ಅನಂತ್​ ಅಂಬಾನಿ ಮದ್ವೆಯಲ್ಲಿ ರೇಷ್ಮೆಯಲ್ಲಿ ಮಿಂಚಿದ ಶ್ವಾನ 'ಹ್ಯಾಪ್ಪಿ': ಯಾರಿದು ವಿಶೇಷ ಅತಿಥಿ?

ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ  ರೇಷ್ಮೆಯಲ್ಲಿ ಮಿಂಚಿದೆ ಶ್ವಾನ 'ಹ್ಯಾಪ್ಪಿ': ಯಾರಿದು ವಿಶೇಷ ಅತಿಥಿ? 
 

Ambani family member dog Happy glitters in silk at Anant and Radhika wedding suc

ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ಮನೆಯಲ್ಲಿ ಗಣ್ಯರು ಮಾತ್ರವಲ್ಲದೇ ನಾಯಿಯೊಂದು ಸಕತ್​ ಸದ್ದು ಮಾಡುತ್ತಿದೆ. ರೇಷ್ಮೆ ಬಟ್ಟೆ ತೊಟ್ಟ ಶ್ವಾನ ಮದುವೆ ಮನೆಯಲ್ಲಿ ಓಡಾಡಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.  ಅಂದಹಾಗೆ, ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ಬಹಳ ದಿನಗಳ ಸೆಲೆಬ್ರೇಷನ್​ ಬಳಿ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗದ ಘಟಾನುಘಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಪ್ರೀ-ವೆಡ್ಡಿಂಗ್​ ಮತ್ತು ಮದುವೆ ಸಂಭ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಈ ಮೂಲಕ ಭಾರತ ಅತ್ಯಂತ ವೈಭವೋಪೇತ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಮದುವೆಯ ಬೆನ್ನಲ್ಲೇ ಮದುವೆಗೆ ಸಂಬಂಧಿಸಿದಂತೆ ಒಂದೊಂದೇ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಔಚಿತ್ಯಪೂರ್ಣ ಮದುವೆಯ ಕುರಿತು ಇಂಟರೆಸ್ಟಿಂಗ್​ ವಿಷಯಗಳು ಹೊರಬರುತ್ತಿವೆ.

 ಅಂದಹಾಗೆ ಈ ನಾಯಿಯ ಹೆಸರು ಹ್ಯಾಪ್ಪಿ. ಇದು ಅಂಬಾನಿ ಫ್ಯಾಮಿಲಿಯ ನಾಯಿ ಆಗಿದೆ. ಈ ಹಿಂದೆ ಪ್ರೀ ವೆಡ್ಡಿಂಗ್​ನಲ್ಲಿ ಕೂಡ ಇದು ಸಾಕಷ್ಟು ಗಮನ ಸೆಳೆದಿತ್ತು. ಅಷ್ಟೇ ಅಲ್ಲದೇ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎಂಗೇಜ್ಮೆಂಟ್‌ನಲ್ಲಿ ಅನಂತ್‌ಗೆ ಇದೇ ನಾಯಿ ರಿಂಗ್ ತಂದುಕೊಟ್ಟಿತ್ತು.  ಇದೀಗ ಮದುವೆಯ ಮನೆಯಲ್ಲಿಯೂ ನಾಯಿ ಸಡಗರದಿಂದ ಓಡಾಡಿಕೊಂಡಿದೆ. ಅಂದಹಾಗೆ ಇದರ ಹೆಸರು ಹ್ಯಾಪ್ಪಿ. ಇದು ಅಂಬಾನಿ ಮನೆಯ ಸದಸ್ಯ. ಹಿಂದೊಮ್ಮೆ ಇದರ ಕುರಿತು ನೀತಾ ಅಂಬಾನಿ ಕೂಡ ಹೇಳಿಕೊಂಡಿದ್ದರು. ನಾನು ಮೂವರು ಮಕ್ಕಳು ಮಾತ್ರವಲ್ಲ, ನಾಯಿಯೊಂದರ ಅಮ್ಮ ಕೂಡ ಎಂದು ಹೇಳಿದ್ದರು. ನಾನು ಅಜ್ಜಿ ಮಾತ್ರವಲ್ಲ, ಕುಟುಂಬದ ಸಾಕು ನಾಯಿಯ ತಾಯಿಯೂ ಹೌದು. ಮನೆಯಲ್ಲಿ ಇರುವುದು ಒಂದೇ ನಾಯಿ ಎಂದಿದ್ದರು.  ಅಂದಹಾಗೆ ಇದು  ಗೋಲ್ಡನ್ ರಿಟ್ರೈವರ್ ವರ್ಗಕ್ಕೆ ಸೇರಿದೆ.   

