ಸಲಿಂಗ ಕಾಮದ 'ಓ ಮೈ ಗಾಡ್​-2' ವಿವಾದಿತ ಚಿತ್ರ ವೀಕ್ಷಿಸಿದ ಸದ್ಗುರು, ಚಿತ್ರದ ಬಗ್ಗೆ ಹೇಳಿದ್ದೇನು?

ಅಕ್ಷಯ್​ ಕುಮಾರ್​ ನಟನೆಯ ವಿವಾದಿತ ಓ ಮೈ ಗಾಡ್​-2 ಚಿತ್ರ ವೀಕ್ಷಿಸಿದ ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ್ದೇನು? 
 

Akshay Kumar organises special screening for Sadhguru OMG 2 suc

ನಟ ಅಕ್ಷಯ್​ ಕುಮಾರ್​ (Akshay Kumar)  ನಟಿಸುವ ಚಿತ್ರಗಳು ಒಂದರ ಮೇಲೊಂದರಂತೆ ಸೋಲು ಕಾಣುತ್ತಿರುವ ಹೊತ್ತಿನಲ್ಲಿಯೇ ಭರವಸೆ ಹೆಚ್ಚಿಸಲು ಬಂದ ಚಿತ್ರ ಓ ಮೈ ಗಾಡ್‌-2 (OMG 2) ಕೂಡ ವಿವಾದದಲ್ಲಿ ಸಿಲುಕಿದೆ.  ಶಿವನ ಪಾತ್ರಧಾರಿಯಾಗಿರುವ ನಟ ಅಕ್ಷಯ್ ಕುಮಾರ್‌ ಅವರ ಫೋಟೋ ವೈರಲ್‌ ಆಗಿದ್ದ ಬೆನ್ನಲ್ಲೇ ವಿವಾದದ ಸುಳಿ ಸುತ್ತಿಕೊಂಡಿದೆ. ಇದೇ 11 ರಂದು ‘ಓ ಮೈಗಾಡ್ 2’ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ  ಸೆನ್ಸಾರ್ ಪತ್ರವನ್ನು ಕೊಡಲು ನಿರಾಕರಿತ್ತು. ಕೊನೆಗೆ ಚಿತ್ರತಂಡಕ್ಕೆ ಆಘಾತಕಾರಿಯಾಗುವ ಸಂಗತಿಯೊಂದು ಹೊರಬಂತು. ಅದೇನೆಂದರೆ  ಶಿವನ ಪಾತ್ರಕ್ಕೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಹೇಳಿದೆಯಲ್ಲದೇ,  ಶಿವನ  ಪಾತ್ರವನ್ನೇ ಕೈ ಬಿಡುವಂತೆ ಹಾಗೂ ಶಿವನ ಬದಲು ಶಿವ ದೂತನನ್ನಾಗಿ ಚಿತ್ರೀಕರಿಸುವಂತೆ ಸಲಹೆ ನೀಡಿದೆ ಎಂಬ ಸುದ್ದಿಯಿದೆ. ಸಾಲದು ಎಂಬುದಕ್ಕೆ  ಅಕ್ಷಯ್ ಕುಮಾರ್ ಮೈ ಬಣ್ಣವನ್ನು ನೀಲಿ ಮಾಡಿಕೊಂಡು ಶಿವನ ಅವತಾರವೆಂಬಂತೆ ಕಾಣಿಸುವ ಕಾರಣ,  ಆ ಬಣ್ಣವನ್ನೂ ಬದಲಿಸಲು ಹೇಳಿರುವುದಾಗಿ ವರದಿಯಾಗಿದೆ!

