ನಾಚಿಕೆ ಆಗ್ಬೇಕು; ಭಾರತದ ಭೂಪಟ ತುಳಿದ ಅಕ್ಷಯ್ ಕುಮಾರ್‌ನ ತರಾಟೆ ತೆಗೆದುಕೊಂಡ ನೆಟ್ಟಿಗರು
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಭಾರತದ ಭೂಪಟ ತುಳಿದು ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದ್ದಾರೆ. ನಾಚಿಕೆ ಆಗ್ಬೇಕು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್‌ಗೆ 2022 ನಿರಾಸೆಯ ವರ್ಷವಾಗಿತ್ತು. ಅಕ್ಷಯ್ ಕುಮಾರ್ ನಟನೆಯ ಯಾವ ಸಿನಿಮಾಗಳು ಸಕ್ಸಸ್ ಆಗಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡಿಲ್ಲ. ಈ ವರ್ಷವಾದರೂ ಅಕ್ಷಯ್ ಟ್ರ್ಯಾಕ್‌ಗೆ ಮರಳುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅಕ್ಷಯ್ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇದೀಗ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡು ಹಿಗ್ಗಾಮುಟ್ಟಾ ಆಗುತ್ತಿದ್ದಾರೆ. ನೆಟ್ಟಿಗರು ಅಕ್ಷಯ್ ಕುಮಾರ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಉತ್ತಮ ಅಮೇರಿಕಾ ಪ್ರವಾಸದ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಮೋಷನ್‌ನ ಒಂದು ವಿಡಿಯೋ ರಿಲೀಸ್ ಮಾಡಲಾಗಿದೆ. ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಭೂಪಟದ ಮೇಲೆ ನಡೆದುಕೊಂಡು ಹೋಗುತ್ತಿದ್ದಾರೆ. ಅಕ್ಷಯ್ ಕುಮಾರ್ ಪಾದದ ಕೆಳಗೆ ಭಾರತದ ನಕ್ಷೆ ಇದೆ. ಇದನ್ನು ನೋಡಿದ ನೆಟ್ಟಿಗರು ಕೆರಳಿದ್ದಾರೆ. ಕಿಲಾಡಿಯನ್ನು ತರಾಟೆ ತೆಗೆದುಕಂಡಿದ್ದಾರೆ.
ವಿಡಿಯೋವನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿ, ಉತ್ತರ ಅಮೆರಿಕಾಗೆ ಶೇಕಡ 100ರಷ್ಟು ಶುದ್ಧ ದೇಸಿ ಮನರಂಜನೆ ನೀಡಲು ಮನರಂಜಕರು ಸಿದ್ಧರಾಗಿದ್ದಾರೆ. ನಿಮ್ಮ ಸೀಟ್ ಬೆಲ್ಟ್‌ಗಳನ್ನು ಕಟ್ಟಿಕೊಳ್ಳಿ, ನಾವು ಮಾರ್ಚ್‌ನಲ್ಲಿ ಬರುತ್ತೇವೆ' ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಇದನ್ನು ಶೇರ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅಕ್ಷಯ್ ಕುಮಾರ್ ವಿರುದ್ಧ ಅನೇಕರು ರೊಚ್ಚಿಗೆದ್ದಿದ್ದಾರೆ.
ನಟ ಅಕ್ಷಯ್ ಕುಮಾರ್ ಇನ್ನೊಂದು ಮುಖ ಬಯಲು: ಯುವತಿಗೆ ಹೊಸ ಲೈಫ್
ಈ ವಿಡಿಯೋ ಗರಂ ಆಗಿರುವ ನೆಟ್ಟಿಗರು ಅಕ್ಷಯ್ ಕುಮಾರ್‌ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಕೆನಡಾದ ನಟರೊಬ್ಬರು ಭಾರತದ ಭೂಪಟದ ಮೇಲೆ ನಡೆದು ಭಾರತೀಯರನ್ನು ಅವಮಾನಿಸಿದ್ದಾರೆ. ಇದನ್ನು ಹೇಗೆ ಸ್ವೀಕರಿಸಲು ಸಾಧ್ಯ. ಇಂಥ ನಾಚಿಕೆಗೇಡಿನ ಕೃತ್ಯಕ್ಕೆ ನೀವು ಭಾರತೀಯರನ್ನು ಕ್ಷಮೆ ಕೇಳಬೇಕು' ಎಂದು ಹೇಳಿದ್ದಾರೆ. ಇನೇಕರು ಕೆನಡಿಯನ್ ಕುಮಾರ್ ಎಂದು ಅಕ್ಷಯ್ ಕುಮಾರ್ ಅವರನ್ನು ಕಾಲೆಳೆಯುತ್ತಿದ್ದಾರೆ. ಇನ್ನು ನಮ್ಮ ಭಾರತಕ್ಕೂ ಸ್ವಲ್ಪ ಗೌರವ ಕೊಡಿ ಎಂದು ಮತ್ತೊರ್ವ ವ್ಯಕ್ತಿ ಹೇಳಿದ್ದಾರೆ. ಈ ರೀತಿಯ ವರ್ತನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದಾರೆ.
ಸದ್ಯ ರಿಲೀಸ್ ಆಗಿರುವ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಜೊತೆ ದಿಶಾ ಪಟಾಣಿ, ಮೌನಿ ರಾಯ್, ಸೋನಮ್ ಬಾಜ್ವಾ, ನೋರಾ ಫತೇಹಿ ಕೂಡ ನಟಿಸಿದ್ದಾರೆ. ಆದರೆ ಇವರ್ಯಾರು ಭೂಪಟದ ಮೇಲೆ ಕಾಲಿಟ್ಟಿಲ್ಲ. ಅಕ್ಷಯ್ ಕುಮಾರ್ ಭಾರತದ ನಕ್ಷೆ ಮೇಲೆ ನಿಂತು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಅಕ್ಷಯ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತೀಯರಲ್ಲಿ ಅಕ್ಷಯ್ ಕುಮಾರ್ ಕ್ಷಮೆ ಕೇಳುತ್ತಾರಾ? ಕಾದು ನೋಡಬೇಕಿದೆ.
ಅಕ್ಷಯ್ ಕುಮಾರ್ ಮಗ ಆರವ್ ಫೋಟೋ ವೈರಲ್, ಜೊತೆಯಲ್ಲಿರುವ ಮಿಸ್ಟರಿ ಗರ್ಲ್ ಯಾರು?
ಜಾಹೀರಾತಿನ ವಿಚಾರದಲ್ಲಿ ಅಕ್ಷಯ್ ಕುಮಾರ್ ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಕ್ಷಯ್ ಕುಮಾರ್ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಆ ಬಗ್ಗೆ ಪ್ರತಿಕ್ರಿಯೆ ನೀಡಿ ಇನ್ಮುಂದೆ ಇಂಥ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೊಂದು ತಪ್ಪು ಮಾಡಿದ್ದು ಈ ಬಗ್ಗೆ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ.