ಅಯೋಧ್ಯೆಯಲ್ಲಿ ನಿವೇಶನ ಖರೀದಿಸಿದ ಅಮಿತಾಭ್ ಬಚ್ಚನ್, ಬೆಲೆ ಎಷ್ಟು ಅಂದ್ರಾ?
ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಪ್ಲಾಟ್ ಖರೀದಿಸಿದ್ದಾರೆ.
ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೂ ಮುನ್ನ ಅಯೋಧ್ಯೆಯಲ್ಲಿ ನಿವೇಶನ ಖರೀದಿಸಿದ್ದಾರೆ. 7-ಸ್ಟಾರ್ ಮಿಶ್ರ-ಬಳಕೆಯ ಎನ್‌ಕ್ಲೇವ್ ದಿ ಸರಯುನಲ್ಲಿ ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ (HoABL) ಅವರಿಂದ ಖರೀದಿಸಿರುವ ಈ ನಿವೇಶನದ ಮೌಲ್ಯ ₹14.5 ಕೋಟಿ ರುಪಾಯಿಗಳು.
ವರದಿಯ ಮುಂದುವರಿಕೆಯಾಗಿ, ಬಚ್ಚನ್ ಈ ನಿವೇಶನದಲ್ಲಿ ಸುಮಾರು 10,000 ಚದರ ಅಡಿ ಅಳತೆಯ ಮನೆಯನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ.
ಈ ನಾಲ್ಕು ಶಂಕರಾಚಾರ್ಯರು ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಗೈರು; ಕಾರ ...
ಬಚ್ಚನ್ ಅವರು ಪ್ರಕಟಣೆಗೆ ತಮ್ಮ ಖರೀದಿಯ ಕುರಿತು ಮಾತನಾಡುತ್ತಾ, 'ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಅಯೋಧ್ಯೆಯಲ್ಲಿ ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಎದುರು ನೋಡುತ್ತಿದ್ದೇನೆ. ಅಯೋಧ್ಯೆಯ ಕಾಲಾತೀತ ಆಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯು ಭೌಗೋಳಿಕ ಗಡಿಗಳನ್ನು ಮೀರಿದ ಭಾವನಾತ್ಮಕ ಸಂಬಂಧವನ್ನು ಬೆಸೆದಿದೆ. ಇದು ಅಯೋಧ್ಯೆಯ ಆತ್ಮಕ್ಕೆ ಹೃತ್ಪೂರ್ವಕ ಪ್ರಯಾಣದ ಪ್ರಾರಂಭವಾಗಿದೆ. ಅಲ್ಲಿ ಸಂಪ್ರದಾಯ ಮತ್ತು ಆಧುನಿಕತೆ ಎರಡೂ ಅಸ್ತಿತ್ವದಲ್ಲಿದೆ. ಜಾಗತಿಕ ಆಧ್ಯಾತ್ಮಿಕ ರಾಜಧಾನಿಯಲ್ಲಿ ನನ್ನ ಮನೆಯನ್ನು ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ' ಎಂದಿದ್ದಾರೆ.
ಮಗನ ಕೊಂದ ಸೂಚನಾ, ಪತಿ ವೆಂಕಟ್ ಮಧ್ಯೆ ಠಾಣೇಲಿ ಭಾರೀ ವಾಕ್ಸಮರ
HoABL ಅಧ್ಯಕ್ಷ ಅಭಿನಂದನ್ ಲೋಧಾ ಅವರು ತಮ್ಮ ಕಂಪನಿಗೆ ಇದು 'ಮೈಲಿಗಲ್ಲಿನ ಕ್ಷಣ' ಎಂದಿದ್ದಾರೆ. ರಾಮಮಂದಿರದಿಂದ ಸುಮಾರು 15 ನಿಮಿಷಗಳ ದೂರದಲ್ಲಿರುವ, ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 30 ನಿಮಿಷದಷ್ಟು ದೂರವಿರುವ ಸರಯೂದ 'ಪ್ರಥಮ ಪ್ರಜೆ' ಬಚ್ಚನ್ ಆಗಿದ್ದು, ಅವರನ್ನು ಸ್ವಾಗತಿಸಲು ತಾವು ರೋಮಾಂಚನಗೊಂಡಿರುವುದಾಗಿ ಹೇಳಿದರು.
ಜನವರಿ 22ರಂದು ಸರಯೂ ಉದ್ಘಾಟನೆಗೊಳ್ಳಲಿದ್ದು, ಅದೇ ದಿನ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ.