ಆದಿಪುರುಷ ಚಿತ್ರ ಬಿಡುಗಡೆಯಾದ ಬಳಿಕ ಪರ ವಿರೋಧಗಳು ಹೆಚ್ಚಾಗುತ್ತಿದೆ. ಚಿತ್ರ ಸನಾತನ ಧರ್ಮಕ್ಕೆ ವಿರುದ್ಧವಾಗಿದೆ. ಹಿಂದೂ ನಂಬಿಕೆಗೆ ಧಕ್ಕೆ ತಂದಿದೆ. ಪ್ರಮುಖವಾಗಿ ರಾಮಾಣವನ್ನೇ ವ್ಯಂಗ್ಯ ಮಾಡಿದಂತಿದೆ ಎಂಬ ಆರೋಪ, ಆಕ್ರೋಶ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಶನ್ ಪ್ರಧಾನಿ ಮೋದಿಗೆ ಪತ್ರ ಬರೆದು, ಚಿತ್ರ ನಿಷೇಧಕ್ಕೆ ಆಗ್ರಹಿಸಿದೆ.

ನವದೆಹಲಿ(ಜೂ.20): ಪ್ರಭಾಸ್ ಅಭಿಯನಯದ ಆದಿಪುರುಷ್ ಚಿತ್ರ ದೇಶಾದ್ಯಂತ ತೆರೆಕಂಡಿದೆ. ಬರೋಬ್ಬರಿ 600 ಕೋಟಿ ರೂಪಾಯಿ ವೆಚ್ಟದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಈ ಚಿತ್ರ ರಾಮಾಯಣಕ್ಕೆ ಅವಮಾನ ಮಾಡಿದೆ ಅನ್ನೋ ಕೂಗು ಜೋರಾಗುತ್ತಿದೆ. ಸನಾತನ ಧರ್ಮದ ವಿರುದ್ಧವಾಗಿದೆ. ಶ್ರೀರಾಮ ಹಾಗೂ ಶ್ರಿ ಹನುಮಾನ್‌ಗೆ ಅಪಮಾನ ಮಾಡಲಾಗಿದೆ ಎಂದು ಹಲವೆಡೆ ಹಿಂದೂಪರ ಸಂಘಟೆಗಳು ಪ್ರತಿಭಟನೆ ಮಾಡುತ್ತಿದೆ. ಇದರ ಬೆನ್ನಲ್ಲೇ ಅಖಿಲ ಭಾರತ ಸಿನಿ ಕಾರ್ಮಿಕ ಸಂಘ(AICWA) ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಚಿತ್ರ ನಿಷೇಧಿಸಲು ಆಗ್ರಹಿಸಿದೆ.

ಆದಿಪುರುಷ್ ಚಿತ್ರ ಪ್ರದರ್ಶನವನ್ನು ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿನ ಪ್ರದರ್ಶನವನ್ನು ನಿಷೇಧಿಸಬೇಕು ಎಂದು AICWA ಆಗ್ರಹಿಸಿದೆ. ಅದಿಪುರುಷ ಚಿತ್ರದ ಸ್ಕ್ರೀನ್‌ಪ್ಲೇ ಹಾಗೂ ಸಂಭಾಷಣೆ ಶ್ರೀರಾಮ ಹಾಗೂ ಶ್ರೀ ಹನುಮಾನ್‌ಗೆ ಮಾಡಿದ ಅಪಮಾನವಾಗಿದೆ. ಆದಿಪುರುಷ ಚಿತ್ರ ಹಿಂದೂ ಧಾರ್ಮಿಕ ನಂಬಿಕೆ ಹಾಗೂ ಸನಾತನ ಧರ್ಮಕ್ಕೆ ವಿರುದ್ಧವಾಗಿದೆ ಎಂದು AICWA ಮೋದಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ.

ವಿವಾದಗಳ ಗೂಡಾಗಿದೆ ಪ್ರಭಾಸ್ ನಟನೆಯ ಆದಿಪುರುಷ್!: ಇನ್ಮುಂದೆ ಬಾಲಿವುಡ್ ಸಿನಿಮಾಗೆ ಹೊಸ ರೂಲ್ಸ್‌!

