Asianet Suvarna News Asianet Suvarna News

ತಿರುಪತಿಯಲ್ಲೇ ಮದ್ವೆ ಆಗ್ತೀನಿ: 'ಆದಿಪುರುಷ್' ಈವೆಂಟ್‌ನಲ್ಲಿ ಮದುವೆ ಬಗ್ಗೆ ಬಹಿರಂಗ ಪಡಿಸಿದ ನಟ ಪ್ರಭಾಸ್

ತಿರುಪತಿಯಲ್ಲೇ ಮದ್ವೆ ಆಗ್ತೀನಿ ಎಂದು ನಟ ಪ್ರಭಾಸ್ 'ಆದಿಪುರುಷ್' ಈವೆಂಟ್‌ನಲ್ಲಿ ಮದುವೆ ಬಗ್ಗೆ ಮಾತನಾಡಿದ್ದಾರೆ. 

Adipurush star Prabhas about his marriage at Adipurush event sgk
Author
First Published Jun 7, 2023, 10:27 AM IST

ಟಾಲಿವುಡ್ ಸ್ಟಾರ್ ಪ್ರಭಾಸ್ ಸದ್ಯ ಆದಿಪುರುಷ್ ಸಿನಿಮಾ  ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಸದ್ಯ ಪ್ರಮೋಷನ್ ಕಾರ್ಯದಲ್ಲಿ ಪ್ರಭಾಸ್ ಮತ್ತು ತಂಡ ಬ್ಯುಸಿಯಾಗಿದೆ. ಇತ್ತೀಚೆಗಷ್ಟೆ ಅದ್ದೂರಿಯಾಗಿ ಪ್ರಿ ರಿಲೀಸ್ ಈವೆಂಟ್ ಮಾಡಿದ್ದು ಪ್ರಭಾಸ್ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ತಿರುಪತಿಯಲ್ಲಿ ಆದಿಪುರುಷ್ ಸಿನಿಮಾದ ಅದ್ದೂರಿ ಈವೆಂಟ್ ನಡೆದಿದ್ದು ಆದಿಪುರುಷ್ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಈ ಸಮಾರಂಭದಲ್ಲಿ ಪ್ರಭಾಸ್ ಮದುವೆ ವಿಚಾರ ಮತ್ತೆ ಚರ್ಚೆಯಾಗಿದೆ. ತನ್ನ ಮದುವೆ ಬಗ್ಗೆ ಪ್ರಭಾಸ್ ಮನಬಿಚ್ಚಿ ಮಾತನಾಡಿದ್ದಾರೆ. 

ಪ್ರಭಾಸ್ ಮಾತನಾಡುತ್ತಿರುವಾಗ ಅಭಿಮಾನಿಗಳು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಕೊಟ್ಟ ಉತ್ತರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿ ಕೇಳಿದ ಪ್ರಶ್ನೆಗೆ ಪ್ರಭಾಸ್, 'ಮದುವೆಯೇ? ಆಗುತ್ತೇನೆ, ಅರ್ಜೆಂಟ್ ಏನಿದೆ? ಮುಂದೊಂದು ದಿನ ನಾನು ತಿರುಪತಿಯಲ್ಲೇ ಮದುವೆಯಾಗುತ್ತೀನಿ' ಎಂದು ಹೇಳಿದರು. ಅಷ್ಟೆಯಲ್ಲದೇ ಆದಿಪುರುಷ್ ಸಹ ನಟಿ ಕೃತಿ ಸನೊನ್ ಅವರನ್ನು ಪ್ರಭಾಸ್ ಮದುವೆ ಆಗುತ್ತಾರೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ವೈರಲ್ ಆಗಿತ್ತು. ಈ ಬಗ್ಗೆಯೂ ಪ್ರತಿಕ್ರಿಯೇ ನೀಡಿ ವದಂತಿಯನ್ನು ತಳ್ಳಿ ಹಾಕಿದರು. 

ಅಂದಹಾಗೆ ಪ್ರಭಾಸ್ 43 ವರ್ಷವಾದರೂ ಮದುವೆಯಾಗಿಲ್ಲ. ಅನೇಕ ನಟಿಯರ ಜೊತೆ  ಪ್ರಭಾಸ್ ಹೆಸರು ಥಳುಕು ಹಾಕಿಕೊಂಡಿತ್ತು. ಅಕಲ್ ಅಗರ್ವಾಲ್, ಅನುಷ್ಕಾ ಶೆಟ್ಟಿ ಸೇರಿದಂತೆ ಹಲವು ನಟಿಯರೊಡನೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. ಇದೀಗ ಕೃತಿ ಸನೊನ್ ಜೊತೆಗೂ ಪ್ರಭಾಸ್ ಹೆಸರು ಕೇಳಿ ಬಂದಿದೆ ಆದರೆ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಅದೇನೆ ಇದ್ದರೂ ಪ್ರಭಾಸ್ ತಿರುಪತಿಯಲ್ಲೇ ಮದುವೆ ಆಗ್ತೀನಿ ಅಂತ ಹೇಳಿರುವುದು ಅಚ್ಚರಿ ಮೂಡಿಸಿದೆ.

 Prabhas: ಪ್ರತಿ ಚಿತ್ರಮಂದಿರಗಳಲ್ಲಿ ಹನುಮನಿಗೆ 1 ಸೀಟು ಮೀಸಲಿಟ್ಟ 'ಆದಿಪುರುಷ' ತಂಡ: ಏನಿದು ವಿಶೇಷ?

ಪಾತ್ರದ ಬಗ್ಗೇ ಹೇಳಿದ್ದೇನು?

ಈ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಪಾತ್ರದ  ಬಗ್ಗೆ ಮಾತನಾಡಿದ ಪ್ರಭಾಸ್, 'ಪ್ರತಿಯೊಂದುಪಾತ್ರವೂ ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ. ಆದರೆ ಈ ರೀತಿಯ ಪಾತ್ರವನ್ನು ನಿರೂಪಿಸುವುದು ಮಹತ್ತರವಾದ ಜವಾಬ್ದಾರಿ ಮತ್ತು ಹೆಮ್ಮೆಯಿಂದ ಬರುತ್ತದೆ. ನಮ್ಮ ಮಹಾಕಾವ್ಯದಿಂದ ಈ ಪಾತ್ರವನ್ನು ಚಿತ್ರಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಮ್ಮ ದೇಶದ ಯುವಕರು ನಮ್ಮ ಚಿತ್ರದ ಮೇಲೆ ತಮ್ಮ ಪ್ರೀತಿಯನ್ನು ತೋರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ' ಎಂದು ಹೇಳಿದರು. 

Adipurush: ಸಿನಿಮಾ ಬಿಡುಗಡೆಯೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಭಾಸ್

ಆದಿಪುರುಷ್ ಬಗ್ಗೆ

ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೊನ್ ಸೀತೆಯ ಪಾತ್ರದಲ್ಲಿ ಮಿಂಚಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಇದೇ ತಿಂಗಳು ಜೂನ್ 16ರಂದು ರಿಲೀಸ್‌ಗೆ ಸಿದ್ಧವಾಗಿದೆ. ಸೈಫ್ ಅಲಿ ಖಾನ್ ರಾವಣನಾಗಿ ಮಿಂಚಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿರುವ ಆದಿಪುರುಷ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

Follow Us:
Download App:
  • android
  • ios