ಕಣಿವೆ ರಾಜ್ಯದಲ್ಲಿ ಶಾಲೆ ಕಟ್ಟಲು 1 ಕೋಟಿ ನೀಡಿದ ಅಕ್ಷಯ್ ಕುಮಾರ್ ಅಡಿಗಲ್ಲು ನೆರವೇರಿಸಿದ ಫೋಟೋ ಶೇರ್ ಮಾಡಿದ ಬಿಎಸ್‌ಎಫ್ ಯೋಧರು
ನೈಸರ್ಗಿಕ ವಿಪತ್ತು ಸಂಭವಿಸಿದಾಗ ಅಥವಾ ಸಾಂಕ್ರಾಮಿಕವಾಗಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಮಾಜಮುಖಿ ಕೆಲಸ ಮಾಡುವಾಗ ಮುಂಚೂಣಿಯಲ್ಲಿರುತ್ತಾರೆ. ಇವಯಗಳಲ್ಲಿ ಶಿಕ್ಷಣವೂ ಒಂದು.
ಅವರು ಜೂನ್ 17 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ನೊಂದಿಗೆ ಇಡೀ ದಿನ ಕಳೆದಿದ್ದರು. ನಂತರ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದೆ.
ಅಕ್ಷಯ್ ಕುಮಾರ್‌ನಲ್ಲಿದೆ 350 ಜೋಡಿ ಶೂ: ನಟನಿಗೆ ಡ್ರೆಸ್ ಮಾಡೋಕೆ 11 ಜನ
ಇಂದು ಗಡಿಗಳನ್ನು ಕಾಪಾಡುವ ಧೈರ್ಯಶಾಲಿಗಳೊಂದಿಗೆ ಸ್ಮರಣೀಯ ದಿನವನ್ನು ಕಳೆದೆ. ಇಲ್ಲಿಗೆ ಬರುವುದು ಯಾವಾಗಲೂ ವಿನಮ್ರ ಅನುಭವವಾಗಿದೆ. ನಿಜವಾದ ವೀರರನ್ನು ಭೇಟಿಯಾಗಿ ನನ್ನ ಹೃದಯವು ಗೌರವದಿಂದ ತುಂಬಿದೆ ಎಂದಿದ್ದರು.
ತನ್ನ ಭೇಟಿಯ ಸಮಯದಲ್ಲಿ 53 ವರ್ಷದ ಶಾಲೆಯು ಶಿಥಿಲಾವಸ್ಥೆಯಲ್ಲಿದೆ ಮತ್ತು ಅದನ್ನು ಪುನರ್ನಿರ್ಮಿಸಲು ₹ 1 ಕೋಟಿ ಕೊಡುಗೆ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದೆ.
ಜಮ್ಮು ಮತ್ತು ಕಾಶ್ಮೀರ ಗ್ರಾಮದ ಶಾಲೆಗೆ 1 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್
ಜುಲೈ 27 ರಂದು ಬಿಎಸ್ಎಫ್ ಟ್ವಿಟ್ಟರ್‌ನಲ್ಲಿ ಈ ಮಾಹಿತಿ ಶೇರ್ ಮಾಡಿದೆ. ಶಾಲೆಗೆ ಅಡಿಪಾಯ ಹಾಕಲಾಗಿದೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲಾಗೊದೆ. ಶಿಕ್ಷಣ ಸಂಸ್ಥೆಗೆ ಅವರ ತಂದೆ ದಿವಂಗತ ಹರಿ ಓಂ ಭಾಟಿಯಾ ಅವರ ಹೆಸರನ್ನು ಇಡಲಾಗಿದೆ.
ಅವರು ವರ್ಚುವಲ್ ಈವೆಂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕಾಶ್ಮೀರದ ಸರ್ಕಾರಿ ಮಿಡಲ್ ಸ್ಕೂಲ್‌ನಲ್ಲಿ ಹರಿ ಓಂ ಭಾಟಿಯಾ ಎಜುಕೇಶನ್ ಬ್ಲಾಕ್‌ಗೆ ಅಡಿಪಾಯ ಹಾಕಿದ್ದಾರೆ ಎಂದು ಬರೆದಿದ್ದಾರೆ.
