ಅಗ್ನಿಸಾಕ್ಷಿ ಧಾರಾವಾಹಿ(Agnisakshi Serial) ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ನಟ ವಿಜಯ್ ಸೂರ್ಯ(Vijay Surya). ಅಗ್ನಿಸಾಕ್ಷಿಯಲ್ಲಿ ಸಿದ್ಧಾರ್ಥ್ ಪಾತ್ರದಲ್ಲಿ ಕಾಣಿಕೊಂಡಿದ್ದ ವಿಜಯ್ ಅದೇ ಹೆಸರಿನ ಮೂಲಕವೇ ಖ್ಯಾತಿಗಳಿಸಿದ್ದರು ಇದೀಗ ವಿಜಯ್ ಸೂರ್ಯ ಮತ್ತೆ ಬಣ್ಣ ಹಚ್ಚಿದ್ದು ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿ(Agnisakshi Serial) ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದ ನಟ ವಿಜಯ್ ಸೂರ್ಯ(Vijay Surya). ಅಗ್ನಿಸಾಕ್ಷಿಯಲ್ಲಿ ಸಿದ್ಧಾರ್ಥ್ ಪಾತ್ರದಲ್ಲಿ ಕಾಣಿಕೊಂಡಿದ್ದ ವಿಜಯ್ ಅದೇ ಹೆಸರಿನ ಮೂಲಕವೇ ಖ್ಯಾತಿಗಳಿಸಿದ್ದರು. ವಿಜಯ್ ಸೂರ್ಯ ಎನ್ನುವುದಕ್ಕಿಂತ ಸಿದ್ಧಾರ್ಥ್ ಎಂದರೇ ಥಟ್ ಅಂತ ಎಲ್ಲರಿಗೂ ಗೊತ್ತಾಗುತ್ತಿತ್ತು. ಅಷ್ಟರ ಮಟ್ಟಿಗೆ ಆ ಪಾತ್ರ ಪ್ರೇಕ್ಷಕರ ಮನದಲ್ಲಿತ್ತು. ಈ ಧಾರಾವಾಹಿ ಬಳಿಕ ವಿಜಯ್ ಮತ್ತೆ ಅಭಿಮಾನಿಗಳ ಮುಂದೆ ಬಂದರು. ಆದರೆ ಈ ಪಾತ್ರ ತಂಡುಕೊಟ್ಟ ಖ್ಯಾತಿ ಮಾತ್ರ ಸಿಕ್ಕಿಲ್ಲ. ವಿಜಯ್ ಸೂರ್ಯ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಕಿರುತೆರೆಯಿಂದ ದೂರ ಉಳಿದು ಪತ್ನಿ ಮಗು ಅಂತ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. ಹೌದು, ವಿಜಯ್ ಸೂರ್ಯ ಮತ್ತೆ ಬಣ್ಣ ಹಚ್ಚಿದ್ದು ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಿ(Raaji) ಧಾರಾವಾಹಿಗೆ ವಿಜಯ್ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ವಿಜಯ್ ಎಂಟ್ರಿಯ ಪ್ರೋಮೋ ಕೂಡ ರಿಲೀಸ್ ಆಗಿದ್ದು ವಿಜಯ್ ನನ್ನು ಮತ್ತೆ ತೆರೆಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಧಾರಾವಾಹಿಯ ನಾಯಕಿ ರಾಜಿ ಬಾಳಲ್ಲಿ ಕರ್ಣನ ಸ್ಥಾನವನ್ನು ವಿಜಯ್ ತುಂಬುತ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಅಂದಹಾಗೆ ಈ ಧಾರಾವಾಹಿಗೆ ವಿಜಯ್ ಎಂಟ್ರಿ ವಿಶೇಷ ವ್ಯಕ್ತಿಯಾಗಿನಾ ಅಥವಾ ಸಂಪೂರ್ಣ ಧಾರಾವಾಹಿಯಲ್ಲಿ ಇರ್ತಾರಾ ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಆದರೆ ಸದ್ಯ ಕಾಣಿಸಿಕೊಂಡಿರುವುದು ಧಾರಾವಾಹಿ ಮೇಲಿನ ಕುತೂಹಲ ಹೆಚ್ಚಿಸಿದೆ.
ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನೆಮಾದಲ್ಲಿ ಅಂಕಿತಾ ಅಮರ್ ನಾಯಕಿ!
ತಂದೆ ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗ ದಂಪತಿ ತಮ್ಮ ಮನೆಯಲ್ಲೇ ಬೆಳೆಸಿರುತ್ತಾರೆ. ಭಾಸ್ಕರ್ ಶಾನುಭೋಗ ರಾಜಿಯನ್ನು ತಮ್ಮ ಮನೆ ಮಗಳಂತೆ ಕಂಡರೂ, ಸರಸ್ವತಿ ಮತ್ತು ಶಾನುಭೋಗರ ಕಿರಿ ಮಗ ಕರ್ಣನನ್ನು ಹೊರತುಪಡಿಸಿ ಅವರ ಕುಟುಂಬದವರಿಗೆ ರಾಜಿ ಮನೆ ಕೆಲಸದಾಕೆ ಮಾತ್ರ. ಭಾಸ್ಕರ್ ಶಾನುಭೋಗರ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳಲ್ಲಿ ಮೊದಲನೆಯವನು ರವೀಶ್. ಮೃದು ಸ್ವಭಾವದ ಇವನಿಗೆ ತನ್ನ ಹೆಂಡತಿ ಶಾಂಭವಿ ಹೇಳಿದ್ದೆ ಎಲ್ಲಾ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ 'ಲಾಯರ್ ಚಂದ್ರು' ಖ್ಯಾತಿಯ ಕಾರ್ತಿಕ್ ಔಟ್; ಹೊಸ ನಟ ಎಂಟ್ರಿ
ಎರಡನೇ ಮಗ ಉದಯ್, ಶಾಂಭವಿ ಅತ್ತಿಗೆ ಹಾಗೆ, ಸದಾ ತಂದೆಯ ಆಸ್ತಿ ಕಬಳಿಸಲು ಹೊಂಚು ಹಾಕುತ್ತಿರುತ್ತಾನೆ. ಭಾಸ್ಕರ್ ಶಾನುಭೋಗರ ಮಗಳು ರೇಣು ಕೂಡ ಆಗಾಗ ತಂದೆಯ ಆಸ್ತಿಯಲ್ಲಿ ತನ್ನ ಪಾಲಿನ ಬಗ್ಗೆ ತಕರಾರು ಮಾಡುತ್ತಿರುತ್ತಾಳೆ. ಇನ್ನು ಭಾಸ್ಕರ್ ಶಾನುಭೋಗರ ಕೊನೆಯ ಮಗ ಕರ್ಣ ಲಂಡನ್‌ನಿಂದ ವಿದ್ಯಾಭ್ಯಾಸ ಮುಗಿಸಿ ವಾಪಾಸ್ ಆಗಿದ್ದಾನೆ. ಕರ್ಣ ಮತ್ತು ರಾಜಿ ಬಾಲ್ಯದ ಗೆಳೆಯರು. ಇಬ್ಬರ ನಡುವೆ ಇರುವುದು ಸ್ನೇಹಾನಾ ಅಥವಾ ಪ್ರೀತಿನಾ, ರಾಜಿಗೆ ಕರ್ಣ ಸಿಕ್ತಾನಾ ಎನ್ನುವಷ್ಟೊತ್ತಿಗೆ ಹೊಸ ಪಾತ್ರದ ಎಂಟ್ರಿ(ವಿಜಯ್ ಸೂರ್ಯ) ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ಧಾರಾವಾಹಿಯಲ್ಲಿ ಯಾವೆಲ್ಲ ಟ್ವಿಸ್ಟ್ ಇರಲಿದೆ ಎನ್ನುವ ಕುತೂಹಲದಿಂದನೇ ಪ್ರೇಕ್ಷಕರು ಸಹ ವೀಕ್ಷಿಸುತ್ತಿದ್ದಾರೆ.
