ನವದೆಹಲಿ(ಮಾ.03): ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಭಾರೀ ವಿವಾದಕ್ಕೀಡಾಗಿದ್ದ ‘ತಾಂಡವ್‌’ ವೆಬ್‌ಸರಣಿಯ ಬಗ್ಗೆ ಓಟಿಟಿ ವೇದಿಕೆಯಾದ ಅಮೆಜಾನ್‌ ಪ್ರೈಂ ವಿಡಿಯೋ ಮಂಗಳವಾರ ಕ್ಷಮೆಯಾಚಿಸಿದೆ.

‘ತಾಂಡವ್‌ ವೆಬ್‌ಸರಣಿಯ ಕೆಲವು ದೃಶ್ಯಗಳು ವೀಕ್ಷಕರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಬಗ್ಗೆ ಅಮೆಜಾನ್‌ ಪ್ರೈಮ್‌ ವಿಡಿಯೋ ತೀವ್ರ ವಿಷಾದ ವ್ಯಕ್ತಪಡಿಸುತ್ತಿದೆ. ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಆಕ್ಷೇಪಾರ್ಹ ತುಣುಕುಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ.

ವೀಕ್ಷಕರ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಆ ದೃಶ್ಯಗಳಿಂದ ನೋವುಂಟಾಗಿದ್ದಾರೆ ಕ್ಷಮೆ ಇರಲಿ’ ಎಂದು ಹೇಳಿಕೆಯಲ್ಲಿ ಅದು ತಿಳಿಸಿದೆ.