ಕಾನೂನು ಸಂಕಷ್ಟಕ್ಕೆ ಸಿಲುಕಿದ ಅಮರನ್; ಇಂಜಿನಿಯರಿಗ್ ವಿದ್ಯಾರ್ಥಿ ನಿದ್ದೆ, ಓದಿಗೆ ತೊಂದರೆ

ನಿರಂತರ ಕರೆಗಳಿಂದಾಗಿ ನಿದ್ದೆ, ಓದಿಗೆ ತೊಂದರೆಯಾಗಿದೆ. ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಅಮರನ್ ಸಿನಿಮಾ ತಂಡದ ವಿರುದ್ದ ವಾಗೀಶನ್ ದೂರಿದ್ದಾರೆ. ಈ ಸಂಬಂಧ ಚಿತ್ರತಂಡಕ್ಕೆ ನೋಟಿಸ್ ಕಳುಹಿಸಿದ್ದಾರೆ.

Amaran Film Producers Receive Legal Notice From Chennai Student for Phone Number Use mrq

ಚೆನ್ನೈ: ಶಿವಕಾರ್ತಿಕೇಯನ್- ಸಾಯಿ ಪಲ್ಲವಿ ಅಭಿನಯದ 'ಅಮರನ್' ಚಿತ್ರದ ನಿರ್ಮಾಪಕರಿಗೆ ಚೆನ್ನೈ ವಿದ್ಯಾರ್ಥಿಯೊಬ್ಬ ಕೋರ್ಟ್ ನೋಟಿಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ತನ್ನ ಫೋನ್ ನಂಬರ್ ಬಳಸಲಾಗಿದೆ ಎಂದು ಆರೋಪಿಸಿ ಎಂಜಿನಿಯರಿಂಗ್ ವಿದ್ಯಾರ್ಥಿ ವಿ.ವಿ.ವಾಗೀಶನ್ ನೋಟಿಸ್ ಕಳುಹಿಸಿದ್ದಾರೆ. ಸಾಯಿ ಪಲ್ಲವಿ ನಿರ್ವಹಿಸಿದ ಪಾತ್ರಕ್ಕೆ ವಿದ್ಯಾರ್ಥಿಯ ಮೊಬೈಲ್ ನಂಬರ್ ಬಳಸಲಾಗಿದೆ. ಚಿತ್ರ ಬಿಡುಗಡೆಯಾದ ಬಳಿಕ ಈ ನಂಬರ್‌ಗೆ ಕರೆಗಳು ಬರುತ್ತಿವೆ. ಇದರಿಂದ ತನಗೆ ಮಾನಸಿಕ ತೊಂದರೆಯಾಗಿದೆ ಎಂದು ವಾಗೀಶನ್ ಆರೋಪಿಸಿದ್ದಾರೆ. 

ನಿರಂತರ ಕರೆಗಳಿಂದಾಗಿ ನಿದ್ದೆ ಮತ್ತು ಓದಿಗೆ ತೊಂದರೆಯಾಗಿದ್ದು, ಮಾನಸಿಕ ನೆಮ್ಮದಿ ಹಾಳಾಗಿದೆ. ಸಿನಿಮಾದಲ್ಲಿ ತನ್ನ ಫೋನ್ ನಂಬರ್ ಬಳಸಿದ್ದಕ್ಕೆ 1.1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ವಾಗೀಶನ್ ಒತ್ತಾಯಿಸಿದ್ದಾರೆ. ಹಾಗೆ ಯಾವುದೇ ಕಾರಣಕ್ಕೂ ತನ್ನ ಫೋನ್ ನಂಬರ್ ಬದಲಾಯಿಸುವುದಿಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾರೆ.

ಮೇಜರ್ ಮುಕುಂದ್ ವರದರಾಜನ್ ಅವರ ಜೀವನಕಥೆ ಆಧರಿತ 'ಅಮರನ್' ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 2024ರ ಅಕ್ಟೋಬರ್ 31ರಂದು ಬಿಡುಗಡೆಯಾದ ಅಮರನ್ ಚಿತ್ರವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಮತ್ತು ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಜಂಟಿಯಾಗಿ ನಿರ್ಮಿಸಿವೆ. 

ಶಿವಕಾರ್ತಿಕೇಯನ್ ಮೇಜರ್ ಮುಕುಂದ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಭುವನ್ ಅರೋರಾ, ರಾಹುಲ್ ಬೋಸ್, ಶ್ರೀಕುಮಾರ್, ವಿಕಾಸ್ ಬಂಗರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವಕಾರ್ತಿಕೇಯನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ 'ಅಮರನ್' ಕೂಡ ಒಂದು ಎಂದು ಪ್ರೇಕ್ಷಕರು ಭಾವಿಸಿದ್ದಾರೆ.

