Asianet Suvarna News Asianet Suvarna News

ಕಿಸ್​ ಮಾಡಲ್ಲ ಅಂದ್ರೆ ಗಂಡಸೇ ಅಲ್ಲ ಅಂತಾರೆ, ನಮ್ಗೆ ನಾಚಿಕೆ ಇರಲ್ವಾ? ನಟ ಅಲಿ ಫಜಲ್ ಬೇಸರ

 ಕಿಸ್​ ಮಾಡಲ್ಲ ಅಂದ್ರೆ ಗಂಡಸೇ ಅಲ್ಲ ಅಂತಾರೆ, ನಮ್ಗೆ ನಾಚಿಕೆ ಇರಲ್ವಾ ಎಂದು ಬಾಲಿವುಡ್​ ನಟ ಅಲಿ ಫಜಲ್ ಬೇಸರದಿಂದ ಪ್ರಶ್ನಿಸಿದ್ದಾರೆ.
 

Ali Fazal recalls being uncomfortable with random intimate scene suc
Author
First Published Sep 18, 2023, 5:36 PM IST

ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟರು ತಮ್ಮ ಪಾತ್ರದಲ್ಲಿಯೇ  ಬದುಕುತ್ತಾರೆ,  ಅನೇಕ ಬಾರಿ ಅವರು ತಮ್ಮ ಪಾತ್ರದಲ್ಲಿ ಮುಳುಗುತ್ತಾರೆ. ನಟರ ಮಟ್ಟಿಗೆ ಹೇಳುವುದಾದರೆ ರಜನೀಕಾಂತ್​, ರಣವೀರ್ ಸಿಂಗ್, ಆಮೀರ್ ಖಾನ್, ಶಾರುಖ್​ ಖಾನ್​ರಂಥ ಅನೇಕ ನಟರು ತಮ್ಮ ಪಾತ್ರದಲ್ಲಿಯೇ ಬದುಕಿ,  ತಮ್ಮ ಪಾತ್ರಗಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾರೆ.  ಅನೇಕ ಬಾರಿ ಕೆಲವು ಪಾತ್ರಗಳು ಈ ಕಲಾವಿದರ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಅಂಥೊಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಟ ಅಲಿ ಫಜಲ್​.  2009ರಲ್ಲಿ ಅಮೇರಿಕನ್ ದೂರದರ್ಶನ ಕಿರುಸರಣಿ ಬಾಲಿವುಡ್ ಹೀರೋನಲ್ಲಿ ಕಾಣಿಸಿಕೊಳ್ಳುವ ಮೂಲಕ, ಇಂಗ್ಲಿಷ್ ಭಾಷೆಯ ಚಲನಚಿತ್ರ ದಿ ಅದರ್ ಎಂಡ್ ಆಫ್ ದಿನಲ್ಲಿ ಸಣ್ಣ ಪಾತ್ರದೊಂದಿಗೆ ಹಿರಿತೆರೆಗೆ ಪಾದರ್ಪಣೆ ಮಾಡಿದರು  3 ಈಡಿಯಟ್ಸ್​ನಲ್ಲಿ ಪೋಷಕ ಪಾತ್ರದೊಂದಿಗೆ ಬಾಲಿವುಡ್​ ಪ್ರವೇಶಿಸಿದ ಅವರು, ಬಳಿಕ ಆಲ್ವೇಸ್ ಕಭಿ ಕಭಿ (2011), ಬಾತ್ ಬಾನ್ ಗಯಿ (2013), ಮತ್ತು ಬಾಬಿ ಜಾಸೂಸ್ (2014) ನಲ್ಲಿ ನಟಿಸಿದ್ದಾರೆ. ಹಾಸ್ಯ ಚಿತ್ರಗಳಾದ ಫುಕ್ರೆ (2013), ಹ್ಯಾಪಿ ಭಾಗ್ ಜಾಯೇಗಿ (2016), ಫುಕ್ರೆ ರಿಟರ್ನ್ಸ್ (2017) ನಲ್ಲಿ ಅವರ ಪಾತ್ರಗಳಿಗೆ ಹೆಚ್ಚಿನ ಯಶಸ್ಸು ಸಿಕ್ಕಿತು. 

ನಟ ಈಗ ಒಂದು ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಅದೇನೆಂದರೆ  ನಟನಿಗೆ ನಾಚಿಕೆ ಇರಲ್ಲ, ಎಲ್ಲದಕ್ಕೂ ರೆಡಿ ಅಂದ್ಕೋತಾರೆ ಎನ್ನುವ ನೋವಿನ ಮಾತನ್ನಾಡಿದ್ದಾರೆ. ತಾವು ಚಿತ್ರವೊಂದರಲ್ಲಿ ಲಿಪ್​ ಲಾಕ್​ನ ಇಂಟಿಮೇಟ್​ ಸೀನ್​ ಮಾಡಲು ನಿರಾಕರಿಸಿದಾಗ, ಎಲ್ಲರೂ ತಮ್ಮನ್ನು ಹೇಗೆ ಲೇವಡಿ ಮಾಡಿದರು ಎನ್ನುವ ಘಟನೆಯನ್ನು ಅವರು ಪ್ರಸ್ತಾಪಿಸಿದ್ದಾರೆ.

ಬಾಲ್ಯದಲ್ಲಿಯೇ ಲವ್​ ಲೆಟರ್​ ಬರ್ದು ಸಿಕ್ಕಿಬಿದ್ದು ಪ್ರೀತಿ, ಮದ್ವೆಗೆ ಹೆದರ್ತಿರೋ ಸಾಯಿ ಪಲ್ಲವಿ!

 ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಅಲಿ ಫಜಲ್, ಚಿತ್ರಗಳಲ್ಲಿ ಇಂಟಿಮೇಟ್​ ದೃಶ್ಯಗಳು ಇದ್ದರೆ ಅದು ಒಪ್ಪಿಗೆಯೋ ಇಲ್ಲವೋ ಎಂಬ ಬಗ್ಗೆ ನಟಿಯರನ್ನು ವಿಚಾರಿಸುತ್ತಾರೆ. ಇಂಥ ಯಾವುದೇ ದೃಶ್ಯವಿದ್ದರೂ ಆಕೆಯ ಜೊತೆ ಚರ್ಚಿಸಲಾಗುತ್ತದೆ. ಆದರೆ ಈ ವಿಷಯವನ್ನು ನಟರಿಗೆ ಬಹುತೇಕ ನಿರ್ದೇಶಕರು ಹೇಳುವುದೇ ಇಲ್ಲ. ಏಕೆಂದರೆ ಇಂಥ ದೃಶ್ಯಗಳನ್ನು ಅವರು ಈಸಿಯಾಗಿ ಮಾಡಬಲ್ಲರು ಎನ್ನುವುದು ಅವರ ಅನಿಸಿಕೆ. ಪುರುಷರಿಗೆ ನಾಚಿಕೆ ಇಲ್ಲ, ಕಿಸ್​ ಕೊಡಲು ಅವರು ತುದಿಗಾಲಿನಲ್ಲಿ ನಿಂತಿರುತ್ತಾರೆ ಎನ್ನುವ ಮನೋಭಾವ ಇದೆ. ಇಂಥ ಕೆಟ್ಟ ಸ್ಥಿತಿಯನ್ನು ನಾನು ಅನುಭವಿಸಬೇಕಾಯಿತು ಎಂದಿದ್ದಾರೆ.

ಚಿತ್ರವೊಂದರ ಹೆಸರು ಉಲ್ಲೇಖಿಸದ ನಟ, ಸ್ಕ್ರಿಪ್ಟ್​ನಲ್ಲಿ ಲಿಪ್​ ಲಾಕ್​ ಸೀನ್​ ಇರಲಿಲ್ಲ. ನಾನು ಸೆಟ್​ಗೆ ಬಂದಾಗ ಈ ದೃಶ್ಯ ಮಾಡಲು ಹೇಳಿದರು. ನನಗೆ ಮುಜುಗರ ಆಯಿತು. ಆದರೆ ಚಿತ್ರದ ನಟಿಗೆ ಈ ವಿಷಯ ಮೊದಲೇ ತಿಳಿದಿತ್ತು. ಆಕೆ ದೃಶ್ಯಕ್ಕೆ ರೆಡಿ ಇದ್ದರು. ನನ್ನನ್ನು ಹೊರತುಪಡಿಸಿ ಚಿತ್ರತಂಡದ ಎಲ್ಲರಿಗೂ ವಿಷಯ ಗೊತ್ತಿತ್ತು. ಆದರೆ ನನಗೆ ಆ ದೃಶ್ಯ ಮಾಡಲು ಮುಜುಗರವಾಗಿ ನಿರಾಕರಿಸಿದೆ ಎಂದು ನಟ ನೆನಪಿಸಿಕೊಂಡಿದ್ದಾರೆ.

ಆದರೆ ಇಷ್ಟಕ್ಕೇ ಸುಮ್ಮನಾಗಲಿಲ್ಲ. ನಾನು ಇಂಟಿಮೇಟ್​ ಸೀನ್​ ಮಾಡುವುದಿಲ್ಲ ಎಂದಾಗ ನನ್ನನ್ನು ಅತ್ಯಂತ ಕೆಟ್ಟದ್ದಾಗಿ ನೋಡಿದರು. ನಾನೇನು ಪುರುಷನೇ ಅಲ್ಲ ಎನ್ನೋ ರೀತಿ ಅಲ್ಲಿದ್ದ ಕೆಲವರು ನೋಡಿ ನಗಲು ಶುರು ಮಾಡಿದರು ಎಂದಿರುವ ನಟ, ಇಂಥ ಕೆಟ್ಟ ಸಂಸ್ಕೃತಿ ಏಕೆ ಎಂದು ಪ್ರಶ್ನಿಸಿದ್ದಾರೆ. ನಟರಿಗೆ ಮಾನ ಮರ್ಯಾದೆ ಇರಲ್ವಾ? ನಟಿ ಜೊತೆ ಎಲ್ಲದಕ್ಕೂ ರೆಡಿ ಅಂದುಕೊಂಡ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನು, ಅಲಿ ಫಜಲ್ ಅವರ ಕೆಲಸದ ಮುಂಭಾಗದ ಕುರಿತು ಹೇಳುವುದಾದರೆ, ಇವರು  'ಮಿರ್ಜಾಪುರ' ಸರಣಿಯಲ್ಲಿ 'ಗುಡ್ಡು ಪಂಡಿತ್' ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದರು. ಇದಕ್ಕೂ ಮುನ್ನ ಅವರು ಅನೇಕ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅವರ ವೆಬ್ ಸರಣಿ 'ಖುಫಿಯಾ' ಅಕ್ಟೋಬರ್ 5 ರಂದು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಆಶಿಶ್​ ವಿದ್ಯಾರ್ಥಿಗೆ ಡಿವೋರ್ಸ್​ ಕೊಟ್ಟಿದ್ದೇಕೆ, ಮರು ಮದ್ವೆಯಾಗಿದ್ದೇಕೆ? ಮೌನ ಮುರಿದ ಮೊದಲ ಪತ್ನಿ

Follow Us:
Download App:
  • android
  • ios