ರಷ್ಯಾ ಭಾಷೆಯಲ್ಲಿ ರಶ್ಮಿಕಾ ಮಂದಣ್ಣ- ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ 'ಪುಷ್ಪ'; ಯಾವಾಗ ರಿಲೀಸ್?
ತೆಲುಗಿನ ಸೂಪರ್ ಹಿಟ್ ಪುಷ್ಪ: ದಿ ರೈಸ್ ಸಿನಿಮಾ ರಷ್ಯಾ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಭಾರತದಲ್ಲಿ ಸೂಪರ್ ಸಕ್ಸಸ್ ಕಂಡ ಪುಷ್ಪ ಸಿನಿಮಾ ಇದೀಗ ರಷ್ಯಾದಲ್ಲಿ ರಿಲೀಸ್ ಆಗುತ್ತಿರುವುದು ಸಿನಿಮಾತಂಡಕ್ಕೆ ಸಂತಸದ ವಿಚಾರವಾಗಿದೆ.
ತೆಲುಗಿನ ಸೂಪರ್ ಹಿಟ್ ಪುಷ್ಪ: ದಿ ರೈಸ್ ಸಿನಿಮಾ ರಷ್ಯಾ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ತೆಲುಗು ಸೇರಿದಂತೆ ಅನೇಕ ಭಾಷೆಯಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿರುವ ಪುಷ್ಪ: ದಿ ರೈಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು. ಹಿಂದಿಯಲ್ಲೂ ಅಲ್ಲು ಅರ್ಜುನ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಡಬ್ ಆಗಿ ರಿಲೀಸ್ ಆಗಿದ್ದ ಪುಷ್ಪ ಸಿನಿಮಾ ಇದೀಗ ರಷ್ಯಾ ಭಾಷೆಯಲ್ಲಿ ಬರ್ತಿದೆ. ಅಂದಹಾಗೆ ಪುಷ್ಪ: ದಿ ರೈಸ್ ರಷ್ಯಾದಲ್ಲಿ ಡಿಸೆಂಬರ್ 8 ರಂದು ಬಿಡುಗಡೆ ಆಗುತ್ತಿದೆ. ಬಹು ಭಾಷೆಗಳಲ್ಲಿ ಮೋಡಿ ಮಾಡಿದ ನಂತರ ಇದೀಗ ಪುಷ್ಪ: ದಿ ರೈಸ್ ರಷ್ಯಾ ಭಾಷೆಯ ಟ್ರೈಲರ್ ಬಿಡುಗಡೆಯಾಗಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಅಭಿಮಾನಿಗಳಲ್ಲಿ ವಿಶೇಷವಾದ ಕ್ರೇಜ್ ಹುಟ್ಟುಹಾಕಿದೆ. ಅಲ್ಲದೇ ಆ ಕ್ರೇಜ್ ಬಿಡುಗಡೆಯಾದ ಮೊದಲ ದಿನದಿಂದ ನಿರಂತರವಾಗಿ ಏರಿಕೆ ಕಂಡಿದೆ. ವಿದೇಶಗಳಲ್ಲೂ ಸಖತ್ ಸದ್ದು ಮಾಡಿದ ಈ ಚಿತ್ರ ಇದೀಗ ಡಿಸೆಂಬರ್ 8 ರಂದು ರಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಚಿತ್ರವು ಡಿಸೆಂಬರ್ 1 ರಂದು ಮಾಸ್ಕೋದಲ್ಲಿ ಮತ್ತು ಡಿಸೆಂಬರ್ 3 ರಂದು ಸೆಂಟ್ ಪೀಟರ್ ಬರ್ಗ್‌ನಲ್ಲಿ ಮೊದಲ ಪ್ರದರ್ಶನವನ್ನು ಕಾಣಲಿದ್ದು ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ರಷ್ಯಾದ 24 ನಗರಗಳಲ್ಲಿ ನಡೆಯಲಿರುವ ಐದನೇ ಭಾರತೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿಯೂ ಚಲನಚಿತ್ರವು ಮೊದಲಿಗೆ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.
ಜೇಮ್ಸ್ ಕ್ಯಾಮೆರಾನ್ 'ಅವತಾರ್-2'ಗು ಅಲ್ಲುಅರ್ಜುನ್ 'ಪುಷ್ಪ-2'ಗೂ ಇದೆ ಲಿಂಕ್; ಏನದು?
ಡಿಸೆಂಬರ್ 8 ರಂದು ರಷ್ಯಾದ ಎಲ್ಲಾ ಕಡೆ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಇಡೀ ತಂಡ ರಷ್ಯಾಗೆ ಹಾರಿದೆ. ರಷ್ಯಾದಲ್ಲಿ ಪ್ರದರ್ಶನಗೊಳ್ಳುತ್ತಿರುವ ಶೋನಲ್ಲಿ ತಂಡ ಭಾಗಿಯಾಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸುಕುಮಾರ್ ಸೇರಿದಂತೆ ಇಡೀ ತಂಡ ರಷ್ಯಾದಲ್ಲಿ ಬೀಡು ಬಿಟ್ಟಿದೆ. ಅಂದಹಾಗೆ ಪುಷ್ಪ ಮೊದಲನೇ ಭಾಗ ಸೂಪರ್ ಹಿಟ್ ಆದ ಬಳಿಕ ಸಿನಿಮಾತಂಡ ಪಾರ್ಟ್-2 ನಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಮುಹೂರ್ತ ಸಮಾರಂಭ ನೆರವೇರಿದ್ದು ಚಿತ್ರೀಕರಣ ಪ್ರಾರಂಭವಾಗಿದೆ.
ಅಲ್ಲು ಅರ್ಜುನ್ ಜೊತೆ ರಷ್ಯಾಗೆ ಹಾರಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್
ಪುಷ್ಪ-2 ಬಗ್ಗೆ
ಪುಷ್ಪ ಸೂಪರ್ ಹಿಟ್ ಬಳಿಕ ಪುಷ್ಪ-2 ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಅಲ್ಲು ಅರ್ಜುನ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮುಂದುವರೆಯಲಿದ್ದಾರೆ. ಇನ್ನೂ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಫಹಾದ್ ಮೊದಲ ಭಾಗದ ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದರು. ಎರಡನೇ ಭಾಗದಲ್ಲಿ ಸಂಪೂರ್ಣವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಮತ್ತು ಫಹಾದ್ ಕಾಳಗ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.