Asianet Suvarna News Asianet Suvarna News

ಬಿಪಾಶಾ ಮಗಳಿಗೆ ಸರ್ಪ್ರೈಸ್ ನೀಡಿದ ಆಲಿಯಾ, ಗಿಫ್ಟ್ ನೋಡಿ ದೇವಿ ಫುಲ್ ಖುಷ್!

ಬಾಲಿವುಡ್ ನಟಿಯರಾದ ಆಲಿಯಾ ಭಟ್ ಮತ್ತು ಬಿಪಾಶಾ ಬಸು ಮಕ್ಕಳ ವಿಷ್ಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಆಲಿಯಾ, ಬಿಪಾಶಾ ಮಗಳಿಗೆ ಉಡುಗೊರೆ ನೀಡಿದ್ದು, ಅದನ್ನು ನೋಡ್ತಿದ್ದಂತೆ ಮುದ್ದು ಮಗಳ ಮುಖದಲ್ಲಿ ನಗು ಮೂಡಿದೆ.
 

Alia Bhatt Sends Gifts To Bipasha Basus Daughter Devi Latter Shares Picture roo
Author
First Published Jul 5, 2024, 1:27 PM IST

ಬಾಲಿವುಡ್ ಬೆಡಗಿ ಆಲಿಯಾ ಭಟ್ (Bollywood Actress Alia Bhatt), ನಟಿ ಬಿಪಾಶಾ ಬಸು ಮಗಳಿಗೆ ಗಿಫ್ಟ್ ಕಳುಹಿಸಿ ಸುದ್ದಿ ಮಾಡಿದ್ದಾರೆ. ಆಲಿಯಾ ಭಟ್, ಉಡುಗೊರೆ ನೋಡ್ತಿದ್ದಂತೆ ಬಿಪಾಶಾ ಖುಷಿ ದುಪ್ಪಟ್ಟಾಗಿದೆ. ದುಬಾರಿ ಗಿಫ್ಟ್ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಬಿಪಾಶಾ ಬಸು, ಈ ಉಡುಗೊರೆ ನೋಡಿ ತನ್ನ ಮಗಳು ದೇವಿ ಹೇಗೆ ರಿಯಾಕ್ಟ್ ಮಾಡಿದ್ದಾಳೆ ಎಂಬುದನ್ನು ಬರೆದಿದ್ದಾರೆ. ಅಲ್ಲದೆ ಆಲಿಯಾ ಭಟ್ ಗೆ ಧನ್ಯವಾದ ಹೇಳಿದ್ದಾರೆ. ಅಷ್ಟಕ್ಕೂ ಆಲಿಯಾ ಭಟ್, ದೇವಿಗೆ ನೀಡಿದ ಉಡುಗೊರೆ ಏನು ಗೊತ್ತಾ?.

ಬಾಲಿವುಡ್ (Bollywood) ನ ಇಬ್ಬರು ನಟಿಯರಾದ ಆಲಿಯಾ ಭಟ್ (Alia Bhatt) ಹಾಗೂ ಬಿಪಾಶಾ ಬಸು (Bipasha Basu) ಒಂದೇ ವರ್ಷ ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಇಬ್ಬರೂ ತಾಯ್ತನದ ಆನಂದ ಪಡೆಯುತ್ತಿದ್ದಾರೆ. ಇಬ್ಬರ ಮಧ್ಯೆ ಒಳ್ಳೆ ಬಾಂಡಿಂಗ್ ಇದ್ದಂತಿದೆ. ಇದೇ ಕಾರಣಕ್ಕೆ ಆಲಿಯಾ, ಬಿಪಾಶಾ ಮಗಳಿಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಲಿಯಾ ಭಟ್ ನೀಡಿದ ಉಡುಗೊರೆ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಬಿಪಾಶಾ ಬಸು, ಮುದ್ದಾದ ಬಟ್ಟೆ ಹಾಗೂ ಪುಸ್ತಕ ನೀಡಿದ ಆಲಿಯಾ ಭಟ್ ಗೆ ಧನ್ಯವಾದಗಳು. ಮಗಳು ದೇವಿ ಪುಸ್ತಕ ಪ್ರೇಮಿ. ಅವಳು ಈ ಪುಸ್ತಕವನ್ನು ಇಷ್ಟಪಟ್ಟಿದ್ದಾಳೆ ಎಂದು ಬರೆದಿದ್ದಾರೆ. ಬಿಪಾಶಾ ಹಾಕಿರುವ ಪೋಸ್ಟ್ ನಲ್ಲಿ ಒಂದು ಪಿಂಕ್ ಕಲರ್ ಡ್ರೆಸ್ ಮತ್ತು ಆಲಿಯಾ ಭಟ್ ಬರೆದಿರುವ  Ed Finds a Home ಪುಸ್ತಕವಿದೆ. ಆಲಿಯಾ ಭಟ್ ಸ್ವಂತ ಮೆಟರ್ನಿಟಿ ವೇರ್ ಬ್ರ್ಯಾಂಡ್ ಹೊಂದಿದ್ದು, ತಮ್ಮ ಕಂಪನಿ ಬಟ್ಟೆಯನ್ನೇ ಬಿಪಾಶಾ ಮಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.  

