ಟ್ರಾಫಿಕ್ ಕಿರಿಕಿರಿ ಎಂದು ಬೈಕ್ ಏರಿದ್ದೇ ತಪ್ಪಾಯ್ತು: ಅಮಿತಾಭ್, ಅನುಷ್ಕಾ ವಿರುದ್ಧ ದಾಖಲಾಯ್ತು ಕೇಸ್

ಟ್ರಾಫಿಕ್ ಕಿರಿಕಿರಿ ಎಂದು ಬೈಕ್ ಏರಿದ್ದೇ ತಪ್ಪಾಯ್ತು. ಅಮಿತಾಭ್, ಅನುಷ್ಕಾ ವಿರುದ್ಧ ಕೇಸ್ ದಾಖಲಾಗಿದೆ.  

Amitabh Bachchan and Anushka Sharma face legal trouble for riding bikes without helmet sgk

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಅನುಷ್ಕಾ ಶರ್ಮಾ ಟ್ರಾಫಿಕ್ ಕಿರಿಕಿರಿಯಿಂದ ಬೈಕ್ ಏರಿದ್ದರು. ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ಹೋಗಲಾಗದೆ ಪರದಾಡುತ್ತಿದ್ದ ಅಮಿತಾಭ್ ಬೈಕ್ ಏರಿದ್ದರು. ಅನುಷ್ಕಾ ಶರ್ಮಾ ಕೂಡ ಬೈಕ್ ಏರಿ ತಮ್ಮ ಕೆಲಸಕ್ಕೆ ಮರಳಿದ್ದರು. ಆದರೆ ಈ ಇಬ್ಬರೂ ಸ್ಟಾರ್ಸ್ ಈಗ ಬೈಕ್ ಏರಿದ್ದೆ ದೊಡ್ಡ ತಪ್ಪಾಗಿದೆ. ಇಬ್ಬರ ವಿರುದ್ಧವೂ ದೂರು ದಾಖಲಾಗಿದೆ. ಅಮಿತಾಭ್ ಮತ್ತು ಅನುಷ್ಕಾ ಇಬ್ಬರೂ ಹೆಲ್ಮೆಟ್ ಧರಿಸದೇ ಬೈಕ್ ಏರಿ ಹೊರಟಿದ್ದರು. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದರು. ಟ್ರಾಫಿಕ್ ರೂಲ್ಸ್ ಅನುಸರಿಸಿಲ್ಲ, ಇಬ್ಬರ ವಿರುದ್ಧವೂ ಕ್ರಮೆ ತೆಗೆದುಕೊಳ್ಳುವಂತೆ ನೆಟ್ಟಿಗರು ಮುಂಬೈ ಪೊಲೀಸರಿಗೆ ಒತ್ತಾಯಿಸಿದ್ದರು. 

ಬಿಗ್ ಬಿ ಅಮಿತಾಭ್ ಬಚ್ಚನ್ ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ಹೋಗಲಾರದೆ ಪರದಾಡುತ್ತಿದ್ದರು. ಬಳಿಕ ಅಭಿಮಾನಿಯೊಬ್ಬರ ಬಳಿ ಲಿಫ್ಟ್ ತೆಗೆದುಕೊಂಡಿದ್ದರು. ಹೆಲ್ಮೆಟ್ ಇಲ್ಲದೆ ಬಿಗ್  ಬಿ ಬೈಕ್ ಏರಿ ಹೊರಟಿದ್ದರು. ಅನುಷ್ಕಾ ಶರ್ಮಾ ತನ್ನ ಬಾಡಿಗಾರ್ಡ್ ಜೊತೆ ಬೈಕ್‌ನಲ್ಲಿ ಹೊರಟಿದ್ದರು. ರಸ್ತೆ ಬ್ಲಾಕ್ ಆಗಿದೆ ಎನ್ನುವ ಕಾರಣಕ್ಕೆ ಅನುಷ್ಕಾ ತನ್ನ ಬಾಡಿಗಾರ್ಡ್ ಜೊತೆ ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹೊರಟಿದ್ದರು. ಇದೀಗ ಇಬ್ಬರ ಮೇಲು ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಟ್ರಾಫಿಕ್ ಕಿರಿಕಿರಿ, ಹೆಲ್ಮೆಟ್ ಇಲ್ಲದೆ ಅಪರಿಚಿತ ವ್ಯಕ್ತಿಯ ಬೈಕ್ ಏರಿದ ಅಮಿತಾಭ್: ಫೋಟೋ ವೈರಲ್

ಬೈಕ್ನಲ್ಲಿ ಹೋದ ಬಗ್ಗೆ ಅಮಿತಾಭ್ ಬಚ್ಚನ್ ಪೋಸ್ಟ್ ಶೇರ್ ಮಾಡಿ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಿಟ್ಟ ಬೈಕ್ ಚಾಲಕನಿಗೆ ಧನ್ಯವಾದ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಕಪ್ಪು ಪ್ಯಾಂಟ್, ಜಾಕೆಟ್ ಹಾಗೂ ಕನ್ನಡಕ ಧರಿಸಿದ್ದರು. ಫೋಟೋ ಶೇರ್ ಮಾಡಿ, 'ರೈಡರ್‌ಗೆ  ಧನ್ಯವಾದ. ನಿಮಗೆ ಗೊತ್ತಿಲ್ಲ. ಆದರೆ ನೀವು ನನ್ನನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಹೋಗಿದ್ದೀರಿ. ವಿಪರೀತ ಟ್ರಾಫಿಕ್ ಜಾಮ್ ತಪ್ಪಿಸಿ ಕರ್ಕೊಂಡು ಹೋಗಿದ್ದೀರಿ. ಶಾರ್ಟ್ ಮತ್ತು ಹಳದಿ ಬಣ್ಣದ ಬಿ ಶರ್ಟ್ ಮಾಲಿಕರಿಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು. ಅಮಿತಾಭ್ ಪೋಸ್ಟ್‌ಗೆ ಅನೇಕರು ಹೆಲ್ಮೆಟ್ ಎಲ್ಲಿ ಸರ್ ಎಂದು ಪ್ರಶ್ನೆ ಮಾಡಿದ್ದರು. 'ಸರ್, ಹೆಲ್ಮೆಟ್ ಧರಿಸುವುದು ಕಡ್ಡಾಯ. ಕೇವಲ ಒಂದು ಕ್ಯಾಪ್ ಒಂದೇ ಆಗಲ್ಲ' ಎಂದು ಹೇಳಿದ್ದರು.  ಇದೀಗ ಮುಂಬೈ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

'ಅನುಷ್ಕಾ ಸರ್' ಎಂದ ಫೋಟೋಗ್ರಾಫರ್, ಕೊಹ್ಲಿ ರಿಯಾಕ್ಟ್ ಮಾಡಿದ್ದು ಹೇಗೆ ನೋಡಿ...

ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅನೇಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಬೈಕ್ ಸವಾರಿ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅಮಿತಾಭ್ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾದ ಚಿತ್ರೀಕರಣ ವೇಳೆ ಗಾಯಗೊಂಡಿದ್ದ ಅಮಿತಾಭ್ ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಗುಣಮುಖರಾಗಿದ್ದು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. 

Latest Videos
Follow Us:
Download App:
  • android
  • ios