ದೇಶದಲ್ಲಿ ಯಾವುದೇ ರಾಜ್ಯ, ಯಾವುದೇ ಸ್ಥಳದಲ್ಲಿ ಏನೇ ಕಷ್ಟ ಬಂದಾಗ ತಕ್ಷಣ ಸ್ಪಂದಿಸುವುದು ಬಾಲಿವುಡ್ ನಟ ಅಕ್ಷಯ್ ಕುಮಾರ್. ಇದೀಗ ಪ್ರವಾಹದಿಂದ ತತ್ತರಿಸಿದ ಬಿಹಾರ ಹಾಗೂ ಅಸ್ಸಾಂಗೆ ತಲಾ ಒಂದು ಕೋಟಿ  ನೆರವು ನೀಡಿದ್ದಾರೆ.

ಬಿಹಾರ ಹಾಗೂ ಅಸ್ಸಾಂನ ಸಿಎಂ ಪರಿಹಾರ ನಿಧಿಗೆ ನಟ ಅಕ್ಷಯ್ ತಲಾ 1 ಕೋಟಿ ರೂಪಾಯಿ ನೆರವು ನೀಡಿ ಮಾದರಿಯಾಗಿದ್ದಾರೆ. ಬಿಹಾರ ಹಾಗೂ ಅಸ್ಸಾಂನ ಸಿಎಂಗಳ ಜೊತೆ ಮಾತನಾಡಿದ ಅಕ್ಷಯ್ ಕುಮಾರ್ ಪ್ರಕೃತಿ ವಿಕೋಪದಿಂದ ತತ್ತರಿಸಿದ ರಾಜ್ಯಗಳಿಗೆ ನೆರವು ನೀಡುವುದಾಗಿ ಹೇಳಿದ್ದಾರೆ.

ಭಾರತೀಯನೆಂದು ಸಾಬೀತುಪಡಿಸಲು ಹೀಗ್ಮಾಡ್ತಾರಂತೆ ಅಕ್ಷಯ್ ಕುಮಾರ್!

ಕೊರೋನಾ ಭಾರತಕ್ಕೆ ಕಾಲಿಟ್ಟಾಗ ಅಕ್ಷಯ್ ಪಿಎಂ ಪರಿಹಾರ ನಿಧಿಗೆ 25 ಕೋಟಿ, ಮುಂಬೈ ಪೊಲೀಸ್ ಫೌಂಡೇಷನ್‌ಗೆ 2 ಕೋಟಿ ಹಾಗೂ ಮಾಸ್ಕ್, ಸ್ಯಾನಿಟೈಸರ್‌ನಂತಹ ಅಗತ್ಯ ವಸ್ತುಗಳಿಗಾಗಿ ಬೃಹತ್ ಮುಂಬೈ ಮಹಾನಗರಪಾಲಿಕೆಗೆ 3 ಕೋಟಿ ಎಊಪಾಯಿ ನೆರವು ನೀಡಿದ್ದರು.

ಕಳೆದ ವರ್ಷ ಮೇನಲ್ಲಿ ಒಡಿಶಾದಲ್ಲಿ ಸೈಕ್ಲೋನ್ ಫನಿಯಿಂದ ಜನರು ತತ್ತರಿಸಿದಾಗ 1 ಕೋಟಿ ರೂಪಾಯಿ ನೆರವು ನೀಡಿದ್ದರು. ನಟ ಅಕ್ಷಯ್ ಇತ್ತೀಚೆಷ್ಟೇ ಬೆಲ್ ಬಾಟಂ ಸಿನಿಮಾ ಶೂಟಿಂಗ್ ಭಾಗವಾಗಿ ಯುಕೆಗೆ ತೆರಳಿದ್ದಾರೆ. ಜೊತೆಗೆ ಪತ್ನಿ ಟ್ವಿಂಕಲ್ ಖನ್ನಾ, ಮಗ ಆರವ್, ಮಗಳು ನಿತಾರಾ ಇದ್ದರು.