ಯಮ ಬಂದು ಕರೆದ್ರೂ ಒಂದ್ನಿಮಿಷ ನಿಲ್ಲು, ನಮ್ಮಮ್ಮಂದು ಒಂದ್ ಕೆಲ್ಸ ಮುಗ್ಸಿ ಬರ್ತೀನಿ ಅಂತೀನಿ..!

ಬಿಪಾಶಾ ಹಾಗೂ ಆಲಿಯಾ ಭಟ್ 2022ರಲ್ಲಿ ಮುದ್ದಾದ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಲಿಯಾ ಮಗಳ ಹೆಸರು ರಾಹಾ. ಬಿಪಾಶಾ ಬಸು ಮಗಳ ಹೆಸರು ದೇವಿ. ಇಬ್ಬರು ನಟಿಯರೂ ತಮ್ಮ ಮಕ್ಕಳ ಜೊತೆ ಎಂಜಾಯ್ ಮಾಡ್ತಿದ್ದು, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ತಿರುತ್ತಾರೆ. ಸದ್ಯ ಬಿಪಾಶಾ, ಪತಿ ಕರಣ್ ಸಿಂಗ್ ಗ್ರೋವರ್ ಹಾಗೂ ಮಗಳ ಜೊತೆ ಎಂಜಾಯ್ ಮಾಡ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ನನ್ನ ಕುಟುಂಬ ಇರುವಲ್ಲಿಯೇ ಸ್ವರ್ಗ ಎಂದು ಶೀರ್ಷಿಕೆ ಹಾಕಿದ್ದಾರೆ. 

ಬಿಪಾಶಾ ತಮಗೆ ಮಗಳು ಹುಟ್ಟಿದ್ದು ಅತ್ಯಂತ ಖುಷಿ ವಿಷ್ಯ ಎಂಬುದನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ರು. ಸಾಕಷ್ಟು ಪ್ರಯತ್ನದ ನಂತ್ರವೂ ಗರ್ಭಧಾರಣೆ ಕಷ್ಟವಾಗಿತ್ತು. ಅದು ಏಕೆ ಅನ್ನೋದು ನಮಗೆ ತಿಳಿದಿಲ್ಲ. ಆದ್ರೆ ಮಗುವಿನ ಬಗ್ಗೆ ಮಾತನಾಡುವಾಗ್ಲೆಲ್ಲ ನಾನು ಹೆಣ್ಣು ಮಗು ಬೇಕೆನ್ನುತ್ತಿದ್ದೆ. ಅದ್ರಂತೆ ನನಗೆ ದೇವಿ ಸಿಕ್ಕಿದ್ದಾಳೆ. ಇದೊಂದು ಉಡುಗೊರೆ ಎಂದು ಬಿಪಾಶಾ ಹೇಳಿದ್ದರು.

ಇನ್ನು ಆಲಿಯಾ ಭಟ್ ಕೂಡ ನವೆಂಬರ್ 6, 2022ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಲಿಯಾ ಹಾಗೂ ರಣಬೀರ್ ಕಪೂರ್ ಮಗುವಿನ ಜೊತೆ ಸುಂದರ ಸಮಯವನ್ನು ಕಳೆಯುತ್ತಿದ್ದಾರೆ. ಇತ್ತೀಚಿಗೆ ಹೊಸ ಮನೆ ನಿರ್ಮಾಣ ವೀಕ್ಷಣೆಗೆ ಮಗುವನ್ನು ಕರೆದುಕೊಂಡು ಬಂದಿದ್ರು ಆಲಿಯಾ. 

ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟ ದೀಪಿಕಾ ಪಡುಕೋಣೆಯಿಂದ ಇದೆಂಥ ಹೇಳಿಕೆ? ಬಾಲಿವುಡ್​ನಲ್ಲಿ ಹಲ್​ಚಲ್​!

ಬಿಪಾಶಾ ಬಸು ಸದ್ಯ ಸಿನಿಮಾದಿಂದ ದೂರವಿದ್ರೆ ಆಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ನಂತ್ರ ಜಿಗ್ರಾ  ಮತ್ತು  ಲವ್ ಅಂಡ್ ವಾರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡೂ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಜೊತೆ ಎರಡನೇ ಬಾರಿ ಕೆಲಸ ಮಾಡ್ತಿರುವ ಆಲಿಯಾಗೆ  ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಸಾಥ್ ನೀಡಲಿದ್ದಾರೆ. 

Latest Videos
Follow Us:
Download App:
  • android
  • ios