ಮುಂದಿನ ಆಸ್ಕರ್ ಅವಾರ್ಡ್ ನನಗೇನೇ ಎಂದ ನಟಿ Rakhi Sawant!
ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ರಾಖಿ ಸಾವಂತ್ ಈಗ ನಾಟು ನಾಟು ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದು, ಮುಂದೊಂದು ದಿನ ತಮಗೆ ಆಸ್ಕರ್ ಸಿಗಲಿದೆ ಎಂದಿದ್ದಾರೆ.
ಆಸ್ಕರ್ 2023 (Oscar) ವೇದಿಕೆಯಲ್ಲಿ ಆರ್ಆರ್ಆರ್ನ Naatu Naatu ಪ್ರಶಸ್ತಿ ಗೆಲ್ಲುತ್ತಿದ್ದಂತೆಯೇ ದೇಶಾದ್ಯಂತ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಹಾಡು ಇತಿಹಾಸವನ್ನು ನಿರ್ಮಿಸಿದೆ. ಎಸ್.ಎಸ್.ರಾಜಮೌಳಿ ಮತ್ತು ತಂಡವು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ದೊಡ್ಡ ಗೆಲುವಿನಿಂದಾಗಿ ಭಾರತದ ಪ್ರತಿಯೊಬ್ಬರೂ ಸಂತೋಷಪಡುತ್ತಿದ್ದಾರೆ ಮತ್ತು ಈ ಸಂಭ್ರವನ್ನು ಆಚರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು, ಚಿತ್ರ ತಾರೆಯರಾದ ಆಲಿಯಾ ಭಟ್, ವಿವೇಕ್ ಅಗ್ನಿಹೋತ್ರಿ, ಅಜಯ್ ದೇವಗನ್, ಕಂಗನಾ ರಣಾವತ್ ಸೇರಿದಂತೆ ಚಿತ್ರರಂಗದ ಗಣ್ಯರು ತಂಡವನ್ನು ಅಭಿನಂದಿಸಲು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಇದೀಗ ಭಾರಿ ಸುದ್ದಿಯಲ್ಲಿ ಇರುವುದು ನಟಿ ರಾಖಿ ಸಾವಂತ್! (Rakhi Sawant) ರಾಖಿ ಸಾವಂತ್ ಕೂಡ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಇವರು ಶುಭಾಶಯ ಕೋರಿರುವುದರಲ್ಲಿ ಅಂಥದ್ದೇನು ವಿಶೇಷ ಅಂತೀರಾ? ಅಲ್ಲೇ ಇರುವುದು ವಿಶೇಷತೆ. ಎಲ್ಲರೂ ತಮ್ಮ ಟ್ವಿಟರ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಟು ನಾಟು ಹಾಡಿನ ಚಿತ್ರ ಶೇರ್ ಮಾಡಿಕೊಂಡೋ, ಇಲ್ಲವೇ ಆಸ್ಕರ್ ಅವಾರ್ಡ್ ಪಡೆದುಕೊಳ್ಳುತ್ತಿರುವ ಫೋಟೋ ಹಾಕಿಕೊಂಡು ಶುಭಾಶಯ ಹೇಳುತ್ತಿದ್ದರೆ ಡ್ರಾಮಾ ಕ್ವೀನ್ ಎಂದೇ ಪ್ರಸಿದ್ಧಿ ಪಡೆದಿರುವ ರಾಖಿ ಸಾವಂತ್ ಮಾತ್ರ ವಿಭಿನ್ನ ರೀತಿಯಲ್ಲಿ ವಿಷ್ ಮಾಡಿದ್ದಾರೆ.
2023 ರ ಆಸ್ಕರ್‌ನಲ್ಲಿ RRR ನ ಐತಿಹಾಸಿಕ ಗೆಲುವನ್ನು ಆಚರಿಸುತ್ತಿರುವಾಗ ರಾಖಿ ಸಾವಂತ್ ಅವರು "ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಟಿ ತಮ್ಮ ಜಿಮ್‌ನ (Gym) ಹೊರಗೆ ಕ್ರಾಪ್-ಟಾಪ್ ಮತ್ತು ಲೆಗ್ಗಿಂಗ್ಸ್ ಹಾಕಿಕೊಂಡು ಯುವಕನೊಬ್ಬನ ಜೊತೆ ನಾಟು ನಾಟು ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಹಾಡಿನ ಹುಕ್ ಸ್ಟೆಪ್‌ಗಳನ್ನು ರಾಖಿ ಪ್ರದರ್ಶಿಸಿದ್ದಾರೆ. ಜೊತೆಗೆ ಯುವಕನಿಗೂ ಈ ಸ್ಪೆಪ್ ಕಲಿಸಿದ್ದಾರೆ.
Natu Natu ಎನ್ನುತ್ತ ದೀಪಿಕಾ ಭಾವುಕ: ಸೋಷಿಯಲ್ ಮೀಡಿಯಾ ತುಂಬಾ ಹಾಡಿನದ್ದೇ ಗುಂಗು
ರಾಖಿ ಅವರು ಪಾಪ್‌ಗಳೊಂದಿಗೆ ಸಂವಾದ ನಡೆಸಿದಾಗ RRR ತಂಡದ ವಿಜಯಕ್ಕಾಗಿ ಅಭಿನಂದಿಸಿದರು. ಜೊತೆಗೆ, ಮುಂದೊಂದು ದಿನ ಆಸ್ಕರ್ ಪ್ರಶಸ್ತಿ ಗೆಲ್ಲುವ ಆಸೆಯನ್ನೂ ನಟಿ ಹಂಚಿಕೊಂಡಿದ್ದಾರೆ. 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಮಾಡಿದ ಭಾಷಣಕ್ಕಾಗಿ ಅವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. 2023 ರ ಆಸ್ಕರ್‌ನಲ್ಲಿ ಪ್ರಶಸ್ತಿಗಳನ್ನು ನೀಡಿದ ಏಕೈಕ ಬಾಲಿವುಡ್ ನಟಿ ದೀಪಿಕಾ (Deepika Padukone) ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಅಂದಹಾಗೆ ರಾಖಿ ಸದ್ಯ ಸೈಲೆಂಟ್ ಆಗಿದ್ದಾರೆ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ. ಆದಿಲ್ ಖಾನ್ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್ ಖಾನ್ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್ (Adil Khan Durrani) ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
Oscar Award: ನಾಟು ನಾಟುಗಾಗಿ ನಡೆದಿತ್ತು ಕೋಟಿ ಕೋಟಿಗಟ್ಟಲೆ ಬೆಟ್ಟಿಂಗ್?