ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಕಾಶ್ಮೀರದಲ್ಲಿ ಹನಿಮೂನ್‌ನಲ್ಲಿದ್ದಾರೆ. ಪತ್ನಿಯನ್ನು ನೋಡಿ ಕಳೆದು ಹೋದ ಗಾಯಕ ಆದಿತ್ಯ ಕವಿಯಾಗಿದ್ದಾರೆ

ಗಾಯಕ ಆದಿತ್ಯ ನಾರಾಯಣ್ ಅವರು ಪತ್ನಿ ಶ್ವೇತಾ ಅಗರ್ವಾಲ್ ಅವರೊಂದಿಗೆ ತಮ್ಮ ಕಾಶ್ಮೀರ ಮಧುಚಂದ್ರದಿಂದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಂಪತಿಗಳು ಡಿಸೆಂಬರ್‌ನಲ್ಲಿ ಮದುವೆಯಾಗಿದ್ದು ಅನೇಕ ಮಿನಿ-ಮಧುಚಂದ್ರಗಳನ್ನು ಯೋಜಿಸಿದ್ದಾರೆ.

ಶನಿವಾರ ಆದಿತ್ಯ ಇನ್‌ಸ್ಟಾಗ್ರಾಮ್‌ಗೆ ನಲ್ಲಿ ಶ್ರೀನಗರದ ದಾಲ್ ಸರೋವರದಲ್ಲಿ ಶಿಕರಾ ಸವಾರಿ ಮಾಡುತ್ತಿರುವ ಇಬ್ಬರ ಚಿತ್ರವನ್ನು ಹಂಚಿಕೊಂಡಿದ್ದಾರೆ. ತನ್ನ ಶೀರ್ಷಿಕೆಯಲ್ಲಿ, ಅವರು ಸುತ್ತುವರೆದಿರುವ ಸೌಂದರ್ಯದ ಬಗ್ಗೆ ಹಿಂದಿಯಲ್ಲಿ ಒಂದು ಸಣ್ಣ ಕವಿತೆಯನ್ನು ಬರೆದಿದ್ದಾರೆ. ನೈಸರ್ಗಿಕ ಪರಿಸರ ಮತ್ತು ಅವರ ಪತ್ನಿ ಎರಡನ್ನೂ ಉಲ್ಲೇಖಿಸಿದ್ದಾರೆ.

'ಇಷ್ಟೊಂದ್ ಕಮ್ಮಿ ಅಲ್ಲ': 5 BHK ಮನೆಯ ಬೆಲೆ ರಿವೀಲ್ ಮಾಡಿದ ನವ ವರ

ಈ ಹಿಂದೆ ಆದಿತ್ಯ ಶ್ರೀನಗರದ ಬೀದಿಗಳಿಂದ ಸೆಲ್ಫಿ ಹಂಚಿಕೊಂಡಿದ್ದರು ಮತ್ತು ಅದಕ್ಕೆ ಹನಿಮೂನ್ ಪ್ರಾರಂಭವಾಗಿದೆ. ಭೂಮಿಯ ಮೇಲೆ ಸ್ವರ್ಗ ಕಾಶ್ಮೀರಕ್ಕೆ ಮೊದಲ ಬಾರಿಗೆ.. ಇನ್‌ಕ್ರೆಡಿಬಲ್ ಇಂಡಿಯಾ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸೂರ್ಯಾಸ್ತ, ವಿಶ್ರಾಂತಿ, ಶ್ವೇತಾ ಮತ್ತು ಶಿಕಾರ ಇದು ಸುಂದರವಾಗಿಲ್ಲವೇ? ಎಂದಿದ್ದಾರೆ.

View post on Instagram

ಚಿತ್ರದಲ್ಲಿ ಆದಿತ್ಯ ಕಂದು ಬಣ್ಣದ ಜಾಕೆಟ್ ಮತ್ತು ಸನ್ಗ್ಲಾಸ್ ಧರಿಸಿದ್ದು, ಶ್ವೇತಾ ಗುಲಾಬಿ ಬಣ್ಣದ ಟಾಪ್ ಮತ್ತು ಕೆಂಪು ಹೆಣೆದ ಕ್ಯಾಪ್ ಧರಿಸಿದ್ದರು. ಶ್ರೀನಗರದ ರೆಸ್ಟೋರೆಂಟ್‌ನಿಂದ ಹೆಚ್ಚುವರಿ ಫೋಟೋಗಳು ಮತ್ತು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

View post on Instagram