ಆಯುರ್ವೇದಿಕ್ ಕಾರಣಗಳಿಗಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ದಿನಾ ಗೋಮೂತ್ರ ಕುಡಿಯುತ್ತಾರಂತೆ. ಬೆಲ್‌ಬಾಟಂ ಸಿನಿಮಾ ಶೂಟಿಂಗ್‌ಗಾಗಿ ಸದ್ಯ ಅಕ್ಷಯ್ ಟ್‌ಲೆಂಡ್‌ನಲ್ಲಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar) ದಿನಾ ಗೋಮೂತ್ರ ಕುಡಿತಾರೆ ಅಂತ ಗೊತ್ತಾಗಿದ್ದೇ ತಡ ಜನ ಎದ್ದೂ ಬಿದ್ದು ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಡಿದ್ದಾರೆ.

ಟೀವಿ ಶೋಗಾಗಿ ಆನೆ ಲದ್ದಿ ಟೀ ಕುಡಿದ ನಟ ಅಕ್ಷಯ್‌!

ನಟ ಆನೆ ಲದ್ದಿ ಟೀ ಕುಡಿದ ಬಗ್ಗೆ ಪ್ರತಿಕ್ರಿಯಿಸಿದ ನಟ, ಈ ಬಗ್ಗೆ ನನಗೇನು ಅನಿಸಲಿಲ್ಲ. ನನಗೆ ತುಂಬಾ ಎಕ್ಸೈಟ್ ಆಗಿತ್ತು. ನಾನು ದಿನಾ ಗೋಮೂತ್ರ ಕುಡಿಯುತ್ತೇನೆ. ಹಾಗಾಗಿ ಇದು ಓಕೆ ಆಯಿತು ಎಂದಿದ್ದಾರೆ.

ಈ ಸುದ್ದಿ ಅಕ್ಷಯ್ ಬಾಯಿಯಿಂದ ಹೊರ ಬಿದ್ದಿದ್ದೇ ತಡ ಜನರು ಗೋಮೂತ್ರದಲ್ಲಿರುವ ಔಷಧೀಯ ಗುಣಗಳ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಡಿದ್ದಾರೆ. ನಿಜಕ್ಕೂ ಗೋಮೂತ್ರದಲ್ಲಿ ಔಷಧೀಯ ಗುಣ ಇದೆಯಾ ಎಂದು ಜನ ಕ್ರಾಸ್ ಚೆಕ್ ಮಾಡಿದ್ದಾರೆ.

ಹ್ಯಾಪಿ ಬರ್ತ್‌ಡೇ ಅಕ್ಷಯ್: ಅಕ್ಕಿಗೆ ಅತ್ಯಧಿಕ ಆದಾಯ ತಂದುಕೊಟ್ಟ 5 ಸಿನಿಮಾಗಳಿವು..!

ಗೋಮೂತ್ರ ಕ್ಯಾನ್ಸರ್, ಕೊರೋನಾವನ್ನು ಗುಣ ಮಾಡಬಲ್ಲದು ಎಂಬ ಬಗ್ಗೆ ಬಹಳಷ್ಟು ಸಮಯದಿಂದ ಚರ್ಚೆಗಳಾಗುತ್ತಿದೆ. ಇನ್ನು ಕೊರೋನಾ ವೈರಸ್ ವಿರುದ್ಧ ಹೋರಾಡಲು ಗೋಮೂತ್ರ ಕುಡಿಯಿರಿ ಎಂದು ಹಲವು ರಾಜಕಾರಣಿಗಳೂ ಹೇಳಿದ್ದಾರೆ.

ಜುಲೈನಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಹಾಗೂ ಲೋಕಸಭಾ ಸಂಸದ ದಿಲೀಪ್ ಘೋಶ್ ಗೋಮೂತ್ರ ಕೊರೋನಾ ನಾಶ ಮಾಡಬಲ್ಲದು ಎಂದಿದ್ದಾರೆ. ಅಕ್ಷಯ್ ಕೊರೋನಾಗಾಗಿ ಗೋಮೂತ್ರ ಕುಡಿಯುತ್ತಾರೋ ಗೊತ್ತಿಲ್ಲ, ಆದರೆ ಗೋಮೂತ್ರದಲ್ಲಿ ಔಷಧಿ ಅಂಶಗಳಿವೆ.