ರಜನಿಕಾಂತ್ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನ, ಚಿನ್ನಾಭರಣ ದೋಚಿದ ಖದೀಮರು; ದೂರು ದಾಖಲು

ಸೂಪರ್ ಸ್ಟಾರ್ ರಜನಿಕಾಂತ್ ಹಿರಿಯ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನವಾಗಿದ್ದು ಚಿನ್ನಾಭರಣಗಳನ್ನು ಖದೀಮರು ದೋಚಿದ್ದಾರೆ. ಸದ್ಯ ದೂರು ದಾಖಲಾಗಿದ್ದು ಪೊಲೀಸರು ಕಳ್ಳರನ್ನು ಹುಡುತ್ತಿದ್ದಾರೆ. 

Aishwaryaa Rajinikanth files complaint after 60 sovereigns of jewellery get stolen sgk

ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನವಾಗಿದೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿ ಕಳ್ಳಲು ಪರಾರಿಯಾಗಿದ್ದಾರೆ. ಐಶ್ವರ್ಯ ಅವರ ಚೆನ್ನೈನ ನಿವಾಸದಲ್ಲಿ ಈ ಘಟನೆ ನಡೆದಿದೆ. ಸದ್ಯ  ತೆನಾಂಪೇಟೆ ಪೊಲೀಸರಿಗೆ ದೂರು ನೀಡಿದ್ದು ಚಿನ್ನ ಕದ್ದ ಖದೀಮರಿಗಾಗಿ ಹುಡುಕಾಟ ನಡೆಯುತ್ತಿದೆ. ಬೆಲೆಬಾಳುವ ವಸ್ತುಗಳು, ಚಿನ್ನಾಭರಣಗಳನ್ನು ಕದ್ದಿರುವ ಬಗ್ಗೆ ವರದಿಯಾಗಿದೆ. 

ಎಫ್‌ಐಆರ್ ಪ್ರತಿಯ ಪ್ರಕಾರ, ಐಶ್ವರ್ಯ ಅವರು ಆಭರಣವನ್ನು ಲಾಕರ್‌ನಲ್ಲಿ ಇರಿಸಿದ್ದರು ಮತ್ತು ಆ ಬಗ್ಗೆ  ಮನೆಯ ಕೆಲವು ಕೆಲಸದವರಿಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಸದ್ಯ ತೇನಂಪೇಟೆ ಪೊಲೀಸರು ಐಪಿಸಿ ಸೆಕ್ಷನ್ 381 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 60 ಪವನ್ ಚಿನ್ನ, ವಜ್ರದ ಅಭರಣ ಮತ್ತು 3ಲಕ್ಷಕ್ಕೂ ಅಧಿಕ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿಸಿದ್ದಾರೆ. ಐಶ್ವರ್ಯಾ ತನ್ನ ಮದುವೆಯ ಆಭರಣ ಮತ್ತು ಸಹೋದರಿ ಸೌಂದರ್ಯ ಮದುವೆಗೆ ಬಳಸಿದ್ದ ಆಭರಣಗಳನ್ನು ಕಳ್ಳಲು ದೋಚಿದ್ದಾರೆ ಎನ್ನಲಾಗಿದೆ. 

ಐಶ್ವರ್ಯಾ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡಿದ ಅನೇಕ ಪ್ರದೇಗಳಲ್ಲಿ ಸುತ್ತಾಡುತ್ತಿದ್ದಾರೆ. ಐಶ್ವರ್ಯಾ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಂದಹಾಗೆ ಈ ಘಟನೆ ಸಂಭವಿಸಿ ಒಂದು ತಿಂಗಳಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಫೆಬ್ರವರಿಯಲ್ಲಿ  ಐಶ್ವರ್ಯಾ ರಜನಿಕಾಂತ್ ಅವರು ಚಿನ್ನಾಭರಣ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದರು. 2019 ರಲ್ಲಿ ತನ್ನ ಸಹೋದರಿ ಸೌಂದರ್ಯ ಅವರ ಮದುವೆಯಲ್ಲಿ ಆಭರಣಗಳನ್ನು ಧರಿಸಿದ ಬಳಿಕ ಮತ್ತೆ ಆಭರಣಗಳನ್ನು ಅವರು ನೋಡಿರಲಿಲ್ಲವಂತೆ. ಅದೇ ಕೊನೆಯ ಬಾರಿಗೆ ಆಭರಣಗಳನ್ನು ನೋಡಿದ್ದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯ ನಂತರ ಅವುಗಳನ್ನು ತನ್ನ ಬಳಿಯಿದ್ದ ಲಾಕರ್‌ನಲ್ಲಿಯೇ ಇರಿಸಿದ್ದೆ ಎಂದು ಹೇಳಿದ್ದಾರೆ. 

