Asianet Suvarna News Asianet Suvarna News

ನನ್ನ ಬೇಬಿ ಗರ್ಲ್ ವೇಗವಾಗಿ ಬೆಳೆಯುತ್ತಿದ್ದಾಳೆ; ಮಗಳ ಹುಟ್ಟುಹಬ್ಬಕ್ಕೆ ಅಕ್ಷಯ್ ಕುಮಾರ್ ಭಾವನಾತ್ಮಕ ಪೋಸ್ಟ್

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ. ಅಕ್ಷಯ್ ಕುಮಾರ್ ಪುತ್ರಿ ನಿತಾರಾಗೆ 10ನೇ ವರ್ಷದ ಜನ್ಮದಿನ. ಮುದ್ದು ಮಗಳ ಹುಟ್ಟುಹಬ್ಬಕ್ಕೆ ಅಕ್ಷಯ್ ಕುಮಾರ್ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ. 

Akshay Kumar Emotional Post On Daughter Nitaras Birthday he says My Baby Girl Is Growing Up Way Too Fast sgk
Author
First Published Sep 26, 2022, 3:04 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ. ಅಕ್ಷಯ್ ಕುಮಾರ್ ಪುತ್ರಿ ನಿತಾರಾಗೆ 10ನೇ ವರ್ಷದ ಜನ್ಮದಿನ. ಮುದ್ದು ಮಗಳ ಹುಟ್ಟುಹಬ್ಬಕ್ಕೆ ಅಕ್ಷಯ್ ಕುಮಾರ್ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಜಗತ್ತು ನೀಡಿದ ಅತ್ಯುತ್ತಮವಾದು ನೀನು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಗಳ ಜೊತೆಗಿನ ಸುಂದರ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮರಳುಗಾಡಿನಲ್ಲಿ ಮಗಳ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ಕ್ಯೂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಮಗಳು ನಿತಾರಾ ಶಾಪಿಂಗ್ ಬ್ಯಾಗ್ ಹಿಡಿದು ಹೋಗುತ್ತಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡು ಅಕ್ಷಯ್ ಕುಮಾರ್ ಪ್ರೀತಿಯ ಸಾಲು ಬರೆದಿದ್ದಾರೆ.

'ನನ್ನ ಕೈ ಹಿಡಿದಾಗಿನಿಂದ ಈಗ ಅವಳು ಸ್ಥಂತ ಶಾಪಿಂಗ್ ಬ್ಯಾಗ್ ಹಿಡಿಯುವ ಹಾಗೆ ಆಗಿದ್ದಾಳೆ. ನನ್ನ ಬೇಬಿ ಗರ್ಲ್ ವೇಗವಾಗ ಬೆಳೆಯುತ್ತಿದ್ದಾಳೆ. ಇವತ್ತಿಗೆ 10 ವರ್ಷ. ಜಗತ್ತಿನ ಅತ್ಯುತ್ತಮವಾದುದು ಸಿಗಲಿ ಎಂದು ಶುಭಹಾರೈಸುತ್ತೇನೆ. ಅಪ್ಪನ ಪ್ರೀತಿ ಯಾವಾಗಲು ಇರುತ್ತೆ' ಎಂದು ಹೇಳಿದ್ದಾರೆ. 

ಅಕ್ಷಯ್ ಕುಮಾರ್ ಪೋಸ್ಟ್ ‌ಗೆ ಅಭಿಮಾನಿಗಳು ಪ್ರೀತಿಯ ಕಾಮೆಂಟ್ ಮಾಡಿ ಮಗಳಿಗೆ ವಿಶ್ ಮಾಡುತ್ತಿದ್ದಾರೆ. ದೇವರ ಆಶೀರ್ವಾದ ಯಾವಾಗಲು ಇರಲಿ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾನೆ, ಮತ್ತೋರ್ವ ಹುಟ್ಟುಹಬ್ಬದ ಶುಭಾಶಯಗಳು ನಿತಾರಾ ಎಂದು ಹೇಳಿದ್ದಾರೆ. ಸಾಕಷ್ಟು ಕಾಮೆಂಟ್ ಮತ್ತು ಲೈಕ್ಸ್ ಹರಿದುಬಂದಿದೆ.

