ಸಮಂತಾರನ್ನು ಎತ್ತಿ ಕುಣಿದಾಡಿದ ಅಕ್ಷಯ್ ಕುಮಾರ್: ವಿಡಿಯೋ ವೈರಲ್
ಕಾಫಿ ವಿತ್ ಕರಣ್ 7 ಶೋನ ಸಮಂತಾ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ಪ್ರೋಮೋ ರಿಲೀಸ್ ಆಗಿದ್ದು ಸಿಕ್ಕಪಟ್ಟೆ ವೈರಲ್ ಆಗಿದೆ. ಪ್ರೋಮೋದಲ್ಲಿ ಅಕ್ಷಯ್ ಕುಮಾರ್ ಸಮಂತಾ ಅವರನ್ನು ಎತ್ತಿಕೊಂಡು ಕುಣಿದಿದ್ದಾರೆ. ಕರಣ್ ಶೋಗೆ ಎಂಟ್ರಿ ಕೊಡುತ್ತಿದ್ದಂತೆ ಅಕ್ಷಯ್ ಕುಮಾರ್ ಸೌತ್ ಸ್ಟಾರ್ ಸಮಂತಾ ಅವರನ್ನು ಎತ್ತಿಕೊಂಡೇ ಬಂದಿದ್ದಾರೆ.
ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಪ್ರಸಿದ್ಧ ಕಾಫಿ ವಿತ್ ಕರಣ್ ಶೋ ಮತ್ತೆ ಪ್ರಸಾರವಾಗುತ್ತಿದೆ. ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೊದಲ ಬಾರಿಗೆ ಒಟಿಟಿಯಲ್ಲಿ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುತ್ತಿದೆ. ಅಂದಹಾಗೆ ಇದು 7ನೇ ಸೀಸನ್ ಆಗಿದೆ. 6 ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಕರಣ್ ಅವರ 7ನೇ ಶೋ ಕುತೂಹಲ ಮೂಡಿಸಿದೆ. ಈ ಬಾರಿ ಶೋನಲ್ಲಿ ಸೌತ್ ಸ್ಟಾರ್ ಗಳನ್ನು ಆಹ್ವಾನಿಸಿದ್ದಾರೆ. ಈಗಾಗಲೇ ಕಾಫಿ ವಿತ್ ಕರಣ್ ಶೋ ಪ್ರಾರಂಭವಾಗಿದ್ದು ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅವರ ಎಪಿಸೋಡ್ ಪ್ರಸಾರವಾಗಿದೆ. ಈಗಾಗಲೋ ಪ್ರೋಮೋ ರಿಲೀಸ್ ಆಗಿದ್ದು ಇದರಲ್ಲಿ ಸಮಂತಾ ಎಪಿಸೋಡ್ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು. ಸಮಂತಾ ಮೊದಲ ಬಾರಿಗೆ ಕರಣ್ ಜೋಹರ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆ ಸಮಂತಾ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಸದ್ಯ ಸಮಂತಾ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ನ ಪ್ರೋಮೋ ರಿಲೀಸ್ ಆಗಿದ್ದು ಸಿಕ್ಕಪಟ್ಟೆ ವೈರಲ್ ಆಗಿದೆ. ಪ್ರೋಮೋದಲ್ಲಿ ಅಕ್ಷಯ್ ಕುಮಾರ್ ಸಮಂತಾ ಅವರನ್ನು ಎತ್ತಿಕೊಂಡು ಕುಣಿದಿದ್ದಾರೆ. ಕರಣ್ ಶೋಗೆ ಎಂಟ್ರಿ ಕೊಡುತ್ತಿದ್ದಂತೆ ಅಕ್ಷಯ್ ಕುಮಾರ್ ಸೌತ್ ಸ್ಟಾರ್ ಸಮಂತಾ ಅವರನ್ನು ಎತ್ತಿಕೊಂಡೇ ಬಂದಿದ್ದಾರೆ. ಆಗ ಕರಣ್ ಜೋಹರ್ ನಂಬರ್ ಒನ್ ನಟಿ, ನಂಬರ್ ಒನ್ ಸ್ಟಾರ್ ತೋಳಲ್ಲಿ ಎಂದು ಹೇಳಿದ್ದಾರೆ. ಸಮಂತಾ, ಕರಣ್ ಶೋಗೆ ರೆಡ್ ಮತ್ತು ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಕಂಗೊಳಿಸಿದ್ದರು.
