ಪುಷ್ಪ 2 ರಿಲೀಸ್ ದಿನವೇ ಗೇಮ್ ಚೇಂಜರ್ ರಿಲೀಸ್; ಅಲ್ಲು ಅರ್ಜುನ್ - ರಾಮ್ ಚರಣ್ ಜಟಾಪಟಿ?
ಸೆನ್ಸೇಷನ್ ಕ್ರಿಯೇಟ್ ಮಾಡಲಿದೆ ಡಿಸೆಂಬರ್ ತಿಂಗಳು. ಡಬಲ್ ಸ್ಟಾರ್ ನಟರ ಸಿನಿಮಾ ಒಟ್ಟೊಟ್ಟಿಗೆ ರಿಲೀಸ್......
ತಮಿಳು ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಪುಷ್ಪ 2 ಸಿನಿಮಾ ಡಿಸೆಂಬರ್ 6ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಪ್ರಕಾಶ್ ರಾಜ್, ಸಾಯಿ ಪಲ್ಲವಿ, ಜಗಪತಿ ಬಾಬು,ಅನಸೂಯ ಭಾರದ್ವಾಜ್ ಸೇರಿದಂತೆ ದೊಡ್ಡ ತಾರ ಬಳಗವಿದೆ. ಹೀಗಾಗಿ ಸಿನಿಮಾ ರಿಲೀಸ್ ಆಗಿ ಹೆಚ್ಚು ಕಮ್ಮಿ ಅಂದ್ರು 1 ತಿಂಗಳು ಹೌಸ್ ಫುಟ್ ಆಗುವುದರಲ್ಲಿ ಅನುಮಾನವಿಲ್ಲ ಏಕೆಂದರೆ ಆ ಸಮಯದಲ್ಲಿ ಇನ್ನಿತ್ತರ ಸಿನಿಮಾ ರಿಲೀಸ್ ಅನೌನ್ಸ್ ಮಾಡಿಲ್ಲ. ಆದರೀಗ ಚಿತ್ರತಂಡಕ್ಕೆ ದೊಡ್ಡ ಶಾಕ್ ಕಾದಿದೆ.......
ಹೌದು! ಪುಷ್ಪ 2 ಸಿನಿಮಾ ರಿಲೀಸ್ ಸಮಯದಲ್ಲಿ ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಯಾವ ಕಾರಣಕ್ಕೆ ಡಿಸೆಂಬರ್ 6ರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ ಆದರೆ ಪ್ರೇಕ್ಷಕರ ಗಮನ ಸೆಳೆಯುವುದರಲ್ಲಿ ರಾಮ್ ಯಶಸ್ವಿಯಾಗುತ್ತಾರೆ ಅನ್ನೋದು ಚಿತ್ರರಂಗದ ಮಾತು. ಆರ್‌ಆರ್‌ಆರ್ ಸಿನಿಮಾ ನಂತರ ರಾಮ್ ಯಾವ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ? ಹೇಗೆ ಮತ್ತೊಂದು ಹಿಟ್ ಕೊಡಲಿದ್ದಾರೆ ಅನ್ನೋ ಪ್ರಶ್ನೆಗೆ ಗೇಮ್ ಚೇಂಜರ್ ಉತ್ತರ ಆಗಲಿದೆ. ಇಲ್ಲಿ ಇರುವ ಮತ್ತೊಂದು ಟ್ವಿಸ್ಟ್ ಏನೆಂದರೆ ಪೂರಿ ಜಗನ್ನಾಥ್ ನಿರ್ದೇಶನ ಮಾಡಿರುವ ಡಬಲ್ ಇಸ್ಮಾರ್ಟ್ ಸಿನಿಮಾ ಕೂಡ ರಿಲೀಸ್‌ಗೆ ಸಜ್ಜಾಗಿದೆ. ಹೀಗಾಗಿ ಪುಷ್ಪ 2 ಸಿನಿಮಾ ಇದೇ ವರ್ಷ ರಿಲೀಸ್ ಮಾಡ್ತಾರಾ ಇಲ್ಲ ಮುಂದಿನ ವರ್ಷಕ್ಕೆ ಡೇಟ್ ಫಿಕ್ಸ್ ಮಾಡುತ್ತಾರ ಕಾದು ನೋಡಬೇಕಿದೆ.
ಡಾರ್ಕ್ ಸರ್ಕಲ್ ಜಾಸ್ತಿ ಆಗ್ತಿದೆ ನೋಡ್ಕೋ; 'ಅಮೃತಾಧಾರೆ' ಮಹಿ ಹೊಸ ಲುಕ್‌ನೂ ಮೆಚ್ಚಲಿಲ್ಲ ನೆಟ್ಟಿಗರು!
IAS ಆಫೀಸರ್ ಪಾತ್ರದಲ್ಲಿ ರಾಮ್ ಚರಣ್ ' ಗೇಮ್ ಚೇಂಜರ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ನಟಿ ಕಿಯಾರಾ ಅಡ್ವಾನಿ ಜೋಡಿಯಾಗಿದ್ದಾರೆ. ಈ ಚಿತ್ರದಲ್ಲಿ ಅಂಜಲಿ, ಜಯರಾಮ್, ಎಸ್‌ಜೆ ಸೂರ್ಯ, ಸುನೀಲ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರ ಬಳಗವಿದೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿದಿದೆ, ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಆರ್‌ಕೆ ಬೀಜ್ ಬಳಿ ಚಿತ್ರೀಕರಣ ಮಾಡುತ್ತಿದ್ದ ಸಣ್ಣ ವಿಡಿಯೋ ವೈರಲ್ ಆಗಿತ್ತು. ರಾಮ್ ಚರಣ್ ಲುಕ್ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ತೋಟದಲ್ಲಿ ಟೊಮೆಟೊ ಬೆಳೆದ ರೈತ; ದೃಷ್ಠಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಫೋಟೋ ಹಾಕಿದ!
ಪುಷ್ಪ 2 ಸಿನಿಮಾ 60 ದಿನಗಳ ಚಿತ್ರೀಕರಣ ಉಳಿಸಿಕೊಂಡಿದೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಿರ್ದೇಶಕ ಸುಕುಮಾರ್ ಮತ್ತು ಅಲ್ಲು ಅರ್ಜುನ್ ನಡುವಿನ ವೈ ಮನಸ್ಸಿನಿಂದ ಚಿತ್ರೀಕರಣ ತಡವಾಗುತ್ತಿದೆ ಹಾಗ ರಿಲೀಸ್ ಡೇಟ್ ಮುಂದೆ ಹೋಗುತ್ತಿದೆ ಎಂದು. ಈ ಗಾಸಿಪ್‌ಗೆ ಚಿತ್ರತಂಡ ಬ್ರೇಕ್ ಹಾಕಿದೆ.