Alia bhatt  : ಬಾಲಿವುಡ್ ನಟಿ ಆಲಿಯಾ ಭಟ್ ವರ್ಕ್ ಔಟ್ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಒಂದು ವಿಶೇಷತೆ ಇದೆ. ಅದೇನು ಅನ್ನೋದನ್ನು ಜಿಮ್ ಟ್ರೈನರ್ ಹೇಳಿದ್ದಾರೆ. 

ಬಾಲಿವುಡ್ ನಟಿ ಆಲಿಯಾ ಭಟ್ (Bollywood actress Alia Bhatt) ಸದ್ಯ ಪ್ರೈವಸಿ ಉಲ್ಲಂಘನೆ ವಿಷ್ಯದಲ್ಲಿ ಸುದ್ದಿಯಲ್ಲಿದ್ದಾರೆ. ನಿರ್ಮಾಣ ಹಂತದಲ್ಲಿರುವ ಮನೆಯ ಫೋಟೋ, ವಿಡಿಯೋಗಳನ್ನು ಒಪ್ಪಿಗೆ ಇಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದನ್ನು ಖಂಡಿಸಿ, ಆಲಿಯಾ ಭಟ್ ಇನ್ಸ್ಟಾಗ್ರಾಮ್ (Instagram) ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈಗ ಆಲಿಯಾ ಕ್ಯೂಟ್ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಆಲಿಯಾ ಎಂದಿನಂತೆ ವರ್ಕ್ ಔಟ್ ಮಾಡ್ತಿದ್ದಾರೆ. ಆದ್ರೆ ಈ ಫೋಟೋ ವಿಶೇಷತೆ ಅಂದ್ರೆ ಅದನ್ನು ಆಲಿಯಾ ಭಟ್ ಮಗಳು ರಾಹಾ ಕ್ಲಿಕ್ಕಿಸಿದ್ದಾರೆ.

ಫಿಟ್ನೆಸ್ ವಿಷ್ಯದಲ್ಲಿ ಆಲಿಯಾ ಭಟ್ ಸದಾ ಮುಂದಿದ್ದಾರೆ. ಮಗಳು ರಾಹಾ ಹುಟ್ಟಿದ ಕೆಲವೇ ಕೆಲ ದಿನ ಬ್ರೇಕ್ ಪಡೆದಿದ್ದ ಆಲಿಯಾ ಭಟ್ ಮತ್ತೆ ಫಿಟ್ನೆಸ್ ವರ್ಕ್ ಔಟ್ ಶುರು ಮಾಡಿದ್ರು. ಈಗ ರಾಹಾಗೆ ಎರಡುವರೆ ವರ್ಷ. ಆಗಾಗ ರಾಹಾ ಜೊತೆ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಳ್ತಿರ್ತಾರೆ. ದೀಪಿಕಾ – ರಣವೀರ್ ಹಾಗೂ ಅನುಷ್ಕಾ – ಕೊಹ್ಲಿ ಜೋಡಿಗಿಂತ ಸಂಪೂರ್ಣ ಭಿನ್ನವಾಗಿರುವ ಆಲಿಯಾ – ರಣಬೀರ್ ಎಂದೂ ತಮ್ಮ ಮಗಳ ಮುಖವನ್ನು ಹೈಡ್ ಮಾಡ್ಲಿಲ್ಲ. ರಾಹಾ ಹುಟ್ಟಿದಾಗಿನಿಂದ ಅವಳ ಮುದ್ದು ಮುಖ, ಮಾತುಗಳನ್ನು ಪಾಪರಾಜಿಗಳು ಸೆರೆ ಹಿಡಿತಾನೇ ಇದ್ದಾರೆ. ಈ ಬಾರಿ ರಾಹಾ ಫೋಟೋ ಬದಲು ರಾಹಾ ಕ್ಲಿಕ್ಕಿಸಿದ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಆಲಿಯಾ ಭಟ್ ಫಿಟ್ನೆಸ್ ಕೋಚ್ ಕರಣ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎರಡು ಫೋಟೋ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಮೀರರ್ ಮುಂದೆ ಆಲಿಯಾ ಹಾಗೂ ಕರಣ್ ಇರೋದನ್ನು ನೀವು ಕಾಣ್ಬಹುದು. ಇನ್ನೊಂದು ಫೋಟೋದಲ್ಲಿ ಆಲಿಯಾ ವರ್ಕ್ ಔಟ್ ಮಾಡ್ತಿದ್ದಾರೆ. ಫೋಟೋ ಹಂಚಿಕೊಂಡ ಕರಣ್, ಫೋಟೋವನ್ನು ರಾಹಾ ಕ್ಲಿಕ್ಕಿಸಿದ್ದಾಳೆ ಅಂತ ಶೀರ್ಷಿಕೆ ಹಾಕಿದ್ದಾರೆ.

ಫೋಟೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ರಾಹಾಳನ್ನು ಅಪ್ಪ ರಣಬೀರ್ ಕಪೂರ್ ಗೆ ಹೋಲಿಕೆ ಮಾಡಿದ್ದಾರೆ. ರಣಬೀರ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿಲ್ಲ. ಆದ್ರೆ ಆಲಿಯಾ ಭಟ್ ಫೋಟೋಗಳನ್ನು ಅವರು ಆಗಾಗ ಕ್ಲಿಕ್ಕಿಸ್ತಿರುತ್ತಾರೆ. ಈಗ ರಾಹಾ, ಅಮ್ಮನ ಫೋಟೋ ಕ್ಲಿಕ್ಕಿಸೋಕೆ ಸಿದ್ಧವಾಗಿದ್ದಾಳೆ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ನವೆಂಬರ್ 2022ರಲ್ಲಿ ರಣಬೀರ್ ಹಾಗೂ ಆಲಿಯಾ, ಪಾಲಕರಾಗಿ ಪ್ರಮೋಷನ್ ಪಡೆದಿದ್ದಾರೆ. ರಾಹಾಗೆ ಈಗ ಎರಡುವರೆ ವರ್ಷ. ರಾಹಾ, ಅಮ್ಮನ ಜೊತೆ ಜಿಮ್ ಗೆ ಹಾಜರಾಗ್ತಾಳೆ.

ಪ್ರೈವಸಿ ಬಗ್ಗೆ ಆಲಿಯಾ ಹೇಳಿದ್ದೇನು? : ಎರಡು ದಿನಗಳ ಹಿಂದೆ ಪೋಸ್ಟ್ ಒಂದನ್ನು ಹಾಕಿದ್ದ ಆಲಿಯಾ, ಮುಂಬೈನಂತಹ ನಗರದಲ್ಲಿ ಸ್ಥಳಾವಕಾಶ ಸೀಮಿತವಾಗಿದೆ ಅನ್ನೋದು ನನಗೆ ಅರ್ಥವಾಗುತ್ತೆ. ಕೆಲವೊಮ್ಮೆ ನೀವು ನಿಮ್ಮ ಕಿಟಕಿಯಿಂದ ಬೇರೆಯವರ ಮನೆಯನ್ನು ನೋಡಬಹುದು. ಆದರೆ ಇದರರ್ಥ ಖಾಸಗಿ ಮನೆಗಳ ವೀಡಿಯೊಗಳನ್ನು ಮಾಡಿ ಆನ್ಲೈನ್ನಲ್ಲಿ ಹಾಕುವ ಹಕ್ಕು ಎಲ್ಲರಿಗೂ ಇದೆ ಎಂದು ಅರ್ಥವಲ್ಲ. ನಮ್ಮ ನಿರ್ಮಾಣ ಹಂತದಲ್ಲಿರುವ ಮನೆಯ ವೀಡಿಯೊವನ್ನು ನಮ್ಮ ಗಮನಕ್ಕೆ ತರದೆ, ನಮ್ಮ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡಿ , ಪೋಸ್ಟ್ ಮಾಡಲಾಗಿದೆ. ಇದು ಸ್ಪಷ್ಟವಾಗಿ ಗೌಪ್ಯತೆಯ ಉಲ್ಲಂಘನೆ ಮತ್ತು ಗಂಭೀರ ಭದ್ರತಾ ಸಮಸ್ಯೆಯಾಗಿದೆ. ಅನುಮತಿಯಿಲ್ಲದೆ ಯಾರೊಬ್ಬರ ವೈಯಕ್ತಿಕ ಸ್ಥಳದ ವೀಡಿಯೊ ಮಾಡುವುದು ಅಥವಾ ಫೋಟೋ ತೆಗೆಯುವುದು ಕಂಟೆಂಟ್ ಅಲ್ಲ. ಇದು ಉಲ್ಲಂಘನೆಯಾಗಿದೆ. ಇದನ್ನು ಎಂದಿಗೂ ಸಾಮಾನ್ಯವೆಂದು ಪರಿಗಣಿಸಬಾರದು. ಯೋಚಿಸಿ, ನಿಮ್ಮ ಮನೆಯೊಳಗಿನ ವೀಡಿಯೊವನ್ನು ನಿಮಗೆ ತಿಳಿಯದೆ ಸಾರ್ವಜನಿಕವಾಗಿ ಹಂಚಿಕೊಳ್ಳುವುದನ್ನು ನೀವು ಸಹಿಸುತ್ತೀರಾ? ಎಂದು ಬರೆದಿದ್ದರು.