ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ 358 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವದ ಅತ್ಯನ್ನುತ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಒಂದು ಸಿನಿಮಾ ಹಿಟ್ ಆಗಬೇಕಾದ್ರೆ ದೊಡ್ಡ ಬಜೆಟ್ ಮತ್ತು ಸ್ಟಾರ್ ಕಲಾವಿದರು ಬೇಕು ಅನ್ನೋ ಮಾತನ್ನು ಹಲವು ಚಿತ್ರಗಳು ಸಾಬೀತು ಮಾಡಿವೆ. ಕೆಲ ಸಿನಿಮಾಳಿಗೆ 500 ರಿಂದ 600 ಕೋಟಿ ಹಣ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಅದ್ಧೂರಿಯಾಗಿ ನಿರ್ಮಾಣವಾಗುವ ಚಿತ್ರಗಳು 1 ಸಾವಿರ ಕೋಟಿವರೆಗೂ ಸಂಪಾದನೆ ಮಾಡಿರುತ್ತವೆ. ಆದರೆ ಕಲಾತ್ಮಕ ಸಿನಿಮಾಗಳು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ನಾಲ್ಕರಿಂದ ಐದು ಪಟ್ಟು ಲಾಭ ಗಳಿಸುತ್ತವೆ. ಹಾಗಾಗಿ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾಗಳು ಇವುಗಳ ಮುಂದ ತಲೆ ಬಾಗಲೇಬೇಕು. ಇಂದು ನಾವು ಹೇಳುತ್ತಿರುವ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಸಿನಿರಂಗದ ಅತ್ಯನ್ನುತ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕೆಲವು ಚಿತ್ರಗಳು ಬಾಕ್ಸ್ ಆಫಿಸ್‌ನಲ್ಲಿ ಕಲೆಕ್ಷನ್ ಮಾಡಲು ವಿಫಲವಾದ್ರೂ ಅನೇಕ ಪ್ರಶಸ್ತಿಗಳು ಪಡೆದುಕೊಳ್ಳುವ ಮೂಲಕ ಚಿತ್ರರಂಗದ ಗಮನ ಸೆಳೆಯುತ್ತವೆ. ಒಂದಿಷ್ಟು ಸಿನಿಮಾಗಳು ಹಾಕಿದ ಬಂಡವಾಳದೊಂದಿಗೆ ಮೂರರಿಂದ ನಾಲ್ಕು ಪಟ್ಟು ಲಾಭ ಗಳಿಸಿರುತ್ತವೆ. ಹಾಗೆಯೇ ದೇಶ-ವಿದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ತನ್ನ ಬ್ಯಾಗ್‌ಗೆ ತುಂಬಿಸಿಕೊಳ್ಳುತ್ತವೆ. ಇಂದು ನಾವು ಹೇಳುತ್ತಿರುವ ಅನೋರಾ (Anora) ಸಿನಿಮಾ 6 ಪಟ್ಟು ಲಾಭ ಗಳಿಸಿ ದಾಖಲೆ ಬರೆದಿತ್ತು. ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಇದು ಅನೇಕ ಉತ್ತಮ ಚಲನಚಿತ್ರಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ತುಂಬಾ ಕಡಿಮೆ ಬಜೆಟ್ 52 ಕೋಟಿಯಲ್ಲಿ ((60 ಲಕ್ಷ ಡಾಲರ್) ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 358 ಕೋಟಿ ರೂಪಾಯಿ (41 ಮಿಲಿಯನ್ ಡಾಲರ್) ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ಕಣ್ಮುಚ್ಚಿದ್ರೂ ಭಯ, ಕಣ್ ಬಿಟ್ರೂ ಭಯ; 2 ಗಂಟೆ 32 ನಿಮಿಷದ ಈ ಸೈಕೋ ಥ್ರಿಲ್ಲರ್ ಸಿನಿಮಾ ಇನ್ನು ನೋಡಿಲ್ವಾ ?
97ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಸೀನ್ ಬೇಕರ್ ಅವರ ಅನೋರಾ ಚಿತ್ರ ಮ್ಯಾಜಿಕ್ ಮಾಡಿತ್ತು. ಈ ಚಿತ್ರವು ಐದು ಬೇರೆ ಬೇರೆ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದೆ. ಅನೋರಾ ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಟಿ, ಆಧಾರಿತ ಸಂಕಲನ ಮತ್ತು ಅತ್ಯುತ್ತಮ ನಿರ್ದೇಶನಕ್ಕಾಗಿ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದೆ. ಪ್ರಶಸ್ತಿಗಳಿಂದ, ಚಿತ್ರದ ಕಥೆ ಮತ್ತು ಚಿತ್ರದಲ್ಲಿನ ತಾರೆಯರ ನಟನೆ ಎಷ್ಟು ಅದ್ಭುತವಾಗಿತ್ತು ಎಂದು ನೀವು ಖಂಡಿತ ಊಹಿಸಬಹುದು.
ಸೀನ್ ಬೇಕರ್ ಬರೆದು ನಿರ್ದೆಶನ ಮಾಡಿರುವ ಅನೋರಾ, ಕಾಮಿಡಿ, ರೊಮ್ಯಾಂಟಿಕ್ ಸಿನಿಮಾ ಆಗಿದೆ. ಸೀನ್ ಬೇಕರ್ ಅವರೇ ಸಿನಿಮಾಗೆ ಹಣ ಹಾಕಿದ್ದರು. ಅಮೆರಿಕಾದ ಯುವತಿಯೋರ್ವಳ ಕಥೆ ಇದಾಗಿದ್ದು, ಶ್ರೀಮಂತ ರಷ್ಯಾದ ಹುಡುಗನನ್ನು ಪ್ರೀತಿಸಿ ಅವನನ್ನೇ ಮದುವೆಯಾಗುತ್ತಾಳೆ. ನಂತರ ಚಿತ್ರದಲ್ಲಿ ಕೌಟುಂಬಿಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಅನೋರಾ ಚಿತ್ರ ಕಳೆದ ವರ್ಷ 77 ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡಿತು.
ಇದನ್ನೂ ಓದಿ: ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ!

