ಆಕಾಂಕ್ಷಾ ದುಬೆ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ತಾಯಿ ಆರೋಪ ಮಾಡಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಭೋಜ್‌ಪುರಿಯ ಖ್ಯಾತ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಎಂದು ಅವರ ತಾಯಿ ಆರೋಪ ಮಾಡಿದ್ದಾರೆ. ಪ್ರಾಥಾಮಿಕ ವರದಿ ಪ್ರಕಾರ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೀಗ ಆಕಾಂಕ್ಷಾ ಸಾವಿನ ಪ್ರಕರಣಕ ತಿರುವು ಪಡೆದುಕೊಂಡಿದೆ. ಮಗಳ ಸಾವಿಗೆ ಸಮರ್ ಸಿಂಗ್ ಮತ್ತು ಸಂಜಯ್ ಸಿಂಗ್ ಕಾರಣ ಎಂದು ತಾಯಿ ಆರೋಪ ಮಾಡಿದ್ದಾರೆ. ಸಮರ್ ಸಿಂಗ್ ಖ್ಯಾತ ಗಾಯಕ. 

ಗಾಯಕ ಸಮರ್ ಸಿಂಗ್ ಸಂಜಯ್ ಸಿಂಗ್ ಇಬ್ಬರೂ ಆಕಾಂಕ್ಷಾ ದುಬೆಗೆ ಬೆದರಿಕೆ ಹಾಕುತ್ತಿದ್ದರು ಎಂದು ತಾಯಿ ಮಧು ದುಬೆ ಹೇಳಿದ್ದಾರೆ. ಮಧು ದುಬೆ ಪ್ರಕಾರ, ಕಳೆದ ಮೂರು ವರ್ಷಗಳಿಂದ ಸಮರ್ ಸಿಂಗ್ ಮತ್ತು ಸಹೋದರ ಸಂಜಯ್ ಸಿಂಗ್ ಅವಳ ಕೆಲಸಕ್ಕೆ ಹಣ ನೀಡಿಲ್ಲ. ಕೋಟಿಗಟ್ಟಲೆ ಹಣಕೊಡಬೇಕಾಗಿತ್ತು. ಮಾರ್ಚ್ 21ರಂದು ಸಮರ್ ಸಿಂಗ್ ಸಹೋದರ ಸಂಜಯ್ ಸಿಂಗ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಆಕಾಂಕ್ಷಾ ಫೋನ್ ನಲ್ಲಿ ಹೇಳಿಕೊಂಡಿದ್ದಳು ಎಂದು ಹೇಳಿದ್ದಾರೆ. 

ಸಮರ್ ಸಿಂಗ್ ಜೊತೆ ಆಕಾಂಕ್ಷ ಸಿಂಗ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಇತ್ತು. ಅಲ್ಲದೇ ಈ ಬಗ್ಗೆ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಆಕಾಂಕ್ಷಾ ಪರೋಕ್ಷವಾಗಿ ಪ್ರೀತಿ ವ್ಯಕ್ತಪಡಿಸುತ್ತಿದ್ದರು. 2023 ರ ಪ್ರೇಮಿಗಳ ದಿನದಂದು ಶೇರ್ ಮಾಡಿದ್ದ ಪೋಸ್ಟ್ ಅನುಮಾನ ಮತ್ತಷ್ಟು ಬಲವಾಗುವಂತೆ ಮಾಡಿತ್ತು. ಆದರೀಗ ತಾಯಿ ಸಮರ್ ಸಿಂಗ್ ಮೇಲೆಯೇ ಆರೋಪ ಮಾಡಿರುವುದು ಅಚ್ಚರಿ ಮೂಡಿಸಿದೆ.