 
 
 
 
 
 
 
 
 
 
 
 
 
 
 

A post shared by Akshay Kumar (@akshaykumar)


ಖ್ಯಾತ ಗಾಯಕನಿಗೆ ತನ್ನ ಮನೆ ಮಾರಿದ ಅಕ್ಷಯ್ ಕುಮಾರ್; 4 ಕೋಟಿಯ ಪ್ರಾಪರ್ಟಿ 6 ಕೋಟಿಗೆ ಸೇಲ್

ಕೆಲವು ದಿನಗಳ ಹಿಂದೆಯಷ್ಟೆ ಅಕ್ಷಯ್ ಕುಮಾರ್ ತಮ್ಮ ಮಗಳು ನಿತಾರಾ ಅವರೊಂದಿಗೆ ಎರಡು ದೊಡ್ಡ ಟೆಡ್ಡಿ ಬೇರ್ ಆಟಿಕೆಗಳನ್ನು ಹಿಡಿದು ನಡೆದುಕೊಂಡು ಹೋಗುತ್ತಿರುವ ಫೋಟೋ ಹಂಚಿಕೊಂಡಿದ್ದರು. ಫೋಟೋ ಶೇರ್ ಮಾಡಿ,  'ನಿನ್ನೆ ನನ್ನ ಮಗಳನ್ನು ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದೆ. ಅವಳಿಗೆ ಒಂದಲ್ಲ ಎರಡು ದೊಡ್ಡ ಟೆಡ್ಡಿ ಬೇರ್ ಆಟಿಕೆಗಳನ್ನು ಕೊಡಿಸಿದ ಮೇಲೆ ಅವಳ ಮುಖದಲ್ಲಿ ನಗು ನೋಡಿದಾಗ ನಾನು ಹೀರೋ ಆದೆ. #BestDayEver'ಎಂದು ಬರೆದುಕೊಂಡಿದ್ದರು. ಇಂದು ಹುಟ್ಟುಹಬ್ಬಕ್ಕೆ ಪ್ರೀತಿಯ ವಿಶ್ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Akshay Kumar (@akshaykumar)

ಸರ್ಕಾರಿ ಜಾಹೀರಾತಿನಲ್ಲಿ ಎಡವಟ್ಟು; ಅಕ್ಷಯ್ ಕುಮಾರ್‌ಗೆ ನೆಟ್ಟಿಗರ ತರಾಟೆ

ಅಕ್ಷಯ್ ಕುಮಾರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ಅಕ್ಷಯ್ ಕುಮಾರ್ ಅವರಿಗೆ 2022 ನಿರಾಸೆಯ ವರ್ಷವಾಗಿದೆ. ಈ ವರ್ಷ ತೆರೆಗೆ ಬಂದ ಯಾವ ಸಿನಿಮಾವೂ ಸಕ್ಸಸ್ ಆಗಿಲ್ಲ. ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ್, ಬಚ್ಚನ್ ಪಾಂಡೆ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಸದ್ಯ ಅಕ್ಷಯ್ ಕುಮಾರ್ ಬಳಿ ರಾಮ್ ಸೇತು, ಸೆಲ್ಫಿ, ಓ ಮೈ ಗಾಡ್ 2, ಸೂರರೈ ಪೊಟ್ರಿ ರಿಮೇಕ್ ಸೇರಿದಂತೆ ಅನೇಕ ಸಿನಿಮಾಗಳು ಅಕ್ಷಯ್ ಕುಮಾರ್ ಬಳಿ ಇವೆ. ಕಳೆದ ವರ್ಷ ರಿಲೀಸ್ ಆದ ಸೂರ್ಯವಂಶಿ ಸಿನಿಮಾ ಬಿಟ್ಟರೆ ಅಕ್ಷಯ್ ಕುಮಾರ್ ಯಾವ ಸಿನಿಮಾನು ಹಿಟ್ ಆಗಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಕಾಯುತ್ತಿದ್ದಾರೆ.  

Follow Us:
Download App:
  • android
  • ios