ಅಮೇರಿಕಾದ ನಟ ಹಾಗೂ ಡಿಸ್ಕೋ ಜಾಕಿ ಡ್ಯಾನಿ ಮಾಸ್ಟರ್ಸನ್ ಮಹಿಳೆಯರನ್ನು  ಅತ್ಯಾಚಾರ ಮಾಡುತ್ತಿರುವ ವಿಚಾರ ಕೇಳಿ ಬಂದಿದೆ. 2001 ಹಾಗೂ  2003ರ ಅವಧಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ಮೂವರು ಮಹಿಳೆಯರು ದೂರು ದಾಖಲಿಸಿದ್ದರು. ಲಾಸ್‌ ಏಂಜಲ್ಸ್‌ ಡಿಸ್ಟ್ರೀಕ್‌ ಕೋರ್ಟ್‌ ಈ ದೂರುಗಳನ್ನು ಪರಿಗಣಿಸಿ ನಟ ಡ್ಯಾನಿ ಮಾಸ್ಟರ್ಸನ್‌ನನ್ನು ಬಂಧಿಸಲಾಗಿತ್ತು.

ಕೆಲ ಮೂಲ ವರದಿಗಳ ಪ್ರಕಾರ ಡ್ಯಾನಿ ಮಾಸ್ಟರ್ಸನ್‌ನನ್ನು ಬುಧವಾರ ಬೆಳಗ್ಗೆ 11.30ಕ್ಕೆ ಅರೆಸ್ಟ್‌ ಮಾಡಲಾಗಿದ್ದು ಪೊಲೀಸ್‌ ಕಸ್ಟಡಿಯಲ್ಲಿದ್ದರು. ಅಂದೇ ಸಂಜೆ 20.1 ಕೋಟಿ ದಂಡ ಕಟ್ಟಿ ಕೆಲ ಷರತ್ತುಗಳ ಮೇಲೆ ಜಾಮೀನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ದೂರುಗಳ ಪ್ರಕಾರ ಡ್ಯಾನಿ 2001ರಲ್ಲಿ 23 ವರ್ಷದ ಯುವತಿಯನ್ನು ಜನವರಿ- ಡಿಸೆಂಬರ್‌ 2001ರಲ್ಲಿ ಅತ್ಯಾಚಾರ ಮಾಡಿದ್ದಾರೆ ಹಾಗೂ ಏಪ್ರಿಲ್ 2003ರಲ್ಲಿ ಮತ್ತೊಬ್ಬ 23 ವರ್ಷ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. 2003 ಡಿಸೆಂಬರ್‌ನಲ್ಲಿ ಮತ್ತೊಬ್ಬ 23 ವರ್ಷ ಯುವತಿಯನ್ನು ತನ್ನ ಹಾಲಿವುಡ್‌ ಹಿಲ್ಸ್ ಮನೆಗೆ ಕರೆದು ಅತ್ಯಾಚಾರ ಮಾಡಿದ್ದಾನೆ  ಎಂದು ಹೇಳಲಾಗಿದೆ. 44 ವರ್ಷದ ಡ್ಯಾನಿ ಮಾಸ್ಟರ್ಸನ್ ವಿರುದ್ಧ ಕೇಳಿ ಬಂದಿರುವ ಆರೋಪ  ಸಾಬೀತು ಆದಲ್ಲಿ  45 ವರ್ಷಗಳ ಕಾಲ ಜೈಲು ಶಿಕ್ಷೆ ಗ್ಯಾರಂಟಿ.

ಹುಡುಗಿ ಸ್ನಾನದ ವಿಡಿಯೋ ಮಾಡಿ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟ ಬಾಲಕರು!

ಡಿಸ್ಟ್ರೀಟ್ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಡ್ಯಾನಿ ಮಾಸ್ಟರ್ಸನ್ ತನ್ನ ಹಾಲಿವುಡ್‌ ಮನೆಯಲ್ಲಾದ ಅತ್ಯಾಚಾರಕ್ಕೆ ಮಾತ್ರ ಆಧಾರಗಳಿದ್ದು ಇನ್ನುಳಿದ ಎರಡು ಕೇಸ್‌ ಇನ್ನೂ ವಿಚಾರಣೆ ಹಂತದಲ್ಲಿದೆ  'ಡ್ಯಾನಿ ಅಮಾಯಕ ಯಾವುದೇ ತಪ್ಪುಗಳನ್ನು ಮಾಡಿರುವುದಿಲ್ಲ, ತನಿಖೆ ನಡೆಯಲಿ  ವರದಿ ಪಡೆದ ನಂತರ ಜನರಿಗೆ ತಿಳಿಯುತ್ತದೆ' ಎಂದು ಡ್ಯಾನಿ ಲಾಯರ್‌ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ 'ಡ್ಯಾನ್‌ ಕುಟುಂಬದವರಿಗೆ ಈ ವಿಚಾರಗಳನ್ನು ಕೇಳಿ ಶಾಕ್‌ ಆಗಿದೆ ಹಾಗೂ 20 ವರ್ಷಗಳ ಹಳೇ ಕೇಸ್‌ ಈಗ ದಾಖಲಾಗಿರುವುದು ಇನ್ನು ಶಾಕ್ ನೀಡಿದೆ.  ಡ್ಯಾನ್‌ ಬಗ್ಗೆ ತಿಳಿದುಕೊಂಡಿರುವ ಆಪ್ತರಿಗೆ ಮಾತ್ರ ಅತನ ಗುಣ ಹಾಗೂ ಕೇಸ್‌ ಹಿಂದಿರುವ  ಸುಳ್ಳು ಏನೆಂದು ತಿಳಿದಿದೆ' ಎಂದು ಲಾಯರ್‌ ಹೇಳಿದ್ದಾರೆ.

2019ರಲ್ಲಿ  ನಾಲ್ಕು ಮಹಿಳೆಯರು ಡ್ಯಾನಿ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು. ಅವರಲ್ಲಿ ಇಬ್ಬರ ಬಳಿ ಮಾತ್ರ ಸಾಕ್ಷಿ ಇದ್ದ ಕಾರಣ ಕೇಸ್‌ ಮುಂದುವರೆಸಲಾಗಿದೆ. ಬೇಲ್ ಪಡೆದುಕೊಂಡು ಹೊರ ಬಂದಿರುವ ಡ್ಯಾನಿ ಸೆಪ್ಟೆಂಬರ್‌ 18ರಂದು ಕೋರ್ಟ್‌ಗೆ ಹಾಜರಾಗಬೇಕಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"