ಈ ಹಿಂದೆಯೂ ಆಗಿತ್ತು ಇಂಥಾ ಎಡವಟ್ಟು
2019ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್‌ನ ಅರ್ಜುನ್ ಪಟಿಯಾಲಾ ಸಿನಿಮಾದಲ್ಲಿ ಇಂತಹುವುದೇ ಒಂದು ಎಡವಟ್ಟು ಉಂಟಾಗಿತ್ತು. ಈ ಚಿತ್ರದಲ್ಲಿ ನಟಿ ಸನ್ನಿ ಲಿಯೋನ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಸಿನಿಮಾ ನಾಯಕನಿಗೆ ಸನ್ನಿ ಲಿಯೋನ್ ಮೊಬೈಲ್ ನಂಬರ್ ನೀಡುವ ದೃಶ್ಯವೊಂದಿತ್ತು. ಈ ವೇಳೆ ಸನ್ನಿ ಲಿಯೋನ್ 10 ಅಂಕೆಗಳನ್ನು ಹೇಳುತ್ತಾರೆ. ಇದನ್ನೇ ಹಲವರು ಸನ್ನಿ ಲಿಯೋನ್ ಎಂದು ನಂಬಿ ಕರೆ ಮಾಡಿದ್ದರು. ಆದ್ರೆ ಕರೆ ಮಾಡಿದ್ರೆ ದೆಹಲಿ ನಿವಾಸಿಯೊಬ್ಬರಿಗೆ ಹೋಗುತ್ತಿತ್ತು. ಈ ಸಂಬಂಧ ಅರ್ಜುನ್ ಪಟಿಯಾಲಾ ಚಿತ್ರತಂಡದ ವಿರುದ್ಧ ದೂರು ದಾಖಲಾಗಿತ್ತು. 

ಇದನ್ನೂ ಓದಿ: ಸಿನಿಮಾ ಬಿಟ್ಟು ವಿದೇಶದಲ್ಲಿ ವ್ಯವಸಾಯ, ಪಶುಪಾಲನೆಯಲ್ಲಿ ತೊಡಗಿಕೊಂಡ ಸ್ಟಾರ್‌ ಹೀರೋ ಮಗ

ಅಪರಿಚಿತರ ಕರೆಯಿಂದ ನಿದ್ದೆ ಸಹ ಮಾಡಲು ಆಗುತ್ತಿಲ್ಲ. ನಾನು ಸನ್ನಿ ಲಿಯೋನ್ ವಕ್ತಾರ ಅಲ್ಲ ಎಂದು ಹೇಳಿದ್ರೂ ನಂಬಲ್ಲ. ಕೆಲವರು ಅವಾಚ್ಯ ಪದ ಬಳಸಿ ನಿಂದನೆ ಮಾಡುತ್ತಾರೆ ಎಂದು ದೆಹಲಿ ನಿವಾಸಿ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸನ್ನಿ ಲಿಯೋನ್, ಶೂಟಿಂಗ್ ವೇಳೆ ಚಿತ್ರತಂಡ ಹೇಳಿದ ಸಂಖ್ಯೆ ಹೇಳಿದ್ದೇನೆ ಎಂದಿದ್ದರು. 

ನಿಯಮ ಏನು ಹೇಳುತ್ತೆ?
ಸಿನಿಮಾಗಳಲ್ಲಿ ಬಳಕೆಯಲ್ಲಿರದ ಮೊಬೈಲ್ ನಂಬರ್ ಬಳಸಬೇಕು ಎಂಬ ನಿಯಮವಿದೆ. ಸಾಮಾನ್ಯವಾಗಿ ಪ್ರಚಾರದ ಉದ್ದೇಶಕ್ಕಾಗಿ ನೋಂದಾಯಿಸಿಕೊಂಡಿರುವ ಸಂಖ್ಯೆಯನ್ನು ಬಳಸಬೇಕು ಎಂಬ ನಿಯಮವಿದೆ. ಇದೀಗ ಅಮರನ್ ಚಿತ್ರತಂಡ ಈ ನಿಯಮ ಪಾಲನೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿ ವಿ.ವಿ.ವಾಗೀಶನ್ ನೀಡಿರುವ ನೋಟಿಸ್‌ಗೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಎಆರ್ ರೆಹಮಾನ್ ಬಳಿಯಲ್ಲಿರೋ ಐಷಾರಾಮಿ ಕಾರ್ ಕಲೆಕ್ಷನ್ ಬಹಿರಂಗ

Latest Videos
Follow Us:
Download App:
  • android
  • ios