Asianet Suvarna News Asianet Suvarna News

ಚಿನ್ನದ ಫೋನ್​ ಕಳಕೊಂಡ ಊರ್ವಶಿಗೆ ವಜ್ರದ ಫೋನ್​ ಕೊಡಿಸೋ ಆಫರ್​ಗಳ ಸುರಿಮಳೆ! ನಟಿ ಹೇಳಿದ್ದೇನು ಕೇಳಿ...

ಕ್ರಿಕೆಟ್​ ಪಂದ್ಯದ ವೇಳೆ ಚಿನ್ನದ ಫೋನ್​ ಕಳಕೊಂಡ ಊರ್ವಶಿ ರೌಟೇಲಾ ಅವರಿಗೆ  ವಜ್ರದ ಫೋನ್​ ಕೊಡಿಸೋ ಆಫರ್​ಗಳ ಸುರಿಮಳೆಯಾಗ್ತಿದೆಯಂತೆ.  ನಟಿ ಹೇಳಿದ್ದೇನು ಕೇಳಿ... 
 

After Phone theft during World Cup Match Urvashi Rautela gets Diamond phone offer suc
Author
First Published Dec 25, 2023, 12:33 PM IST

ಕಳೆದ ಅಕ್ಟೋಬರ್​ 14ರಂದು ಗುಜರಾತ್​ನ ಅಹಮದಾಬಾದ್​ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಪಂದ್ಯಾವಳಿ ವೇಳೆ, ಕ್ರೀಡೆ ನೋಡಲು ತೆರಳಿದ್ದ ಬಾಲಿವುಡ್​ ಖ್ಯಾತ ನಟಿ ಊರ್ವಶಿ ರೌಟೇಲಾ (Uravashi Rautela)  ಅವರು ತಮ್ಮ ಚಿನ್ನದ ಐಫೋನ್ ಅನ್ನು ಕಳೆದುಕೊಂಡಿದ್ದರು.  ಸುಂದರವಾದ ನೀಲಿ ಬಣ್ಣದ ಡ್ರೆಸ್​​ ಧರಿಸಿ ಭಾರತ ಕ್ರಿಕೆಟ್​ ತಂಡವನ್ನು ಬೆಂಬಲಿಸಲು ಬಂದಿದ್ದ ಊರ್ವಶಿ ರೌಟೇಲಾ ಬಂದಿದ್ದ ಊರ್ವಶಿಯವರು ಭಾರತ ಗೆದ್ದ ಖುಷಿಯಲ್ಲಿ ಇರುವಾಗಲೇ ಫೋನ್​ ಕಳೆದುಕೊಂಡಿದ್ದರು,  ಈ ಕುರಿತು ಅಂದೇ ಅವರು ತಮ್ಮ  ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಅನ್ನು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ ಎಂದು ಊರ್ವಶಿ  ಬರೆದುಕೊಂಡಿದ್ದರು. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿದ್ದರು. 

ಅದಾದ ಬಳಿಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ ನಟಿ,  ನಟಿ ತಮ್ಮ ಫೋನ್​ ಹುಡುಕಿ ಕೊಟ್ಟವರಿಗೆ ಭರ್ಜರಿ ಬಹುಮಾನವನ್ನೂ ಘೋಷಿಸಿದ್ದರು. ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿರಲಿಲ್ಲ. ಮೊಬೈಲ್‍ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದರು. ಇದರ ಹೊರತಾಗಿಯೂ ನಟಿಯ ಫೋನ್​ ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದರು. ಇವೆಲ್ಲಾ ನಟಿ ಪ್ರಚಾರಕ್ಕಾಗಿ ಮಾಡ್ತಿರೋದು ಎಂದು ಹಲವರು ಟ್ರೋಲ್​ ಕೂಡ ಮಾಡಿದ್ದರು. ಆದರೆ ಇದರ ನಡುವೆಯೇ,  ಅಜ್ಞಾತ ವ್ಯಕ್ತಿಯೊಬ್ಬ ನಟಿ ಊರ್ವಶಿಗೆ ಮೇಲ್ ಒಂದನ್ನು ಕಳುಹಿಸಿದ್ದ. ಆ ಮೇಲ್‌ ಅನ್ನು ನಟಿ ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದರು.   ಮೇಲ್‌ ಕಳುಹಿಸಿದ್ದ ವ್ಯಕ್ತಿಯು, ನಿಮ್ಮ ಫೋನ್ ನನ್ನ ಬಳಿಯಿದೆ. ವಾಪಸ್ ಕೊಡುತ್ತೇನೆ. ಆದರೆ ನನಗೊಂದು ಸಹಾಯ ಮಾಡಬೇಕು. ನಿಮ್ಮ ಫೋನ್​ ನಿಮಗೆ ಬೇಕಾದರೆ,   ಕ್ಯಾನ್ಸರ್‌ನಿಂದ ಬಳಲುತ್ತಿರುವ ನನ್ನ ಸಹೋದರನ  ಕ್ಯಾನ್ಸರ್‌ ಚಿಕಿತ್ಸೆಗೆ ಸಹಾಯ ಮಾಡಬೇಕು ಎಂದಿದ್ದ.  ಈ ಮೇಲ್‌ಗೆ ನಟಿ ಓಕೆ ಎಂದು  ಥಮ್ಸ್‌ ಅಪ್‌ ಎಮೋಜಿ ಹಾಕಿದ್ದರು. 

