ಕೆಬಿಸಿಯಲ್ಲಿ ಶಿವಾಜಿಗೆ ಅವಮಾನ | ಅಮಿತಾಬ್, ಸೋನಿ ಟಿವಿ ವಿರುದ್ಧ ಮರಾಠಿಗರ ಆಕ್ರೋಶ | #Boycott_KBC_SonyTV ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. 

ಮುಂಬೈ (ನ.09): ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ‌್ಯಕ್ರ ಮದ ವಿರುದ್ಧ ಮಹಾರಾಷ್ಟ್ರದಲ್ಲಿ ಭಾರೀ ಟೀಕೆ ಕೇಳಿ ಬಂದಿದೆ. 

ಇತ್ತೀಚೆಗೆ ಕಾರ‌್ಯಕ್ರಮದ ವೇಳೆ ಬಚ್ಚನ್ ಅವರು ಸ್ಪರ್ಧಿಯೊಬ್ಬರಿಗೆ ಸಾಮ್ರಾಟ್ ಔರಂಗಜೇಬ್‌ರ ಸಮಕಾಲೀನ ಅರಸರು ಯಾರು ಎಂಬ ಪ್ರಶ್ನೆಗೆ ಆಯ್ಕೆಗಳಾಗಿ ಮಹಾರಾಣಾ ಪ್ರತಾಪ್, ರಾಣಾ ಸಂಗಾ, ಮಹಾರಾಜ ರಣಜೀತ್ ಸಿಂಗ್ ಮತ್ತು ಶಿವಾಜಿ ಎಂದು ನೀಡಿದ್ದರು. ಇತಿಹಾಸದಲ್ಲಿ ಕ್ರೂರಿ ಎಂದೇ ಖ್ಯಾತನಾದ ಔರಂಗಜೇಬ್‌ನನ್ನು ಸಾಮ್ರಾಟ್ ಎಂದು, ಮರಾಠ ದೊರೆಯನ್ನು ಕೇವಲ ‘ಶಿವಾಜಿ’ ಎಂದು ಕರೆದಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

#Boycott_KBC_SonyTV ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. 

ಕೆಬಿಸಿ ರನ್ನರ್ ಸಿದ್ಧಾರ್ಥ್ ಬಸು ಟ್ವೀಟನ್ನು ರೀ ಟ್ವೀಟ್ ಮಾಡಿ, ಯಾರಿಗೂ ಅಗೌರವ ತೋರುವುದು ನಮ್ಮ ಉದ್ದೇಶವಾಗಿರಲಿಲ್ಲ. ಅದಾಗ್ಯೂ ಯಾರ ಭಾವನೆಗಾದ್ರೂ ಧಕ್ಕೆ ಆಗಿದ್ರೆ ಕ್ಷಮೆಯಾಚಿಸುತ್ತೇನೆ' ಎಂದು ಅಮಿತಾಬ್ ಹೇಳಿದ್ದಾರೆ. 

Scroll to load tweet…

ಸೋನಿ ಟಿವಿಯೂ ಕೂಡಾ ಕ್ಷಮೆಯಾಚಿಸಿದೆ. ಛತ್ರಪತಿ ಶಿವಾಜಿಯವರ ರೆಫರೆನ್ಸ್ ಕೊಟ್ಟಿದ್ದು ಸರಿಯಾಗಿರಲಿಲ್ಲ. ಅಜಾಗರೂಕತೆಯಿಂದ ಹೀಗಾಗಿದೆ. ಈ ಅಚಾತುರ್ಯಕ್ಕಾಗಿ ವಿಷಾದಿಸುತ್ತೇವೆ. ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ. 

Scroll to load tweet…

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