ಭಾರತದಲ್ಲಿ ಪ್ರಭು ಶ್ರೀರಾಮ ಆರಾದ್ಯ ದೈವ. ಹಿಂದೂಗಳ ಧಾರ್ಮಿಕ ನಂಬಿಕೆಯನ್ನೇ ಈ ಚಿತ್ರ ಪ್ರಶ್ನಿಸುತ್ತಿದೆ. ಈ ಚಿತ್ರದಲ್ಲಿ ಶ್ರೀರಾಮ ಹಾಗೂ ರಾವಣ ವಿಡಿಯೋ ಗೇಮ್ ಪಾತ್ರಗಳ ರೀತಿ ಚಿತ್ರಿಸಲಾಗಿದೆ. ಜೊತೆಗೆ ಈ ಚಿತ್ರದಲ್ಲಿನ ಸಂಭಾಷಣೆ ಎಲ್ಲಾ ಭಾರತೀಯರನ್ನು ಘಾಸಿಗೊಳಿಸುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಈ ಚಿತ್ರ ಪ್ರದರ್ಶನವನ್ನು ತಕ್ಷಣವೇ ತಡೆ ಹಿಡಿಯಬೇಕು. ಇದರ ಜೊತೆಗೆ ಐಟಿಟಿ ಪ್ಲಾಟ್‌ಫಾರ್ಮ್‌ನಲ್ಲೂ ಈ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು. ಈ ಮೂಲಕ ವಿದೇಶಗಳಲ್ಲಿ ಭಾರತದ ಸನಾತನ ಧರ್ಮಕ್ಕೆ ಆಗುವ ಧಕ್ಕೆಯನ್ನು ತಡೆಯಬೇಕು ಎಂದು ಮನವಿ ಮಾಡಲಾಗಿದೆ.

ಹಿಂದೂಗಳ ನಂಬಿಕೆ ಧಕ್ಕೆ ತಂದ, ಹಿಂದೂಗಳ ಮನಸ್ಸಿನಲ್ಲಿರುವ ಶ್ರೀ ರಾಮ, ಹನುಮಾನ, ಸೀತಾ ಮಾತೆ, ರಾವಣನ ಚಿತ್ರಣವನ್ನೇ ಬದಲಿಸಲು ಹೊರಟ ಆದಿಪುರುಷ ಚಿತ್ರದ ನಿರ್ದೇಶಕ ಒಮ್ ರಾವತ್, ಚಿತ್ರದ ಸಂಭಾಷಣೆಗಾರ ಮನೋಜ್ ಮುನ್ತಾಶಿರ್ ಹಾಗೂ ಚಿತ್ರ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲಿ ನಿರ್ಮಾಣವಾದ ಈ ರೀತಿಯ ಕೆಟ್ಟ ಚಿತ್ರದಲ್ಲಿ ಪ್ರಭಾಸ್, ಕೃತಿ ಸನನ್ ಹಾಗೂ ಸೈಫ್ ಆಲಿ ಖಾನ್ ಕಾಣಿಸಿಕೊಂಡಿರುವುದು ದುರಂತ. ಆದಿಪುರುಷ ಚಿತ್ರ ಶ್ರೀರಾಮ ಮೇಲಿರುವ ನಂಬಿಕೆ, ಶ್ರದ್ಥೆ ಹಾಗೂ ಭಕ್ತಿಯನ್ನೇ ಘಾಸಿಗೊಳಿಸುತ್ತಿದೆ ಎಂದು AICWA ಪತ್ರದಲ್ಲಿ ಹೇಳಿದೆ.

ಕನ್ನಡದ ಅಣ್ಣಾವ್ರ ಪಾತ್ರ, ಆ್ಯಕ್ಟಿಂಗ್ ಮುಂದೆ ಯಾವ ಆದಿಪುರುಷ್ ಸಿನಿಮಾನೂ ಇಲ್ಲ!

ಶ್ರೀರಾಮ ಹಾಗೂ ಹನುಮಾನ್ ಭಕ್ತರ ಆಕ್ರೋಶಕ್ಕೆ ಮಣಿದಿರುವ ಚಿತ್ರತಂಡ ಕೆಲ ಸಂಭಾಷಣೆಗೆ ಕತ್ತರಿ ಹಾಕಲು ಮುಂದಾಗಿದೆ. ಆದರೆ ಎಲ್ಲಾ ರಾಜ್ಯದಲ್ಲಿ ಕತ್ತರಿ ಪ್ರಯೋಗವಿಲ್ಲ. ಚಿತ್ರದಲ್ಲಿ ಟಪೋರಿ ಭಾಷೆ ಬಳಸಲಾಗಿದೆ. ಸಜ್ಜನಿಕೆ ಮತ್ತು ಗಂಭೀರತೆ ಪ್ರತೀಕವಾದ ಶ್ರೀರಾಮ ಮತ್ತು ಹನುಮಂತನಿಗೆ ಚಿತ್ರದಲ್ಲಿ ಅಗೌರವ ತೋರಿಸಲಾಗಿದೆ. ಚಿತ್ರದಲ್ಲಿ ಬೀದಿ ಬದಿಯ ಭಾಷೆ ಬಳಸಲಾಗಿದೆ. ಇಂಥ ಚಿತ್ರದ ಮೂಲಕ ರಾಮ, ಸೀತೆ, ಹನುಮಂತನಿಗೆ ಚಿತ್ರ ತಂಡ ಅವಮಾನ ಮಾಡಿದೆ. ಅವರು ದೇಶದ ಮತ್ತು ಭಕ್ತರ ಕ್ಷಮೆ ಕೇಳಬೇಕು ಎಂಬ ಆಗ್ರಹ ಹೆಚ್ಚಾಗಿತ್ತು.