ಇಷ್ಟೇ ಅಲ್ಲದೇ, ಓ ಮೈ ಗಾಡ್​ ಚಿತ್ರಕ್ಕೆ 25 ಕಡೆ ಕತ್ತರಿ ಬಿದ್ದಿದೆ. ಇದನ್ನು ವಯಸ್ಕರ ಚಿತ್ರ ಎಂದು ಹೇಳಲಾಗಿದ್ದು, ಎ ಸರ್ಟಿಫಿಕೇಟ್​ (Adult Certificate) ನೀಡಲಾಗಿದೆ.  ಈಗಾಗಲೇ ಚಿತ್ರದ ಟೀಸರ್‌ ಹಾಗೂ ಹಾಡುಗಳು ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದರೂ ಟ್ರೋಲ್​ಗೆ ಒಳಗಾಗಿತ್ತು. 2012ರಲ್ಲಿ ‘ಒಎಂಜಿ’ ಸಿನಿಮಾ ತೆರೆಕಂಡು ಸೂಪರ್​ ಹಿಟ್​ ಆಗಿತ್ತು. ಅದಕ್ಕೆ ಸೀಕ್ವೆಲ್​ ಆಗಿ ‘ಒಎಂಜಿ 2’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಅಕ್ಷಯ್​ ಕುಮಾರ್ ಜೊತೆ ಪಂಕಜ್​ ತ್ರಿಪಾಠಿ ಅವರು ಪ್ರಮುಖ ಮಾತ್ರ ಮಾಡಿದ್ದಾರೆ. ನಟಿ ಯಾಮಿ ಗೌತಮಿ ಅವರು ಲಾಯರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತ್​ ರೈ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆದರೆ ಈ 2ನೇ ಭಾಗಕ್ಕೆ  ಈಗ ಗ್ರಹಚಾರ ಒಕ್ಕರಿಸಿದೆ. ಈ ಸಿನಿಮಾದ ಕಥೆ ಸಲಿಂಗ ಕಾಮಕ್ಕೆ (Homosexuality) ಸಂಬಂಧಿಸಿದ್ದು ಎಂಬ ಸುದ್ದಿ ಹರಡಿದೆ.  ಶಿವನ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇದು ಸಲಿಂಗಕಾಮದ ಚಿತ್ರವಾಗಿದೆ ಎನ್ನುವ ಸುದ್ದಿಯೂ ಇನ್ನೊಂದೆಡೆ ಹರಡಿದೆ. ಇದೇ ಕಾರಣಕ್ಕೆ  ಎ ಸರ್ಟಿಫಿಕೇಟ್​ ನೀಡಲಾಗಿದೆ.

OMG 2: ಶಿವನ ಪಾತ್ರಕ್ಕೇ ಕತ್ತರಿ? ದೇವರ ವೇಷ ತೊಟ್ಟ ಚಿತ್ರಕ್ಕೆ ಸಿಕ್ತು ಅಡಲ್ಟ್​ ಸರ್ಟಿಫಿಕೇಟ್​!

ಆದರೆ ಹೇಗಾದರೂ ಮಾಡಿ ಈ ಎಲ್ಲಾ ವಿವಾದಗಳಿಂದ ಮುಕ್ತರಾಗಲು ಅಕ್ಷಯ್​ ಕುಮಾರ್​ (Akshay Kumar) ಬಯಸಿದ್ದಾರೆ. ಸಮಾಜಕ್ಕೆ ಸಂದೇಶ ರವಾನೆ ಆಗುವಂಥ ಚಿತ್ರಗಳನ್ನು ಮಾಡುವುದು ತಮ್ಮ ಉದ್ದೇಶ ಎಂದಿರುವ ನಟ, ಈಗ ಈಶಾ ಫೌಂಡೇಷನ್​ನ ಸದ್ಗುರು ಜಗ್ಗಿ ವಾಸುದೇವ್​ ಅವರಿಗೆ ಅಕ್ಷಯ್ ಕುಮಾರ್ ಅವರು ಸಿನಿಮಾ ತೋರಿಸಿದ್ದಾರೆ. ಚಿತ್ರ ಲೈಂಗಿಕ ಶಿಕ್ಷಣದ ಬಗ್ಗೆ ಇರುವುದರಿಂದ ಇದನ್ನು ಎಲ್ಲರೂ ನೋಡಲೇಬೇಕು ಎಂದು ತಂಡ ಹೇಳುತ್ತಿದೆ. ಆದ್ದರಿಂದ ಸದ್ಗುರು ಅವರ ಅಭಿಪ್ರಾಯವನ್ನು ಚಿತ್ರತಂಡ ಕೇಳಿತ್ತು. ಸದ್ಗುರು ಅವರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊಯಿಮತ್ತೂರಿನಲ್ಲಿರುವ ಇಶಾ ಫೌಂಡೇಷನ್​ಗೆ ಭೇಟಿಕೊಟ್ಟ ನಟ ಅಕ್ಷಯ್ ಕುಮಾರ್ ಅವರು ತೋರಿಸಿರುವ ಚಿತ್ರವನ್ನು ಸದ್ಗುರು ವೀಕ್ಷಿಸಿ, ಇದರ ಬಗ್ಗೆ ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

