ಟಾಲಿವುಡ್‌ ಸ್ಟೈಲ್ ಐಕಾನ್‌ ಅಲ್ಲು ಅರ್ಜುನ್ 38ರ ಸಂಭ್ರಮದಲ್ಲಿದ್ದಾರೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ, ಸೂಪರ್ ಹಿಟ್ ಆಗೋದು ಗ್ಯಾರಂಟಿ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿರುವ ಪುಷ್ಪ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಒಮ್ಮ ಈ ಟೀಸರ್‌ ನೋಡಿ ಕನ್ನಡ ಈ ಸಿನಿಮಾಗಳನ್ನು ಕನ್ನಡಿಗರು ಮೆಲುಕು ಹಾಕಿದ್ದಾರೆ. 

ಅಲ್ಲು ಸಿನಿಮಾದಲ್ಲಿ ಫಹಾದ್ ವಿಲನ್: ಮಾಲಿವುಡ್ ಸ್ಟಾರ್‌ಗೆ ಭರ್ಜರಿ ಸಂಭಾವನೆ 

ಟೀಸರ್‌ ಬಗ್ಗೆ ಎರಡು ಮಾತಿಲ್ಲ, ನಿರ್ದೇಶಕ ಸುಕುಮಾರ್ ಹಾಗೂ ಅರ್ಜುನ್ ಕಾಂಬಿನೇಷನ್‌ ನಿರೀಕ್ಷೆ ಹೆಚ್ಚಿಸಿದೆ.  ಕ್ರಿಮಿನಲ್‌ ಒಬ್ಬನ ಕಥೆ ಇದಾಗಿದ್ದು ನೈಜ, ಘಟನೆಗಳ ಕಥೆ ಎಂದು ನಿರ್ದೇಶಕರು ಈ ಹಿಂದೆ ಸುಳಿವು ನೀಡಿದ್ದರು. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರನ್ನು ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ನೋಡಬಹುದು. ಕನ್ನಡ ನಟ ಡಾಲಿ ಧನಂಜಯ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. 'ಕಿಲ್ಲಿಂಗ್ ವೀರಪ್ಪನ್' ಹಾಗೂ 'ಅಟ್ಟಹಾಸ' ಚಿತ್ರದಂತೆ ಇದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

'ಹುಟ್ಟು ಹಬ್ಬದ ಶುಭಾಶಯಗಳು ಪುಷ್ಪರಾಜ್‌ ಅಲ್ಲು ಅರ್ಜುನ್‌. ಟೀಸರ್‌ ಅದ್ಭುತವಾಗಿದೆ, ಪರದೆ ಮೇಲೆ ನೀವು ಬೆಂಕಿ ಹಚ್ಚಿಸುವಿರಿ' ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡರೆ, 'ಹ್ಯಾಪಿ ಬರ್ತಡೇ ಬನ್ನಿ ಗಾರು' ಎಂದು ನಟ ಧನಂಜಯ್ ಟ್ಟೀಟ್ ಮಾಡಿದ್ದಾರೆ. 

'ಪುಷ್ಪ' ರಿಲೀಸ್‌ ಡೇಟ್‌ ಕೂಡ ಫಿಕ್ಸ್ ಆಯ್ತು; ರಶ್ಮಿಕಾನ ಸ್ವಾಗತ ಮಾಡಿಕೊಳ್ಳಿ! 

ಇನ್ನು ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್‌, ಸುನೀಲ್ ಪೋಷಕ್ ಅಭಿನಯಿಸಿದ್ದಾರೆ.  ಸದ್ಯ ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ಸಿನಿಮಾ ಇದೇ ಆಗಸ್ಟ್ 13ರಂದು ಬಿಡುಗಡೆ ಆಗಲಿದೆ.