ಕರಣ್ ಜೋಹರ್, ಸಮಂತಾ ಬಳಿ ತನ್ನ ಮದುವೆ ಬಗ್ಗೆ ಕೇಳುತ್ತಿದ್ದಂತೆ ಮದ್ಯ ಪ್ರವೇಶಿಸಿದ ಸ್ಯಾಮ್ 'ಅಸಂತೋಷದ ಮದುವೆಗೆ ನೀವೆ ಕಾರಣ' ಎಂದು ಅರೋಪ ಮಾಡಿದರು. ಬಳಿಕ ಕರಣ್, ಯಾವ ಇಬ್ಬರು ಬಾಲಿವುಡ್ ಸ್ಟಾರ್ ಜೊತೆ ಡಾನ್ಸ್ ಮಾಡಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಸಮಂತಾ ರಣ್ವೀರ್ ಸಿಂಗ್ ಅಂಡ್ ರಣ್ವೀರ್ ಸಿಂಗ್ ಎಂದು ಹೇಳಿದ್ದಾರೆ. ಸದ್ಯ ಪ್ರೋಮೋದಲ್ಲಿ ಇಷ್ಟು ರಿವೀಲ್ ಆಗಿದೆ.
ಈ ಕಾರ್ಯಕ್ರಮದಲ್ಲಿ ಅಕ್ಷಯ್ ಮತ್ತು ಸಮಂತಾ ಇಬ್ಬರು ಡಾನ್ಸ್ ಮಾಡಿ ನೋಡುಗರ ಗಮನ ಸೆಳೆದರು. ಅಕ್ಷಯ್ ಕುಮಾರ್ ನೆಚ್ಚಿನ ಸ್ಟೆಪ್ ಹಾಕಿ ಸಂಭ್ರಮಿಸಿದರು. ಬಳಿಕ ಸಮಂತಾ ಅವರನ್ನು ಎತ್ತಿಕೊಂಡು ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೋಮೋ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಟ್ಟು ಹಾಕಿರುವ ಸ್ಯಾಮ್ ಮತ್ತು ಅಕ್ಷಯ್ ಕುಮಾರ್ ಎಪಿಸೋಡ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಕಾರ್ತಿಕ್ ಜೊತೆಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತಾಡಿದ ಕರಣ್ ಮೇಲೆ ಸಾರಾ ಅಸಮಾಧಾನ
ಕಾಫಿ ವಿತ್ ಕರಣ್ 7 ಶೋ ಜುಲ್ 7ರಂದಿ ಪಾರಂಭವಾಗಿದೆ. ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಈಗಾಗಲೇ ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಮತ್ತಿ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಎಪಿಸೋಡ್ ಪ್ರಸಾರವಾಗಿದೆ. ಇನ್ನು ಕಿಯಾರಾ ಅಡ್ವಾನಿ ಮತ್ತು ಶ್ರದ್ಧಾ ಕಪೂರ್ ಮತ್ತು ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಟೈಗರ್ ಶ್ರಾಫ್ ಮತ್ತು ಕೃತಿ ಸನೂನ್ ಎಪಿಸೋಡ್ ಪ್ರಸಾರ ಬಾಕಿ ಇದೆ.&
ಅಕ್ಷಯ್ ಕೊನೆಯದಾಗಿ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮಾನುಷಿ ಚಿಲ್ಲರ್ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಇನ್ನು ಅನೇಕ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಭೂಮಿ ಪೆಡ್ನೇಕರ್ ಜೊತೆ ರಕ್ಷಾ ಬಂಧನ, ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ರಾಮ್ ಸೇತು ಮತ್ತು ಇಮ್ರಾನ್ ಹಶ್ಮಿ ಜೊತೆಗಿನ ಸೆಲ್ಫಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಬೇಕೆಂದ ಸಾರಾ; ಅರ್ಜುನ್ ರೆಡ್ಡಿ ಸ್ಟಾರ್ ರಿಯಾಕ್ಷನ್ ಹೀಗಿತ್ತು
ಇನ್ನು ನಟಿ ಸಮಂತಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಶಾಕುಂತಲಂ, ಯಶೋಧ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಇನ್ನು ಬಾಲಿವುಡ್ ನಲ್ಲಿ ವೆಬ್ ಸೀರಿಸ್ ಮಾಡಲು ಸಜ್ಜಾಗಿದ್ದಾರೆ. ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಶೋ ಬಳಿಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಸ್ಯಾಮ್ ಮುಂದಿನ ಪ್ರಾಜೆಕ್ಟ್ ಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.