ಫ್ರೆಂಡ್‌ ಎಂದ ಧನುಷ್‌ಗೆ ಬಯೋ, ಟ್ವೀಟರ್‌ನಿಂದ ಪತ್ನಿ ಐಶ್ವರ್ಯಾ ಕೊಕ್‌!

ರಜನೀಕಾಂತ್‌ರ ಪುತ್ರಿ ಐಶ್ವರ್ಯಾ ತಮ್ಮ ಟ್ವೀಟರ್‌ ಬಯೋದಿಂದ ಪತಿ ಧನುಷ್‌ ಹೆಸರು ತೆಗೆದು ಹಾಕಿದ್ದಾರೆ. ‘ಐಶ್ವರ್ಯಾ ಆರ್‌ ಧನುಷ್‌’ ಎಂದಿದ್ದ ಟ್ವೀಟರ್‌ ಖಾತೆಯನ್ನು ‘ಐಶ್ವರ್ಯಾ ರಜನೀಕಾಂತ್‌’ ಎಂದು ಬದಲಾಯಿಸಿಕೊಂಡಿದ್ದಾರೆ. 

Aishwaryaa Rajinikanth Removes Dhanush name from Her Twitter Account after he Called her My Friend gvd

ಚೆನ್ನೈ (ಮಾ.24): ರಜನೀಕಾಂತ್‌ರ ( Rajinikanth) ಪುತ್ರಿ ಐಶ್ವರ್ಯಾ (Aishwaryaa) ತಮ್ಮ ಟ್ವೀಟರ್‌ (Twitter) ಬಯೋದಿಂದ ಪತಿ ಧನುಷ್‌ ಹೆಸರು ತೆಗೆದು ಹಾಕಿದ್ದಾರೆ. ‘ಐಶ್ವರ್ಯಾ ಆರ್‌ ಧನುಷ್‌’ (Aishwaryaa R Dhanush) ಎಂದಿದ್ದ ಟ್ವೀಟರ್‌ ಖಾತೆಯನ್ನು ‘ಐಶ್ವರ್ಯಾ ರಜನೀಕಾಂತ್‌’ (Aishwaryaa Rajinikanth) ಎಂದು ಬದಲಾಯಿಸಿಕೊಂಡಿದ್ದಾರೆ. ಜ.17 ರಂದು ಧನುಷ್‌ (Dhanush) ಹಾಗೂ ಐಶ್ವರ್ಯಾ ವೈವಾಹಿಕ ಸಂಬಂಧ ಕೊನೆಗೊಳಿಸಿ ಪರಸ್ಪರ ಬೇರ್ಪಡುವುದಾಗಿ ಘೋಷಿಸಿದ್ದರು. 

ಇತ್ತೀಚೆಗೆ ಐಶ್ವರ್ಯಾ ನಿರ್ದೇಶನದ ಹೊಸ ಹಾಡು ‘ಪಯನಿ’ (Payani) ಬಿಡುಗಡೆಯ ಸಂದರ್ಭದಲ್ಲಿ, ಧನುಷ್‌ ‘ಅಭಿನಂದನೆಗಳು ಫ್ರೆಂಡ್‌’ ಎಂದು ಟ್ವೀಟ್‌ (Tweet) ಮಾಡಿದ್ದರು. ಇದಕ್ಕೆ ಐಶ್ವರ್ಯಾ ಕೂಡಾ ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದರು. ಇದನ್ನು ಕಂಡ ಇಬ್ಬರ ನಡುವಿನ ವೈಮನಸ್ಸು ಕಡಿಮೆಯಾಗಿದೆ ಎಂದು ಅಭಿಮಾನಿಗಳು ಖುಷಿ ಪಡುತ್ತಿದ್ದ ಬೆನ್ನಲ್ಲೇ, ಐಶ್ವರ್ಯಾ ತಮ್ಮ ಪತಿಯ ಹೆಸರನ್ನು ಟ್ವೀಟರ್‌ ಖಾತೆಯಿಂದ ತೆಗೆದುಹಾಕಿದ್ದಾರೆ.

ಐಶ್ವರ್ಯಾ, ಧನುಷ್ ಮತ್ತು ಶ್ರುತಿ ಹಾಸನ್ ನಟನೆಯ 3 ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟಿದ್ದರು. ಬಳಿಕ ಎರಡು ಸಿನಿಮಾಗಳನ್ನು ಮಾಡಿದ್ದ ಐಶ್ವರ್ಯಾ ನಂತರ ಸೈಲೆಂಟ್ ಆಗಿದ್ದರು. ಇತ್ತೀಚಿಗೆ ಪತಿ ಧುನುಷ್ ಜೊತೆ ವಿಚ್ಛೇದನ ಘೋಷಿಸಿದ ಬಳಿಕ ಮತ್ತೆ ಸಕ್ರೀಯರಾಗಿರುವ ಐಶ್ವರ್ಯಾ ವಿಡಿಯೋ ಸಾಂಗ್ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಈ ಹಾಡನ್ನು ಇತ್ತೀಚಿಗಷ್ಟೆ ಬಿಡುಗಡೆ ಮಾಡಿದ್ದು ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಈಗ ಬಾಲಿವುಡ್ ಸಿನಿಮಾ ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. 

