2023ರ ನಿರೀಕ್ಷೆಯ ಸಿನಿಮಾಗಳಲ್ಲಿ ದಕ್ಷಿಣದ ಏಕೈಕ ಚಿತ್ರ; ಶಾರುಖ್, ಸಲ್ಮಾನ್ ಹಿಂದಿಕ್ಕಿದ ಅಲ್ಲು ಅರ್ಜುನ್
2023ರ ನಿರೀಕ್ಷೆ ಸಿನಿಮಾಗಳಲ್ಲಿ ಪುಷ್ಪ-2 ಮೊದಲ ಸ್ಥಾನದಲ್ಲಿದೆ. ಶಾರುಖ್, ಅಕ್ಷಯ್, ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿ ಅಲ್ಲು ಅರ್ಜುನ್ ಮುನ್ನುಗ್ಗಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳು ಅಬ್ಬರಿಸುತ್ತಿವೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಸೌತ್ ಸಿನಿಮಾಗಳ ಹವಾ ಜೋರಾಗಿದೆ. ಭಾರತದ ಸಿನಿಮಾ ಎಂದರೆ ಬಾಲಿವುಡ್ ಮಾತ್ರ ಎನ್ನುವ ಕಾಲವಿತ್ತು. ಆದರೀಗ ಹಾಗಿಲ್ಲ. ಕಾಲ ಬದಲಾಗಿದೆ. ಪ್ರಾದೇಶಿಕ ಭಾಷೆಯ ಸಿನಿಮಾಗಳು ಗಮನ ಸೆಳೆಯುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. 2023ರಲ್ಲೂ ಸೌತ್ ಸಿನಿಮಾರಂಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಭಾರಿಯ ನಿರೀಕ್ಷೆ ಸಿನಿಮಾಗಳ ಲಿಸ್ಟ್‌ನಲ್ಲಿ ದಕ್ಷಿಣ ಭಾರತದ ಸಿನಿಮಾ ಕೂಡ ಇದೆ. ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ತೆಲುಗು ಸಿನಿಮಾರಂಗದ ಪುಷ್ಪ-2 ಚಿತ್ರ ಸ್ಥಾನದಲ್ಲಿದೆ.
ಒರಮ್ಯಾಕ್ಸ್ ಆಗಾಗ ಸರ್ವೆ ಮಾಡಿ ಲಿಸ್ಟ್ ರಿಲೀಸ್ ಮಾಡುತ್ತಿರುತ್ತದೆ. ಬಹುನಿರೀಕ್ಷಿತ ಸಿನಿಮಾಗಳು, ಬೇಡಿಕೆ ಇರುವ ನಟರ ಪಟ್ಟಿಯನ್ನು ಒರಮ್ಯಾಕ್ಸ್ ರಿಲೀಸ್ ಮಾಡುತ್ತದೆ. 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಈ ಪೈಕಿ ಶಾರುಖ್ ಖಾನ್, ಅಕ್ಷಯ್ ಕುಮಾರ್ ಸಿನಿಮಾಗಳನ್ನು ಹಿಂದಿಕ್ಕೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ನಂಬರ್ 1 ಸ್ಥಾನದಲ್ಲಿದ್ದಾರೆ. ದಕ್ಷಿಣ ಭಾರತದ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.
Oo Antava: ಪುಷ್ಪಾ-2ನಲ್ಲೂ ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ನಟಿ ಹೇಳಿದ್ದೇನು?
ಒರಮ್ಯಾಕ್ಸ್ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ‘ಪುಷ್ಪ: ದಿ ರೂಲ್’ ಮೊದಲ ಸ್ಥಾನದಲ್ಲಿದೆ ಇದೆ. ಎರಡನೇ ಸ್ಥಾನದಲ್ಲಿ ‘ಹೇರಾ ಫೇರಿ 3’ ಸಿನಿಮಾ ಇದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಮೂರನೇ ಸ್ಥಾನದಲ್ಲಿದೆ. ಸಲ್ಮನಾ ಖಾನ್ ‘ಟೈಗರ್ 3’ ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ‘ಭೂಲ್ ಭುಲಯ್ಯ 3’ ಸಿನಿಮಾ ಕೂಡ ಈ ಪಟ್ಟಿಯಲ್ಲಿದೆ. ದಕ್ಷಿಣ ಭಾರತದಿಂದ ಏಕೈಕ ಸಿನಿಮಾವಿದ್ದು ಅದು ಮೊದಲ ಸ್ಥಾನದಲ್ಲಿರುವುದು ವಿಶೇಷ.
ಅಲ್ಲು ಅರ್ಜುನ್ ಅಭಿಮಾನಿಗಳಿಗೆ ನಿರಾಸೆ: 'ಪುಷ್ಪ-2' ಶೂಟಿಂಗ್ ಮತ್ತೆ ಸ್ಥಗಿತ, ಕಾರಣವೇನು?
ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಬಗ್ಗೆ ಹೇಳುವುದಾರೆ ಮೊದಲ ಭಾಗದ ಸೂಪರ್ ಸಕ್ಸಸ್ ಬಳಿಕ 2ನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು. ಸುಕುಮಾರ್ ಸಾರಥ್ಯದಲ್ಲಿ ಬಂದ ಪುಷ್ಪ ಸಿನಿಮಾ ಎಲ್ಲಾ ಭಾಷೆಯ ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಪಾರ್ಟ್-2 ಸಿದ್ಧವಾಗುತ್ತಿದ್ದು ಭಾರಿ ನಿರೀಕ್ಷೆ ಮೂಡಿಸಿದೆ. ಇದು ಕೇವಲ ಸೌತ್‌ನಲ್ಲಿ ಮಾತ್ರವಲ್ಲದೇ ಇಡೀ ಭಾರತದ ನಿರೀಕ್ಷೆಯ ಸಿನಿಮಾ ಎನ್ನುವುದು ವಿಶೇಷವಾಗಿದೆ.