಮಸಾಲ ಜಾಹೀರಾತು ಕ್ಯಾನ್ಸಲ್: ಕಂಪನಿಗೆ ಹಣ ಮರಳಿಸಿದ ಅಮಿತಾಭ್
- ಅಮಿತಾಭ್ ಬಚ್ಚನ್ ಪಾನ್ ಮಸಾಲಾ ಜಾಹೀರಾತಿಗೆ ವಿರೋಧ
- ಜಾಹೀರಾತು ಕ್ಯಾನ್ಸಲ್ ಮಾಡಿ ಹಣ ಹಿಂದಿರುಗಿಸಿದ ಬಿಗ್‌ಬಿ
ಅಚ್ಚರಿಯ ಬೆಳವಣಿಗೆಯಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್(Amitabh Bachchan) ಪಾನ್ ಮಸಾಲಾ(Pan Masala) ಬ್ರಾಂಡ್ (Brand)ಜೊತೆ ತಮ್ಮ ಕಾಂಟ್ರ್ಯಾಕ್ಸ್ ರದ್ದು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಸಾರವಾಗಿದ್ದ ಜಾಹೀರಾತಿಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಬಿಗ್ ಬಿ ಪಾನ್ ಮಸಾಲಾ ಜಾಹೀರಾತು ಹಿಂಪಡೆಯಬೇಕೆಂದು ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗಿತ್ತು.
ರಾಷ್ಟ್ರ ತಂಬಾಕು ವಿರೋಧಿ ಸಂಘಟನೆ ಹಿರಿಯ ನಟನಲ್ಲಿ ತಂಬಾಕಿನ ಜಾಹೀರಾತು ರದ್ದುಗೊಳಿಸಲು ಮನವಿ ಮಾಡಿತ್ತು. ಪಾನ್ ಮಸಾಲವನ್ನು ಬೆಂಬಲಿಸುವ ನಟನ ನಡೆಯನ್ನು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು.
ಅಮಿತಾಭ್ ಬರ್ತ್‌ಡೇ ಪೋಸ್ಟ್‌ನಲ್ಲಿ ತಪ್ಪು: ಸರಿ ಮಾಡಿದ ಮಗಳು
ಅವರ ತಂಡವು ಹೇಳಿರುವಂತೆ, ಜಾಹೀರಾತು ಪ್ರಸಾರವಾದ ಕೆಲವು ದಿನಗಳ ನಂತರ, ಶ್ರೀ ಬಚ್ಚನ್ ಬ್ರ್ಯಾಂಡ್ ಅನ್ನು ಸಂಪರ್ಕಿಸಿದ್ದಾರೆ. ಕಳೆದ ವಾರ ಅದರಿಂದ ಹೊರಬಂದಿದ್ದಾರೆ. ಶ್ರೀ ಬಚ್ಚನ್ ಬ್ರಾಂಡ್‌ನೊಂದಿಗೆ ಒಪ್ಪಂದ ಮಾಡಿದಾಗ ಅದು ಸರೋಗೇಟ್ ಜಾಹೀರಾತಿನ ಅಡಿಯಲ್ಲಿ ಬರುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ತಿಳಿದುಬಂದಿದೆ.
ಬಚ್ಚನ್ ಅವರು ಬ್ರ್ಯಾಂಡ್‌ನೊಂದಿಗಿನ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದಾರೆ. ಪ್ರಚಾರಕ್ಕಾಗಿ ಪಡೆದ ಹಣವನ್ನು ಹಿಂದಿರುಗಿಸಿದ್ದಾರೆ. ಸರೋಗೇಟ್ ಜಾಹೀರಾತು ಎನ್ನುವುದು ಜಾಹೀರಾತಿನ ಒಂದು ರೂಪವಾಗಿದ್ದು ಇದನ್ನು ನಿಷೇಧಿತ ಉತ್ಪನ್ನಗಳಾದ ಸಿಗರೇಟ್ ಮತ್ತು ಆಲ್ಕೋಹಾಲ್ ಅನ್ನು ಮತ್ತೊಂದು ಉತ್ಪನ್ನದ ವೇಷದಲ್ಲಿ ಪ್ರಚಾರ ಮಾಡಲು ಬಳಸಲಾಗುತ್ತದೆ.
ಈ ಹಿಂದೆ ಅಮಿತಾಬ್ ಬಚ್ಚನ್ ಅವರ ಅಭಿಮಾನಿಯೊಬ್ಬರು ಫೇಸ್‌ಬುಕ್‌ನಲ್ಲಿ, 'ಹಲೋ ಸರ್, ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ಪಾನ್ ಮಸಾಲಾ ಬ್ರಾಂಡ್ ಬಗ್ಗೆ ಜಾಹೀರಾತು ನೀಡುವ ಅವಶ್ಯಕತೆ ಏನು? ಹಾಗಾದರೆ ನಿಮ್ಮ ಮತ್ತು ಈ ಸಣ್ಣ ಕಲಾವಿದರ ನಡುವಿನ ವ್ಯತ್ಯಾಸವೇನು? ಎಂದು ಪ್ರಶ್ನಿಸಿದ್ದರು.
ಪ್ರಶ್ನೆಗೆ ಶಾಂತವಾಗಿ ಪ್ರತಿಕ್ರಿಯಿಸಿದ ಬಿಗ್ ಬಿ, ನಾನು ನಿಮ್ಮ ಕ್ಷಮೆ ಕೇಳುತ್ತೇನೆ. ಯಾರಾದರೂ ತಮ್ಮ ಉದ್ಯಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನಾವು ನಮ್ಮ ವ್ಯವಹಾರದ ಬಗ್ಗೆಯೂ ಯೋಚಿಸಬೇಕು. ಈಗ, ನಾನು ಇದನ್ನು ಮಾಡಬಾರದಿತ್ತು ಎಂದು ನೀವು ಭಾವಿಸುತ್ತೀರಿ, ಆದರೆ ಇದನ್ನು ಮಾಡುವುದರಿಂದ ನನಗೆ ವೇತನ ಸಿಗುತ್ತದೆ. ನಮ್ಮ ವೃತ್ತಿಯಲ್ಲಿ ಕೆಲಸ ಮಾಡುವ ಅನೇಕ ಜನರಿದ್ದಾರೆ, ಅವರು ಕೆಲಸಗಾರರು, ಮತ್ತು ಒಂದು ರೀತಿಯಲ್ಲಿ ಅವರಿಗೂ ಕೆಲಸ ಮತ್ತು ಹಣ ಸಿಗುತ್ತದೆ ಎಂದಿದ್ದಾರೆ.