ವಿಚ್ಛೇದನ ಬಳಿಕ ಮೊದಲ ಬಾರಿ ಮಕ್ಕಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ ಧನುಷ್

ಇತ್ತೀಚಿಗೆ ಕೋವಿಡ್ ಪಾಸಿಟಿವ್ ಗೆ ಐಶ್ವರ್ಯಾ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ವಿಡಿಯೋ ಹಾಡಿನ ಮೂಲಕ ಸದ್ದು ಮಾಡಿದ್ದ ಐಶ್ವರ್ಯಾಗೆ ಅನೇಕ ಸ್ಟಾರ್ ಕಲಾವಿದರು ವಿಶ್ ಮಾಡಿದ್ದರು. ಮಾಜಿ ಪತಿ ಧನುಷ್ ಕೂಡ ಶುಭಹಾರೈಸಿದ್ದರು. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಧನುಷ್, ಐಶ್ವರ್ಯಾ ಹಾಡಿನ ಲಿಂಕ್ ಶೇರ್ ಮಾಡಿದ್ದಾರೆ. ಅಷ್ಟೆಯಲ್ಲ ನನ್ನ ಗೆಳತಿ ಎಂದು ಪತ್ನಿಯನ್ನು ಕರೆದಿದ್ದಾರೆ. 'ಮ್ಯೂಸಿಕ್ ವಿಡಿಯೋಗೆ ಒಳ್ಳೆಯದಾಗಲಿ ನನ್ನ ಗೆಳತಿ ಐಶ್ವರ್ಯಾ, ಅಭಿನಂದನೆಗಳು' ಎಂದು ಹೇಳಿದ್ದರು.

ಧನುಷ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಐಶ್ವರ್ಯಾ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದರು. ಅಂದಹಾಗೆ ಐಶ್ವರ್ಯಾ ಟ್ವಿಟ್ಟರ್ ಖಾತೆಯಲ್ಲಿ ತನ್ನ ಹೆಸರಿನ ಜೊತೆ ಧನುಷ್ ಹೆಸರನ್ನು ಹಾಗೆ ಉಳಿಸಿಕೊಂಡಿದ್ದಾರೆ. ಗಂಡ-ಹೆಂಡತಿ ಸಂಬಂಧ ಕಡಿದುಕೊಂಡು ಇಬ್ಬರು ದೂರ ದೂರ ಆಗಿದ್ದರೂ ಐಶ್ವರ್ಯಾ ಪತಿಯ ಹೆಸರನ್ನು ಹಾಗೆ ಉಳಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಡಿಸೆಂಬರ್‌ನಲ್ಲಿ ಧನುಷ್ ಮತ್ತು ಐಶ್ವರ್ಯಾ ಜೋಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇಬ್ಬರು ಬೇರೆ ಬೇರೆ ಆಗುತ್ತಿದ್ದೀವಿ ಎಂದು ಬಹಿರಂಗ ಪಡಿಸುವ ಮೂಲಕ ಸಂಚಲನ ಮೂಡಿಸಿದ್ದರು.

'18 ವರ್ಷಗಳ ಸ್ನೇಹ, ದಾಂಪತ್ಯ, ಪೋಷಕರು ಮತ್ತು ಹಿತೈಶಿಗಳಾಗಿ ಒಟ್ಟಿಗೆ ಪಯಣ ಮಾಡಿದ್ದೇವೆ. ನಮ್ಮ ಪಯಣ ಹೊಂದಾಣಿಕೆಯಿಂದ ಕೂಡಿತ್ತು. ಆದರೆ ಇಂದು ನಾವು ಬೇರೆ ಬೇರೆ ಮಾರ್ಗದಲ್ಲಿ ಸಾಗಲು ನಿರ್ಧರಿಸಿದ್ದೇವೆ. ಐಶ್ವರ್ಯಾ ಮತ್ತು ನಾನು ಬೇರೆ ಆಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ಗೌರವ ನೀಡಿ. ನಮ್ಮ ಖಾಸಗಿತನಕ್ಕೆ ಸಮಯ ನೀಡಿ' ಎಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಐಶ್ವರ್ಯಾ ಮತ್ತು ಧನುಷ್ ಇದೀಗ ಟ್ವಿಟ್ಟರ್ ನಲ್ಲಿ ಮಾತುಕತೆ ನಡೆಸುವ ಮೂಲಕ ಎಲ್ಲರ ಮಗನ ಸೆಳೆದಿದ್ದಾರೆ. ಇಬ್ಬರ ನಡೆ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ.

ಮಾಜಿ ಪತ್ನಿಗೆ 'ನನ್ನ ಗೆಳತಿ' ಎಂದ ಧನುಷ್; ಐಶ್ವರ್ಯಾ Replay ಇದು

ಇನ್ನು ಧನುಷ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಧನುಷ್ ಕೊನೆಯದಾಗಿ ಅತ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದಿ ಬಂದಿದ್ದರು. ಹಿಂದಿ ಸಿನಿಮಾವಾಗಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸಿದ್ದರು. ನಾಯಕಿಯಾಗಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿದ್ದರು. ಸದ್ಯ ಧನುಷ್ ಬಳಿ ಮಾರನ್, ದಿ ಗ್ರೇ ಮೆನ್, ನಾನೆ ವರುವೆನ್, ವಾತಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Latest Videos
Follow Us:
Download App:
  • android
  • ios