ಬಾಲಿವುಡ್ ನಟಿ ಐಶ್ವರ್ಯಾ ರೈ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆಕ್ಟಿವ್ ಇಲ್ಲ. ಆದರೆ ಈಗ ನಟಿ ಸಿಂಗಲ್ ಫೋಟೋ ಶೇರ್ ಮಾಡಿದ್ದಾರೆ. ಅದರ ಹಿಂದೆ ಸ್ಟ್ರಾಂಗ್ ಕಾರಣವಿದೆ. ಏನದು..? ಇಲ್ಲಿ ಓದಿ

ಐಶ್ವರ್ಯಾ ಅವರು ಗಾರ್ಡನ್‌ನಲ್ಲಿ ನಿಂತ ಫೋಟೋ ಶೇರ್ ಮಾಡಿದ್ದಾರೆ. ತನ್ನ ಅಂಗೈಯೊಂದಿಗೆ ಕ್ಯಾಮೆರಾದತ್ತ ಮುಖ ಮಾಡಿ, ಅದರ ಮೇಲೆ ‘ಡಿ’ ಅಕ್ಷರವನ್ನು ಬರೆಯಲಾಗಿದೆ. ಅವರ ಮುಖದ ಮೇಲೆ ತೀವ್ರವಾದ ಅಭಿವ್ಯಕ್ತಿ ಇತ್ತು ಮತ್ತು ಕೆಂಪು ಲಿಪ್‌ಸ್ಟಿಕ್ ಧರಿಸಿದ್ದರು.

ಮಹಿಳೆಯರ ಮೇಲಿನ ದೌರ್ಜನ್ಯದ ನಿರ್ಮೂಲನೆಗಾಗಿ ಈ ಅಂತರರಾಷ್ಟ್ರೀಯ ದಿನ, #LOrealParis ಮತ್ತು ಹೊಲ್ಲಾಬ್ಯಾಕ್‌ನೊಂದಿಗೆ ರಸ್ತೆಯಲ್ಲಿ ಹೆಣ್ಮಕ್ಕಳಿಗೆ ಕಿರುಕುಳದ ವಿರುದ್ಧ ಸ್ಟ್ಯಾಂಡ್‌ಅಪ್ Standup-india.com ನಲ್ಲಿ 5D ಯ ವಿಧಾನದ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ಈಗ ತರಬೇತಿ ಪಡೆಯಿರಿ ಎಂದು ಅವರು ತಮ್ಮ ಪೋಸ್ಟ್‌ನೊಂದಿಗೆ ಬರೆದಿದ್ದಾರೆ.

ಶಾರೂಖ್ ಖಾನ್‌ನ ಲಂಡನ್‌ನ ಮನೆ ಬೇಕು ಎಂದ ಕರೀನಾ ಕಪೂರ್..!

ಈ ಹಿಂದೆ, ಲೋರಿಯಲ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಅದಿತಿ ರಾವ್ ಹೈದರಿ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದೇ ರೀತಿಯ ಚಿತ್ರವನ್ನು ಹಂಚಿಕೊಂಡಿದ್ದರು. ಅವರು ಕೂಡ ತನ್ನ ಅಂಗೈಯಲ್ಲಿ ‘ಡಿ’ ಬರೆದು ಬೀದಿ ಕಿರುಕುಳದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತರಬೇತಿ ತೆಗೆದುಕೊಳ್ಳುವಂತೆ ತನ್ನ ಅಭಿಮಾನಿಗಳನ್ನು ಕೇಳಿಕೊಂಡಿದ್ದರು.

View post on Instagram