Adipurush Contraversy: ಹನುಮಂತ ದೇವ್ರೇ ಅಲ್ಲ ಎಂದವರಿಗೆ ಕೊಲೆ ಬೆದರಿಕೆ- ಬಿಗಿ ಪೊಲೀಸ್​ ಬಂದೋಬಸ್ತ್​!

ಆದಿಪುರುಷ್​ ಸಂಭಾಷಣೆಕಾರ ಮನೋಜ್​ ಮುಂತಶೀರ್​ ಅವರು, ಹನುಮಂತನ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಅದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಅವರಿಗೆ ಕೊಲೆ ಬೆದರಿಕೆ ಬಂದಿದ್ದು ಪೊಲೀಸ್ ರಕ್ಷಣೆ ಕೊಡಲಾಗಿದೆ.
 

Adipurush movie writer Manoj Muntashir said Hanumantha is not god suc

ಓಂ ರಾವತ್​ (Om Raut) ನಿರ್ದೇಶನ ಆದಿಪುರುಷ್​ ಮೊದಲಿನಿಂದಲೂ ವಿವಾದಗಳ ಕೇಂದ್ರಬಿಂದುವಾಗಿಯೇ ಹೊರಹೊಮ್ಮಿದೆ.  ಈ ಸಿನಿಮಾದಲ್ಲಿ ಪ್ರಭಾಸ್​ (Prabhas), ಕೃತಿ ಸನೋನ್​, ದೇವದತ್ತ ನಾಗೆ, ಸೈಫ್​ ಅಲಿ ಖಾನ್​, ಸನ್ನಿ ಸಿಂಗ್​ ಮುಂತಾದವರು ನಟಿಸಿದ್ದಾರೆ.  ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ.  ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದಿದ್ದರು. ಆದರೆ ಹಲವರು ಇದರ ಬಗ್ಗೆ ಟೀಕೆ ಶುರು ಮಾಡಿದ್ದಾರೆ. ಹಲವರು ಮೊದಲಿನಿಂದಲೂ ಚಿತ್ರವನ್ನು ಟ್ರೋಲ್​  ಮಾಡುತ್ತಲೇ ಬಂದಿದ್ದಾರೆ.  ಚಿತ್ರದ ಹಲವು ದೃಶ್ಯಗಳಲ್ಲಿ ತಲೆಬುಡವಿಲ್ಲದ ಸಂಭಾಷಣೆಗಳಿದ್ದರೆ, ಹಲವೆಡೆ ಕಾಲ್ಪನಿಕ ದೃಶ್ಯಗಳನ್ನು ರಚಿಸಲಾಗಿದೆ ಎನ್ನುತ್ತಿದ್ದವರೇ ಹೆಚ್ಚು. ಇನ್ನು ಕೆಲವರು ಚಿತ್ರವನ್ನು ಕೊಂಡಾಡುತ್ತಿರುವುದೂ ಇದೆ. ಈ ಚಿತ್ರ ರಾಮಾಯಣವನ್ನು ಆಧರಿಸಿ ಮಾಡಲಾಗಿದೆ ಎಂದೇ  ಹೇಳಲಾಗುತ್ತಿತ್ತು. ಆದರೆ ಇದೀಗ  ಸಂಭಾಷಣಕಾರ ಮನೋಜ್​ ಮುಂತಶೀರ್​ ಅವರು   ಸೆನ್ಸೇಷನ್​ ಹೇಳಿಕೆ ನೀಡಿದ್ದು ಉಲ್ಟಾ ಹೊಡೆದಿದ್ದಾರೆ. ‘ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್​. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್​​ಕ್ಲೈಮರ್​ನಲ್ಲೂ ನಾವು ಅದನ್ನೇ ಹೇಳಿದ್ದೇವೆ’ ಎಂದು ಮನೋಜ್​ ಮುಂತಶೀರ್​ ಹೇಳಿದ್ದು, ಈ ಚಿತ್ರದ ಬಗ್ಗೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಆದರೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ  ಮನೋಜ್​ ಮುಂತಶೀರ್​. ಅದೇನೆಂದರೆ, ಮನೋಜ್​ ಅವರು  ಸಂದರ್ಶನವೊಂದರಲ್ಲಿ ತಾವು ಬರೆದಿರುವ  ಸಂಭಾಷಣೆಗಳನ್ನು ಬಹಳ ಸುಲಭವಾಗಿ ಸಮರ್ಥಿಸಿಕೊಂಡಿದ್ದಾರೆ. ಅವರು ಹೇಳಿದ್ದೇನೆಂದರೆ, ಬಜರಂಗಬಲಿ ದೇವರಲ್ಲ ಎನ್ನುವುದು. ಅವರ ಪ್ರಕಾರ ಹನುಮಂತ ದೇವರಲ್ಲ, ಬದಲಿಗೆ ಅವನೊಬ್ಬ ಭಕ್ತ ಅಷ್ಟೇ.  ಆತನ ಭಕ್ತಿಯಲ್ಲಿ ಆ ಶಕ್ತಿ ಇದ್ದುದರಿಂದಲೇ ಆತನನ್ನು ದೇವರನ್ನಾಗಿ ಮಾಡಿದ್ದೇವೆ ಎಂದಿದ್ದಾರೆ. ಇದಕ್ಕೆ  ಸಾಮಾಜಿಕ ಜಾಲತಾಣಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆ ನೀಡಿ ಈಗ ಅವರು ಫಜೀತಿಗೆ ಸಿಲುಕಿದ್ದಾರೆ. ಕೊಲೆ ಬೆದರಿಕೆ ಬಂದಿದೆ.

