ಲಾಸ್‌ಏಂಜ​ಲೀ​ಸ್‌(ಮೇ.27): ಜೇಮ್ಸ್‌ ಬಾಂಡ್‌, ರಾಕಿ, ಶಾಕ್‌ ಟ್ಯಾಂಕ್‌ ಸೇರಿ​ದಂತೆ ಹಾಲಿ​ವುಡ್‌ನ ಜನ​ಪ್ರಿಯ ಸಿಮಿ​ಮಾ​ಗಳನ್ನು ನಿರ್ಮಾಣ ಮಾಡಿರುವ ಮೆಟ್ರೋ- ಗೋಲ್ಡ​ನ್‌- ಮೇಯರ್‌ (ಎಂಜಿಎಂ) ಪಿಕ್ಚರ್ಸ್‌ ಅನ್ನು ಅಮೆ​ಜಾನ್‌ ಕಂಪನಿ ಅಂದಾಜು 63000 ಕೋಟಿ ರು.ಗ​ಳಿಗೆ ಖರೀ​ದಿ ಮಾಡ​ಲಿದೆ. ಇದ​ರಿಂದಾಗಿ ಒಟಿಟಿ ವೇದಿ​ಕೆ​ಗಳಾದ ನೆಟ್‌​ಫ್ಲಿಕ್ಸ್‌ ಹಾಗೂ ಡಿಸ್ನಿ ಪ್ಲಸ್‌ಗೆ ಅಮೆ​ಜಾನ್‌ ಪ್ರೈಮ್‌ ವಿಡಿ​ಯೋಸ್‌ ಪೈಪೋಟಿ ನೀಡ​ಲು ನೆರ​ವಾ​ಗ​ಲಿದೆ.

ಎಂಜಿಎಂ ಪಿಕ್ಚ​​ರ್‍ಸ್ನ ಖರೀ​ದಿ​ಯಿಂದಾಗಿ ತನ್ನ ಒಟಿಟಿ ವೇದಿ​ಕೆ​ಯಲ್ಲಿ ನೂರಾ​ರು ಜನ​ಪ್ರಿಯ ಚಿತ್ರ​ಗ​ಳ ಮೇಲಿನ ಹಕ್ಕು​ಗ​ಳನ್ನು ಪಡೆ​ಯಲು ಸಾಧ್ಯ​ವಾ​ಗ​ಲಿದೆ.

ಹಾಲಿ​ವು​ಡ್‌ನ ಅತ್ಯಂತ ಹಳೆಯ ಸ್ಟುಡಿ​ಯೋ​ಗಳ ಪೈಕಿ ಒಂದಾದ ಎಂಜಿಎಂ 1924ರಲ್ಲಿ ಸ್ಥಾಪ​ನೆ​ಯಾದ ಸಂಸ್ಥೆ​ಯಾ​ಗಿದ್ದು, ಜನ​ಪ್ರಿಯ ಚಿತ್ರ​ಗಳು ಮತ್ತು ಸೀರಿ​ಯ​ಲ್‌​ಗಳ ದೊಡ್ಡ ಪಟ್ಟಿ​ಯನ್ನೇ ಹೊಂದಿ​ದೆ.

ಜೇಮ್ಸ್‌ ಬಾಂಡ್‌ ಸರ​ಣಿಯ ಮುಂದಿನ ಚಿತ್ರ ‘ನೋ ಟೈಮ್‌ ಟು ಡೈ’ ಅ.8ರಂದು ಬಿಡು​ಗಡೆ ಆಗ​ಲಿದ್ದು, ಈ ಚಿತ್ರದ ಹಕ್ಕು ಅಮೆ​ಜಾ​ನ್‌ಗೆ ಲಭ್ಯ​ವಾ​ಗ​ಲಿದೆ.