ಆಂಗ್ಲ ಮಾಧ್ಯಗಳು ವರದಿ ಮಾಡಿದ ಪ್ರಕಾರ ನಟಿ ಆಕಾಂಕ್ಷಾ 2018 ರಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಸಿನಿಮಾದಿಂದ ವಿಶ್ರಾಂತಿ ತೆಗೆದುಕೊಂಡಿದ್ದರು. ಬಳಿಕ ಮತ್ತೆ ಸಿನಿಮಾರಂಗಕ್ಕೆ ಪಾವಾಸ್ ಆಗಿದ್ದರು. ಆದರೀಗ ದೀವನವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟು ಹೋಗಿರುವುದು ದುರಂತ. 

ವಾರಾಣಸಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟಿ ಆಕಾಂಕ್ಷಾ ದುಬೆ; ಆತ್ಮಹತ್ಯೆ ಶಂಕೆ

ಸಿನಿಮಾ ಶೂಟಿಂಗ್‌ಗೆ ಹೋಗಾದ ಶವವಾದ ನಟಿ 

ಆಕಾಂಕ್ಷಾ ದುಬೆ ಮುಂದಿನ ಸಿನಿಮಾದ ಶೂಟಿಂಗ್‌ಗಾಗಿ ವಾರಣಾಸಿಯಲ್ಲಿದ್ದರು. ಚಿತ್ರೀಕರಣದ ನಂತರ ಆಕಾಂಕ್ಷಾ ಅಲ್ಲಿನ ಸಾರನಾಥ್ ಹೋಟೆಲ್‌ಗೆ ತೆರಳಿದ್ದರು. ಆದರೆ ಅಲ್ಲೇ ಶವವಾಗಿ ಪತ್ತೆಯಾಗಿರುವುದು ಶಾಕ್ ನೀಡಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಆಕಾಂಕ್ಷಾ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗುವ ಕೆಲವೇ ಗಂಟೆಗಳ ಮೊದಲು ಭೋಜ್‌ಪುರಿಯ 'ಹಿಲೋರ್ ಮೇರ್‌' ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದರು.

Innocent Passes Away: ಮಲಯಾಳಂ ನಟ, ಮಾಜಿ ಸಂಸದ ಇನ್ನೋಸೆಂಟ್‌ ನಿಧನ

ಆಕಾಂಕ್ಷಾ ಸಿನಿಮಾಗಳು

ಭೋಜ್‌ಪುರಿಯ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಆಕಾಂಕ್ಷಾ ಮುಜ್ಸೆ ಶಾದಿ ಕರೋಗಿ, ವೀರೋನ್ ಕೆ ವೀರ್ ಮತ್ತು ಫೈಟರ್ ಕಿಂಗ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆಎಂಟ್ರಿ ನಟಿ ಆಕಾಂಕ್ಷಾ ಅದ್ಭತ ನಟನೆ ಮೂಲಕ ಅಭಿಮಾನಿಗಳ ಹೃದಯಗೆದ್ದಿದ್ದರು. ಸದ್ಯ ಆಕಾಂಕ್ಷಾ ದುಬೆ ಇತ್ತೀಚೆಗೆ ಭೋಜ್‌ಪುರಿ ಗಾಯಕ-ನಟ ಯಶ್ ಕುಮಾರ್ ಅವರೊಂದಿಗೆ 'ಮಿಟ್ಟಿ' ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ದುರಂತ ಎಂದರೆ ಆಕಾಂಕ್ಷಾ ದುಬೆ ಕಾಣಿಸಿಕೊಂಡಿದ್ದ ಯೇ ಆರಾ ಕಭಿ ಹರಾ ನಹಿ ಮ್ಯೂಸಿಕ್ ಆಲ್ಬಂ ಬಿಡುಗಡೆಯಾದ ದಿನವೇ ಕೊನೆಯುಸಿರೆಳೆದಿದ್ದಾರೆ. ಈ ಹಾಡಿನಲ್ಲಿ ಆಕಾಂಕ್ಷಾ ಪವನ್ ಸಿಂಗ್ ಜೊತೆ ನಟಿಸಿದ್ದರು.