 ‘ನಮಸ್ಕಾರ ಅಕ್ಷಯ್ ಕುಮಾರ್. ನೀವು ಇಲ್ಲಿ ಇಶಾ ಯೋಗ ಕೇಂದ್ರದಲ್ಲಿ (Isha Yoga Centre) ಇರುವುದು ಮತ್ತು ‘ಓ ಮೈ ಗಾಡ್ -2’ ಕುರಿತು ಅಭಿಪ್ರಾಯ ಪಡೆಯುತ್ತಿರುವುದು  ಅದ್ಭುತ. ನಾವು ಮಹಿಳೆಯರ ಸುರಕ್ಷತೆ ಮತ್ತು ಘನತೆಗೆ ಸಂವೇದನಾಶೀಲವಾಗಿರುವ ಸಮಾಜವನ್ನು ಬೆಳೆಸಲು ಬಯಸುತ್ತಿದ್ದೇವೆ. ಇಂಥ ಸಮಯದಲ್ಲಿ ದೈಹಿಕ ಅಗತ್ಯಗಳನ್ನು (Physcial Desires) ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಯುವಜನರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ. ನಮ್ಮ ಶಿಕ್ಷಣ ವ್ಯವಸ್ಥೆಯು ನಮ್ಮ ಯುವಕರನ್ನು ಸಂಪೂರ್ಣವಾಗಿ ಮಾಹಿತಿ ಆಧಾರಿತವಾಗಿರುವುದಕ್ಕಿಂತ ಹೆಚ್ಚಾಗಿ ಅವರ ದೇಹ, ಮನಸ್ಸು ಮತ್ತು ಭಾವನೆಗಳನ್ನು ನಿಭಾಯಿಸಲು ಸಜ್ಜುಗೊಳಿಸುವ ಸಮಯವಾಗಿದೆ ಎಂದಿದ್ದಾರೆ.  ಇದನ್ನು ರೀಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ  ಅಕ್ಷಯ್ ಕುಮಾರ್​, ‘ನಮಸ್ಕಾರ ಸದ್ಗುರು. ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ. ಇದು ಅತ್ಯುತ್ತಮ ಅನುಭವ. ಒಎಂಜಿ 2 ವೀಕ್ಷಿಸಿದ್ದಕ್ಕೆ ಮತ್ತು ಫೀಡ್​ಬ್ಯಾಕ್ ನೀಡಿದ್ದಕ್ಕೆ ಧನ್ಯವಾದ. ನಮ್ಮ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಸಿಕ್ಕಿದ್ದಕ್ಕೆ ಇಡೀ ತಂಡ ಆಭಾರಿಯಾಗಿದೆ’ ಎಂದಿದ್ದಾರೆ. 

 

Latest Videos
Follow Us:
Download App:
  • android
  • ios