ಮದುವೆ ಬಳಿಕ 10 ಸಾವಿರ ಅತಿಥಿಗಳನ್ನು ಗಂಟೆಗಟ್ಟಲೆ ನಿಂತೇ ಗೌರವಿಸಿದ ಅಂಬಾನಿ ಕುಟುಂಬ!

ಅನಂತ್ -ರಾಧಿಕಾ ಮದುವೆಯಲ್ಲಿ ಭಾಗವಹಿಸಿದ 10 ಸಾವಿರಕ್ಕೂ ಅಧಿಕ ಮಂದಿಯನ್ನು ಖುದ್ದು ಅಂಬಾನಿ ಫ್ಯಾಮಿಲಿ ಗಂಟೆಗಟ್ಟಲೆ ನಿಂತು ಮಾತನಾಡಿಸಿದ್ದು,  ಇಂಟರ್ನೆಟ್‌ ನಲ್ಲಿ ವೈರಲ್ ಆಗಿದೆ.

Ambani family greets ten thousands of guest personally stood for hours gow

ಜುಲೈ 12ರಂದು ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಜುಲೈ 12ರಂದು ಆರಂಭವಾದ ವಿವಾಹ ಮಹೋತ್ಸವ ಜುಲೈ14ರವರೆಗೆ ನಡೆದಿತ್ತು.

ಇದೀಗ ಮದುವೆಯಲ್ಲಿ ಭಾಗವಹಿಸಿದ 10 ಸಾವಿರಕ್ಕೂ ಅಧಿಕ ಮಂದಿಯನ್ನು ಖುದ್ದು ಅಂಬಾನಿ ಫ್ಯಾಮಿಲಿ ಮಾತನಾಡಿಸಿದ್ದು, ಈ ಮೂಲಕ ಅತಿಥಿಯರಿಗೆ ಗೌರವ ಸಲ್ಲಿಸಿದೆ. ಶ್ರೀಮಂತ ಕುಟುಂಬದವರ ವಿನಮ್ರತೆಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಗಂಟೆ ಗಟ್ಟಲೆ ಅಂಬಾನಿ ಮತ್ತು ಮರ್ಚೆಂಟ್‌ ಕುಟುಂಬದ ಎಲ್ಲರೂ ಸ್ಟೇಜ್‌ನಲ್ಲಿ ನಿಂತುಕೊಂಡೇ ವಿವಾಹಕ್ಕೆ ಬಂದ ಅಷ್ಟೂ ಜನರನ್ನು ಮಾತನಾಡಿಸಿದ್ದಾರೆ.

ಸನಾತನ ಪದ್ಧತಿ ಮೇಲೆ ಅಂಬಾನಿ ಕುಟುಂಬಕ್ಕೆ ಅದೆಷ್ಟು ನಂಬಿಕೆಯಿದೆ ಎನ್ನುವುದಕ್ಕೆ, ವಿವಾಹ ಮಂಟಪ ವಿನ್ಯಾಸವೇ ಸಾಕ್ಷಿ!

ರಿಲಯನ್ಸ್ ದಿಗ್ಗಜ ಮಗನ ಮದುವೆ ವಿಶ್ವದ ಅತ್ಯುನ್ನತ ಮದುವೆಗಳಲ್ಲಿ ಒಂದು ಎನಿಸಿಕೊಂಡಿದೆ. ಕಾರ್ಯಕ್ರಮಕ್ಕೆ ಭಾಗವಹಿಸುವ ಜಾಗತಿಕ ಗಣ್ಯರಿಗೆ ಭಾರತೀಯ ಸಂಸ್ಕೃತಿಯ ಪರಿಚಯಿಸುವ ಉದ್ದೇಶದಿಂದ ಪಕ್ಕಾ ಭಾರತೀಯ ಸಂಪ್ರದಾಯದಂತೆ ವಿವಾಹ ನಡೆದಿತ್ತು.  ಅತಿಥಿಗಳ ಡ್ರೆಸ್‌ ಕೋಡ್‌ನಿಂದ ಹಿಡಿದು, ಮಂಟಪದ ವಿನ್ಯಾಸ, ಅಲಂಕಾರಕ್ಕೆ ಬಳಸಿರುವ ಹೂವುಗಳು ಕೂಡ ದೇಶದ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿತ್ತುಅಲ್ಲದೇ ದೇಶದ ಸಾಂಪ್ರದಾಯಿಕ ಶೈಲಿಯ ಖಾದ್ಯಗಳನ್ನು ಗಣ್ಯರಿಗೆ ಉಣಬಡಿಸಲಾಗಿತ್ತು. ಭಜನೆಯಿಂದ ಹಿಡಿದು ಬಾಲಿವುಡ್‌ ಹಾಡಿನವರೆಗೆ ಗಾಯಕರಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಗಣ್ಯರಿಗೆ ಮನರಂಜನೆ ನೀಡಲಾಯಿತು.

ನಟ ದರ್ಶನ್ ಬಿಡುಗಡೆ ಭವಿಷ್ಯ ನುಡಿದ ದಸರೀಘಟ್ಟ ಚೌಡೇಶ್ವರಿ, ದೇವಿ ಕಳಸದಲ್ಲಿ ಬರೆದಿದ್ದೇನು?

ಇನ್ನು ಜುಲೈ 15ರಂದು ಪಾಪರಾಜಿಗಳು ಮತ್ತು ಅವರ ಕುಟುಂಬದವರಿಗೆ ಸೇರಿ, ಮದುವೆಯಲ್ಲಿ ಸುಸೂತ್ರವಾಗಿ  ನಡೆಯಲು ಕರ್ತವ್ಯ ನಿರ್ವಹಿಸಿದವರಿಗೆ ವಿಶೇಷ ಔತಣ ಕೂಡ ಆಯೋಜಿಸಿದ್ದಾರೆ.

Latest Videos
Follow Us:
Download App:
  • android
  • ios