56 weds 33! ಮಂಟಪಕ್ಕೆ ಬಂದ 56ರ ಮದುಮಗ ಅರ್ಬಾಜ್ ಖಾನ್: ಮದ್ವೆಮನೆ ವಿಡಿಯೋ ವೈರಲ್​

ಆದರೆ ಇದರ ಹೊರತಾಗಿಯೂ ಫೋನ್​ ಸಿಗಲಿಲ್ಲ ಎನ್ನಲಾಗುತ್ತಿದೆ. ಘಟನೆ ನಡೆದು ಎರಡು ತಿಂಗಳ ಮೇಲಾದರೂ ನಟಿಯ ಕಳೆದು ಹೋಗಿದೆ ಎನ್ನಲಾದ ಫೋನ್ ಸಿಕ್ಕಂತಿಲ್ಲ.   24 ಕ್ಯಾರೆಟ್‌ ಚಿನ್ನ ಇರುವ ಫೋನ್‌ ಬೆಲೆ 7 ಲಕ್ಷದ 55 ಸಾವಿರದ 430ರೂಪಾಯಿ ಎಂದಿದ್ದರು ನಟಿ. ಚಿನ್ನದ ಫೋನ್​ ಸಿಗದಿದ್ದರೆ ಏನಂತೆ, ಊರ್ವಶಿಗೆ ವಜ್ರದ ಫೋನ್​ ಕೊಡಿಸುವುದಾಗಿ ಅಭಿಮಾನಿಗಳಿಂದ ಆಫರ್​ಗಳ ಸುರಿಮಳೆಯೇ ಆಗಿದೆಯಂತೆ! 

ಈ ಕುರಿತು ಖುದ್ದು ಈಗ ಊರ್ವಶಿ ಹೇಳಿಕೊಂಡಿದ್ದಾರೆ. ನನ್ನ ಫೋನ್​ ಕಳೆದು ಹೋಗಿರುವುದು ತಿಳಿದಾಗಿನಿಂದಲೂ ನನಗೆ ಚಿನ್ನ ಮಾತ್ರವಲ್ಲದೇ ವಜ್ರದ ಫೋನ್​ ಕೊಡಿಸುವುದಾಗಿಯೂ ಆಫರ್​ಗಳ ಸುರಿಮಳೆಯೇ ಆಗುತ್ತಿದೆ. ಆದರೆ ನಿಜವಾಗಿ ಹೇಳಬೇಕೆಂದರೆ, ಇಲ್ಲಿ ಚಿನ್ನ, ವಜ್ರದ ಪ್ರಶ್ನೆಯಲ್ಲ... ಬದಲಿಗೆ ನನ್ನ ಆ ಫೋನಿನ ಪ್ರಶ್ನೆ ಎಂದಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಫ್ಯಾನ್ಸ್​, ಫೋನ್​ ಕಳೆದುಹೋಗಿದ್ದರೆ ತಾನೇ ಸಿಗುವುದು ಎಂದಿದ್ದರೆ, ಉಳ್ಳವರಿಗೇ ಯಾಕೆ ಎಲ್ಲರೂ ಆಫರ್​ ಕೊಡುತ್ತಾರೆ? ನನ್ನಂಥ ಬಡವರಿಗೂ ಸಹಾಯ ಮಾಡಬಹುದಲ್ಲವೆ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋದಲ್ಲಿ ನಟಿ ಇನ್ನೊಂದು ವಜ್ರ, ಚಿನ್ನ ಲೇಪಿತ ಝಗಮಗಿಸುವ ಫೋನ್​ ಒಂದನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ನೋಡಬಹುದು. 

ಬೆತ್ತಲೆಯಾಗಿ ನಟಿಸಿದ ಬಳಿಕ ಎಷ್ಟೋ ರಾತ್ರಿ ನಿದ್ದೆಯಿಲ್ಲದೇ ಕಳೆದೆ: ಸವಿ ನೆನಪು ತೆರೆದಿಟ್ಟ ಅನಿಮಲ್​ ನಟಿ ತೃಪ್ತಿ ಡಿಮ್ರಿ
 

Follow Us:
Download App:
  • android
  • ios