ಪರಿಸರ ಪ್ರೇಮ ಬಿತ್ತುವ ರಥದಲ್ಲಿ ಪ್ಲಾಸ್ಟಿಕ್​ ಗಿಡ-ಮರಗಳಾ? ಅಂಬಾನಿ ಪುತ್ರನ ಮದ್ವೆಯಲ್ಲಿ ಇದೆಂಥ ಅಪಸ್ವರ?
   
ಅನಂತ್​ ಅವರಿಗೆ ಪ್ರಾಣಿಗಳು ಎಂದರೆ ತುಂಬಾ ಪ್ರೀತಿ. ಅವರ ತಾಯಿ ನೀತಾ, ಅನಂತ್ 5000 ಕ್ಕೂ ಹೆಚ್ಚು ಬೀದಿನಾಯಿಗಳನ್ನು ರಕ್ಷಿಸಿದ್ದಾನೆ ಎಂದಿದ್ದರು.  ಆನೆಗಳ ರಕ್ಷಣೆಗಳನ್ನೂ ಮಾಡುತ್ತಿರುವ ಅನಂತ್​ ಅವರು, ಸಿಂಹಗಳು, ಮೊಸಳೆಗಳು ಮತ್ತು ವಿವಿಧ ಜಾತಿಯ ಪಕ್ಷಿಗಳನ್ನು ಸಹ ಇಲ್ಲಿ ರಕ್ಷಿಸುತ್ತಿದ್ದಾರೆ.  ಪ್ರಮುಖ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಮತ್ತು ಮತ್ತು ಅನೇಕ ವಿಧದ ಪ್ರಾಣಿಗಳನ್ನು ರಕ್ಷಿಸಲು    ವಂತಾರ ಯೋಜನೆಯನ್ನೂ ಅನಂತ್​ ಕೈಗೊಂಡಿದ್ದಾರೆ. ಇದು ಅವರ ಕನಸಿಕ ಕೂಸು.

ಇದಾಗಲೇ ವಂತಾರ ಯೋಜನೆಯ ಕುರಿತು ಅನಂತ್​ ಅವರು ಮಾಹಿತಿ ನೀಡಿದ್ದರು. ಸರ್ಕಾರಿ ಸಂಸ್ಥೆಗಳು, ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಗಳು, ತರಬೇತಿ, ಸಾಮರ್ಥ್ಯ ನಿರ್ಮಾಣ ಮತ್ತು ಪ್ರಾಣಿಗಳ ಆರೈಕೆಯ ಮೂಲಸೌಕರ್ಯಗಳ ವಿಷಯದಲ್ಲಿ ಭಾರತದಲ್ಲಿನ ಎಲ್ಲಾ 150-ಪ್ಲಸ್ ಮೃಗಾಲಯಗಳನ್ನು ಸುಧಾರಿಸುವಲ್ಲಿ ಝೂ ಅಥಾರಿಟಿ ಆಫ್ ಇಂಡಿಯಾ ಮತ್ತು ಇತರ ಸಂಬಂಧಿತ ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರರಾಗಲು ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದಿದ್ದರು.

ಅಂಬಾನಿ ಪುತ್ರನ ಮದ್ವೆಯಲ್ಲಿ ಬಯಲಾಗೋಯ್ತು ಅಮಿತಾಭ್​ ಫ್ಯಾಮಿಲಿ ಬಿಗ್​ ಸೀಕ್ರೆಟ್​: ಫ್ಯಾನ್ಸ್​ ಶಾಕ್​!

Latest Videos
Follow Us:
Download App:
  • android
  • ios