ಮುಂಬೈ (ಜು 17 )  ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕೊರೋನಾ ಕಾಟ ನಿಂತಿಲ್ಲ. ಇದೀಗ  ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಶ್ವರ್ಯಾ ರೈಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಕೆಲ ದಿನಗಳ ಹಿಂದೆ ಖಚಿತವಾಗಿತ್ತು ಈಗ ಐಶ್ವರ್ಯಾ ಜತೆ ಪುತ್ರಿ ಆರಾಧ್ಯ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋವಿಡ್ ಸೋಂಕು ತಗುಲಿರುವುದು ಖಚಿತವಾದ ಬಳಿಕ ಐಶ್ವರ್ಯಾ ರೈ ಹೋಂ ಕ್ವಾರಂಟೈನ್‌ನಲ್ಲಿದ್ದರು. ಶುಕ್ರವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಶ್ವರ್ಯಾ ಆರೋಗ್ಯದ ಬಗ್ಗೆ ಆಸ್ಪತ್ರೆ ಇನ್ನೂ  ಅಧಿಕೃತ ಮಾಹಿತಿ ನೀಡಿಲ್ಲ.

ಹೇಗಿದ್ದರು ನೋಡಿ ಬಚ್ಚನ್ ಸೊಸೆ, ಗುರುತೇ ಸಿಗಲ್ಲ

ಈಗಾಗಲೇ  ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಶ್ವರ್ಯಾ ಅವರು ಪುತ್ರಿ ಜೊತೆ ಹೋಂ ಕ್ವಾರಂಟೈನ್‌ನಲ್ಲಿದ್ದರು. ಇಂದು ಅವರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಗೆ ಇಡಿ ಬಚ್ಚನ್ ಕುಟುಂಬ ನಾನಾವತಿ ಆಸ್ಪತ್ರೆ ಸೇರಿದಂತೆ ಆಗಿದೆ. . ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್  ಮಾತ್ರ ಕೊರೋನಾದಿಂದ ಬಚಾವ್ ಆಗಿದ್ದಾರೆ.