Asianet Suvarna News Asianet Suvarna News

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ ಬೇಬಿ ಪಂಪ್‌ ತೋರಿಸಿದ ರಾಪರ್!

ಅಮೆರಿಕದ ಪ್ರಸಿದ್ಧ ರಾಪರ್ ಕಾರ್ಡಿ ಬಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ. ಒಂದ್ಕಡೆ ವಿಚ್ಛೇದನ ಇನ್ನೊಂದು ಕಡೆ ಬೇಬಿ ಬಂಪ್. ಎರಡೂ ಸುದ್ದಿ ನೋಡಿ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ.
 

American Rapper Cardi B Pregnancy Announced Just A Day After Divorcing Husband Fans Shocked To See Baby Bump roo
Author
First Published Aug 3, 2024, 2:02 PM IST | Last Updated Aug 3, 2024, 2:02 PM IST

ಅಮೆರಿಕದ ಪ್ರಸಿದ್ಧ ರಾಪರ್ ಕಾರ್ಡಿ ಬಿ, ಅಭಿಮಾನಿಗಳಿಗೆ ಒಂದ್ಕಡೆ ಖುಷಿ ಸುದ್ದಿ ನೀಡಿದ್ರೆ ಇನ್ನೊಂದ್ಕಡೆ ಅವರನ್ನು ನಿರಾಸೆಗೊಳಿಸಿದ್ದಾಳೆ. ರಾಪರ್ ಕಾರ್ಡಿ ಬಿ, ಮೂರನೇ ಬಾರಿ ಅಮ್ಮನಾಗ್ತಿರೋದು ಖುಷಿ ವಿಷ್ಯ. ಇದೇ ಟೈಂನಲ್ಲಿ ಆಕೆ ಆರು ವರ್ಷದ ನಂತ್ರ ವಿಚ್ಛೇದನ ಪಡೆಯುತ್ತಿದ್ದಾಳೆ. ಇದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಗರ್ಭಿಣಿ ಕಾರ್ಡಿ ಬಿ ಈ ಸಮಯದಲ್ಲಿ ವಿಚ್ಛೇದನದ ನಿರ್ಧಾರ ಯಾಕೆ ತೆಗೆದುಕೊಂಡ್ರು ಎನ್ನುವ ಕುತೂಹಲ ಕೂಡ ಹುಟ್ಟಿಕೊಂಡಿದೆ.

ರಾಪರ್ (Rapper) ಕಾರ್ಡಿ ಬಿ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸದ್ಯ ಅವರ ಕೆಲ ಫೋಟೋ, ಸಾಮಾಜಿಕ ಜಾಲತಾಣ (Social Network) ಕ್ಕೆ ಕಿಚ್ಚು ಹಚ್ಚಿದಂತಿದೆ. ಬೇಬಿ ಪಂಬ್ (Baby Pump) ಫೋಟೋವನ್ನು ಪೋಸ್ಟ್ ಮಾಡಿರುವ ಕಾರ್ಡಿ ಬಿ, ಪ್ರೆಗ್ನೆನ್ಸಿಯಲ್ಲೂ ಹಾಟ್ ಆಗಿ ಕಾಣ್ತಿದ್ದಾಳೆ. 

ಒಳಗಡೆ ಷರ್ಟ್​ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ಸೀತಾರಾಮ ಸೀತಾಳ ಹೀಗೆ ಕಾಲೆಳೆಯೋದಾ ಟ್ರೋಲಿಗರು?

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿರುವ ಕಾರ್ಡಿ ಬಿ, ಶೀಘ್ರದಲ್ಲೇ ಅಮ್ಮನಾಗಲಿದ್ದಾರೆ. ಅವರು ಮೂರನೇ ಬಾರಿ ಅಮ್ಮನಾಗ್ತಿದ್ದು, ಇದು ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ. 

ಕೆಂಪು ಬಣ್ಣದ ಗೌನ್ ಧರಿಸಿರುವ ಕಾರ್ಡಿ ಬಿ, ಹಾಟ್ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಪ್ರತಿಯೊಂದು ಅಂತ್ಯದೊಂದಿಗೆ ಹೊಸ ಆರಂಭ ಬರುತ್ತದೆ. ಈ ಹಂತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ತುಂಬಾ ಕೃತಜ್ಞನಾಗಿದ್ದೇನೆ. ನೀವು ನನಗೆ ತುಂಬಾ ಪ್ರೀತಿಯನ್ನು ಕೊಟ್ಟಿದ್ದೀರಿ. ತನ್ನ ಗರ್ಭಾವಸ್ಥೆಯನ್ನು ಪ್ರಕಟಿಸುತ್ತಾ ಎಂದು ಕಾರ್ಡಿ ಬಿ ಶೀರ್ಷಿಕೆ ಹಾಕಿದ್ದಾಳೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನೀವು ನನ್ನ ಸಾಧನೆಗೆ ಸಹಾಯ ಮಾಡಿದ್ದೀರಿ. ನನಗೆ ಸ್ಫೂರ್ತಿ ನೀಡಿದ್ದೀರಿ ಎಂದು ಭಾವುಕವಾದ ಒಂದು ಪೋಸ್ಟ್ ಹಾಕಿದ್ದಾರೆ ಕಾರ್ಡಿ ಬಿ. 

