ಐಶ್ ಬೇಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ! | ಸದ್ಯದಲ್ಲೇ ತೆರೆ ಮೇಲೆ ಬರಲಿದ್ದಾರೆ ಐಶ್ ಬೇಬಿ |  ಮಣಿರತ್ನಂ ಮುಂದಿನ ಚಿತ್ರದಲ್ಲಿ  ಐಶ್ವರ್ಯಾ ರೈ? 

ಬೆಂಗಳೂರು (ಏ. 05): ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಈ ಬಾರಿ ದಕ್ಷಿಣ ಭಾರತದ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಐಶ್ ಬೇಬಿ! 

ಸಾಹೋ ಚಿತ್ರಕ್ಕಾಗಿ 10 ಲಕ್ಷ ರೂ. ಬೈಕ್ ಬಳಸಿದ ಬಾಹುಬಲಿ ಪ್ರಭಾಸ್!

ಫೆನ್ನಿ ಖಾನ್ ಚಿತ್ರದ ನಂತರ ಐಶ್ ಬಣ್ಣ ಹಚ್ಚಿರಲಿಲ್ಲ. ಇದೀಗ ಸೌತ್ ಕಡೆ ಬರಲು ಮನಸ್ಸು ಮಾಡಿದ್ದು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ’ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. 

ಮಣಿರತ್ನಂ ಸಿನಿಮಾ ಎಂದರೆ ಸಾಕು ಏನಾದರೂ ವಿಶೇಷ ಇದ್ದೇ ಇರುತ್ತದೆ. ’ಪೊನ್ನಿಯಿನ್ ಸೆಲ್ವನ್’ ಐತಿಹಾಸಿಕ ಸಿನಿಮಾವಾಗಿದ್ದು ದೊಡ್ಡ ತಾರಾ ಬಳಗವೇ ಇದೆ. ಚಿಯಾನ್ ವಿಕ್ರಮ್, ಮೋಹನ್ ಬಾಬು, ಕಾರ್ತಿಕ್ ಮತ್ತು ಜಯಂ ರವಿ ಸೇರಿದಂತೆ ಸಾಕಷ್ಟು ಖ್ಯಾತ ಕಲಾವಿದರು ನಟಿಸಲಿದ್ದಾರೆ. 

ಕಿರುತೆರೆ ರಾಧಿಕಾ ಪಂಡಿತ್ ಇವರು...!

ಮಣಿರತ್ನಂ ಚಿತ್ರದ ಮೂಲಕ ಐಶ್ವರ್ಯಾ ರೈ ಸಿನಿ ಪಯಣ ಆರಂಭವಾಗಿತ್ತು. 1997 ರಲ್ಲಿ ’ಇರುವನ್’ ಚಿತ್ರದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು. ನಂತರ ಗುರು, ರಾವಣ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. 9 ವರ್ಷಗಳ ನಂತರ ಮತ್ತೆ ತಮಿಳು ಚಿತ್ರರಂಗಕ್ಕೆ ಕರೆ ತರುತ್ತಿದ್ದಾರೆ ಮಣಿರತ್ನಂ.