ಐಶ್ವರ್ಯಾ ರಜನಿಕಾಂತ್ 2022ರಲ್ಲಿ ನಟ ಧನುಷ್ ಜೊತೆ ವಿಚ್ಛೇದನ ಪಡೆದು ದೂರ ಆದರು. ಅದಕ್ಕೂ ಮೊದಲು ಲಾಕರ್ ಅನ್ನುಮೂರು ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಆಗಸ್ಟ್ 21, 2021 ರಲ್ಲಿ ಆ ಲಾಕರ್ ಅನ್ನು ಸಿಐಟಿ ನಗರದಲ್ಲಿದ್ದ ಐಶ್ವರ್ಯಾ ಮಾಜಿ ಪತಿ ಧನುಷ್ ಅವರ ಫ್ಲಾಟ್‌ಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಅದನ್ನು ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಿಸಲಾಯಿತು.
ಏಪ್ರಿಲ್ 2022 ರಲ್ಲಿ ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಲಾಕರ್‌ನ ಕೀಗಳು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಫ್ಲಾಟ್‌ನಲ್ಲಿ ಉಳಿದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. 

Rajinikanth Daughter Divorce: ಐಶ್ವರ್ಯಾ ಮಾತ್ರವಲ್ಲ, ರಜನಿಕಾಂತ್ ಕಿರಿಯ ಮಗಳು ಕೂಡ ಡಿವೋರ್ಸಿ!

ಫೆಬ್ರವರಿ 10, 2023 ರಂದು ಐಶ್ವರ್ಯಾ ಲಾಕರ್ ತೆರೆದಾಗ ಆಭರಣಗಳು ಮಂಗಮಾಯವಾಗಿದ್ದನ್ನು ನೋಡಿದ್ದಾರೆ. ಮದುವೆಯಾದ 18 ವರ್ಷಗಳಲ್ಲಿ ಸಂಗ್ರಹವಾದ ಆಭರಣಗಳು ಕಾಣೆಯಾಗಿದ್ದನ್ನು ಕಂಡು ಆಘಾತಕ್ಕೊಳಗಾಗಿದ್ದರು. ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣಗಳು, ನವರತ್ನ ಸೆಟ್‌ಗಳು, ಬಳೆ ಸೇರಿದಂತೆ ಸುಮಾರು 60 ಪವನ್ ಚಿನ್ನಾಭರಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 
 
ಮೂವರು ಬಗ್ಗೆ ಅನುಮಾನ

ದೂರಿನಲ್ಲಿ ಐಶ್ವರ್ಯಾ ತಮ್ಮ ಮನೆ ಕೆಲಸ ಮಾಡುತ್ತಿದ್ದ ಈಶ್ವರಿ, ಲಕ್ಷ್ಮಿ ಮತ್ತು ಅವರ ಚಾಲಕ ವೆಂಕಟ್  ಸೇಂಟ್ ಮೇರಿಸ್ ರಸ್ತೆಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬರೆದಿದ್ದಾರೆ. ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಕಳ್ಳರ ಹುಡುಕಾಟದಲ್ಲಿದ್ದಾರೆ. 

ಫ್ರೆಂಡ್‌ ಎಂದ ಧನುಷ್‌ಗೆ ಬಯೋ, ಟ್ವೀಟರ್‌ನಿಂದ ಪತ್ನಿ ಐಶ್ವರ್ಯಾ ಕೊಕ್‌!

ಐಶ್ವರ್ಯಾ ರಜನಿಕಾಂತ್ ಸದ್ಯ ಲಾಲ್ ಸಲಾಂ ಚಿತ್ರದ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ. . ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗಬೇಕಿದೆ. 
 

Latest Videos
Follow Us:
Download App:
  • android
  • ios