Asianet Suvarna News Asianet Suvarna News

ಅಮೀರ್‌ ಖಾನ್ ರಿಕ್ವೆಸ್ಟ್: ಬಚ್ಚನ್ ಪಾಂಡೆ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್ ಕುಮಾರ್!

ಅಮೀರ್‌ಖಾನ್‌ಗಾಗಿ 'ಬಚ್ಚನ್ ಪಾಂಡೆ' ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್ ಕುಮಾರ್ | ಈ ವರ್ಷಾಂತ್ಯದಲ್ಲಿ 'ಲಾಲ್ ಸಿಂಗ್ ಚಡ್ಡಾ' ತೆರೆಗೆ ಬರಲಿದೆ | ಅಕ್ಷಯ್ ಟೀಂಗೆ ಧನ್ಯವಾದಗಳನ್ನು ಅರ್ಪಿಸಿದ ಅಮೀರ್ ಖಾನ್ 

Akshay Kumar moves Bachchan Pandey release date for Laal Singh Chaddha
Author
Bengaluru, First Published Jan 27, 2020, 1:33 PM IST
  • Facebook
  • Twitter
  • Whatsapp

ಮುಂಬೈ (ಜ. 27): ಅಕ್ಷಯ್ ಕುಮಾರ್, ಕೃತ ಸನೂನ್ ಒಟ್ಟಿಗೆ ಕಾಣಿಸಿಕೊಂಡಿರುವ ಬಚ್ಚನ್ ಪಾಂಡೆ ಚಿತ್ರ ಫಸ್ಟ್ ಲುಕ್‌ನಿಂದ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿತ್ತು. ಇದೇ ವರ್ಷಾಂತ್ಯದಲ್ಲಿ ಡಿ 25 ರಂದು ರಿಲೀಸ್ ಮಾಡಲು ಚಿತ್ರತಂಡ ಶೆಡ್ಯೂಲ್ ಮಾಡಿಕೊಂಡಿತ್ತು. ಆದರೆ ಅಮೀರ್‌ಖಾನ್‌ 'ಲಾಲ್ ಸಿಂಗ್ ಚಡ್ಡಾ 'ಸಿನಿಮಾಗಾಗಿ ಬಚ್ಚನ್ ಪಾಂಡೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. 

BB7: ಮನೆಯಿಂದ ಪ್ರಿಯಾಂಕಾ ಔಟ್, ಪ್ರಿನ್ಸಿಪಲ್‌ ಬುದ್ಧಿಗೆ ಕಿಚ್ಚ ಬೋಲ್ಡ್‌!

ಅಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಹಾಗೂ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಎರಡೂ ಈಗಾಗಲೇ ಕ್ರೇಜ್ ಹುಟ್ಟು ಹಾಕಿರುವ ಸಿನಿಮಾಗಳು.  ಇದೇ ವರ್ಷಾಂತ್ಯದಲ್ಲಿ ಎರಡೂ ಸಿನಿಮಾಗಳನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಒಟ್ಟಿಗೆ ಎರಡೂ ಸಿನಿಮಾಗಳು ರಿಲೀಸ್ ಆದರೆ ಬಾಕ್ಸಾಫೀಸ್ ಗಳಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಮೀರ್ ಖಾನ್ ಮನವಿ ಮೇರೆಗೆ 'ಬಚ್ಚನ್ ಪಾಂಡೆ'ರಿಲೀಸ್  ಡೇಟನ್ನು ಮುಂದಕ್ಕೆ ಹಾಕಲಾಗಿದೆ. ಜನವರಿ 22, 2021 ಕ್ಕೆ ತೆರೆ ಕಾಣಲಿದೆ. 

ಈ ಬಗ್ಗೆ ಅಮೀರ್ ಖಾನ್ ಟ್ವೀಟ್ ಮಾಡಿ, 'ಕೆಲವೊಮ್ಮೆ ಒಂದು ಸಣ್ಣ ಮಾತುಕತೆಯಲ್ಲಿ ಎಲ್ಲೂ ಬಗೆಹರಿಯುತ್ತದೆ. ನನ್ನ ಮನವಿ ಮೇರೆಗೆ ಬಚ್ಚನ್ ಪಾಂಡೆ ರಿಲೀಸ್ ಡೇಟನ್ನು ಮುಂದೂಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಸಿನಿಮಾಗೆ ಆಲ್‌ ದಿ ಬೆಸ್ಟ್' ಎಂದು ವಿಶ್ ಮಾಡಿದ್ದಾರೆ. 

 

 ನಾನು, ಅಮೀರ್ ಒಳ್ಳೆಯ ಸ್ನೇಹಿತರು. ಹೊಸ ಲುಕ್‌ನೊಂದಿಗೆ, ಹೊಸ ದಿನಾಂಕದೊಂದಿಗೆ 'ಬಚ್ಚನ್ ಪಾಂಡೆ' ನಿಮ್ಮ ಮುಂದೆ ಬರಲಿದೆ. ಜನವರಿ 22, 2021 ರಂದು ನಿಮ್ಮ ಮುಂದೆ 'ಬಚ್ಚನ್ ಪಾಂಡೆ' ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮೀರ್ ಖಾನ್ ಕರೀನಾ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಅಮೆರಿಕನ್ ಸಿನಿಮಾ ಟಾಮ್ ಹಾಂಕಾಸ್ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್. 

Follow Us:
Download App:
  • android
  • ios