ಆರು ವರ್ಷಗಳ ನಂತ್ರ ವಿಚ್ಛೇದನಕ್ಕೆ ಮುಂದಾದ ಕಾರ್ಡಿ ಬಿ : ಕಾರ್ಡಿ ಬಿ ತನ್ನ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಒಂದು ದಿನ ಮೊದಲು ವಿಚ್ಛೇದನ ಪಡೆದಿದ್ದಾರೆ. ಆರು ವರ್ಷಗಳ ತಮ್ಮ ದಾಂಪತ್ಯ ಜೀವನವನ್ನು ಅವರು ಮುರಿದಿದ್ದಾರೆ. ಈ ವಿಷ್ಯವನ್ನು ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಾರ್ಡಿ ಬಿ ತಮ್ಮ ಪತಿ ಆಫ್‌ಸೆಟ್‌ ಗೆ ವಿಚ್ಚೇದನ ನೀಡುತ್ತಿದ್ದಾರೆ. ಆದ್ರೆ ಈ ಬಗ್ಗೆ ಕಾರ್ಡಿ ಬಿ ಅಥವಾ ಆಫ್ ಸೆಟ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದ್ರೆ ಅವರ ಪೋಸ್ಟ್ ಇದನ್ನು ಸ್ಪಷ್ಟಪಡಿಸುತ್ತಿದೆ. 

2017 ರಲ್ಲಿ  ಕಾರ್ಡಿ ತನ್ನ ಪತಿ ಆಫ್‌ಸೆಟ್ ತನಗೆ ವಿಶ್ವಾಸದ್ರೋಹ ಮಾಡಿದ್ದಾನೆ ಎಂದು ಹೇಳಿದ್ದಳು. ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿದ್ದ ಕಾರ್ಡಿ ಬಿ, ಆಫ್ ಸೆಟ್ ನನಗೆ ಮೋಸ ಮಾಡಿದ್ದಾನೆಂದು ಬಹಿರಂಗಪಡಿಸಿದ್ದು. ಅದಕ್ಕಾಗಿ ಅವರಿಂದ ಬೇರೆಯಾಗ್ತಿದ್ದೇನೆ ಎಂದಿದ್ದರು. ಆದ್ರೆ ಆ ನಂತ್ರ ಇದ್ರ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿರಲಿಲ್ಲ. ಕಾರ್ಡಿ ಬಿಗೆ ಆರು ವರ್ಷದ ಮಗಳು ಹಾಗೂ  2 ವರ್ಷದ ಮಗನಿದ್ದಾನೆ. ಇವೆರಡೂ ಆಫ್ಸೆಟ್ ಮಕ್ಕಳಾಗಿದ್ದು, ಮೂರನೇ ಮಗುವಿಗೂ ಆಫ್ಸಟ್ ಅಪ್ಪನಾಗಲಿದ್ದಾನೆ. 

ವಯನಾಡಿಗೆ 10 ಲಕ್ಷ ರೂ. ನೀಡಿದ ರಶ್ಮಿಕಾ ; ತಾಯ್ನಾಡಿಗೆ ಕರಗದ ಮನಸ್ಸು ಬೇರೆ ನಾಡಿಗೆ ಮರುಗುತ್ತಿದೆ ಎಂದ ನೆಟ್ಟಿಗರು

ಈ ಎಲ್ಲದರ ಮಧ್ಯೆ ಕಾರ್ಡಿ ಬಿ, ಮೂರನೇ ಬಾರಿ ಅಮ್ಮನಾಗ್ತಿದ್ದಾರೆ. ಅವರ ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯೇನೋ ಆಗಿದ್ದಾರೆ. ಆದ್ರೆ ಕೆಲವರು ಅಚ್ಚರಿಗೊಳಗಾಗಿದ್ದಾರೆ. ಇದು ಹೇಗೆ ಸಾಧ್ಯ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅನೇಕರು ಅಪ್ಪ ಯಾರು ಅಂದ್ರೆ, ಮತ್ತೆ ಕೆಲವರು ಆಫ್ಸೆಟ್ ಮೋಸ ಮಾಡಿದ್ರೂ ಅವರಿಂದ ಇನ್ನೊಂದು ಮಗುವನ್ನು ಪಡೆಯಲು ಹೇಗೆ ಸಾಧ್ಯ ಎಂದಿದ್ದಾರೆ.  

Latest Videos
Follow Us:
Download App:
  • android
  • ios