Sonal Chauhan: ಆದಿಪುರುಷ್​ನ ಎರಡೇ ದೃಶ್ಯಕ್ಕೆ 'ಮಂಡೋದರಿ'ಗೆ ಈ ಪರಿ ಸಂಭಾವನೆಯಾ?

ಅದೇ ಇನ್ನೊಂದೆಡೆ, ‘ಆದಿಪುರುಷ್​’ ಸಿನಿಮಾದಲ್ಲಿ ಆಂಜನೇಯನ ಪಾತ್ರಕ್ಕೆ ಮನೋಜ್​ ಮುಂತಶೀರ್​ ಬರೆದ ಸಂಭಾಷಣೆಗಳು ತೀರಾ ಕಳಪೆ ಆಗಿವೆ ಎಂದು ಅನೇಕರು ದೂರಿದ್ದಾರೆ.  ಅಷ್ಟೇ ಅಲ್ಲದೇ ಅವರಿಗೆ ಕೊಲೆ ಬೆದರಿಕೆಯೂ ಬಂದಿದೆ. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಕ್ಷತ್ರಿಯಾ ಕರ್ಣಿ (kshtriya Karni) ಸೇನಾದವರು ಸುದ್ದಿಗೋಷ್ಠಿ ನಡೆಸಿದ್ದರು. ‘ಆದಿಪುರುಷ್​’ ಸಿನಿಮಾದ ಸಂಭಾಷಣಕಾರ ಮನೋಜ್​ ಮುಂತಶೀರ್​ ಹಾಗೂ ನಿರ್ದೇಶಕ ಓಂ ರಾವತ್​ ಅವರನ್ನು ಕೊಲೆ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಮನೋಜ್​ ಮುಂತಶೀರ್​ ಅವರು ಭದ್ರತೆಗಾಗಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದು,  ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ.  

ಈ ನಡುವೆ, ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂದು  ಕೆಲವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ನೇಪಾಳದಲ್ಲಿ ಈ ಸಿನಿಮಾದ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ರಾಮಾಯಣವನ್ನು ಮನಬಂದಂತೆ ತೋರಿಸಿದ್ದು ಸರಿಯಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ (Box office) ಶೇಕಡಾ 75 ರಿಂದ 77 ರಷ್ಟು ಕುಸಿತ ಕಂಡಿದೆ ಎಂದು ಪಿಂಕ್ವಿಲ್ಲಾ ವರದಿ ಹೇಳಿದೆ. ಇದರ ಪರಿಣಾಮವಾಗಿ, ಚಿತ್ರದ ಹಿಂದಿ ಆವೃತ್ತಿಯು 4 ದಿನದಂದು ಬಾಕ್ಸ್ ಆಫೀಸ್‌ನಲ್ಲಿ ಕೇವಲ 8.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅದೇ ಇನ್ನೊಂದೆಡೆ, ಆದಿಪುರುಷ್ ರಿಲೀಸ್ ಆಗಿ ಕೆಟ್ಟ ವಿಮರ್ಶೆಗಳು ಬರುತ್ತಿದ್ದರೂ ಪ್ರಭಾಸ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸಿನಿಮಾ ರಿಲೀಸ್ ಬಳಿಕ ಪ್ರಭಾಸ್ ಎಲ್ಲೋಗಿದ್ದಾರೆ ಎನ್ನುವುದು ಸಹ ಗೊತ್ತಿಲ್ಲ. ಪ್ರಭಾಸ್​ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಪ್ರಭಾಸ್ ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. 

ಇದು ರಾಮಾಯಣ ಅಲ್ಲ, ಅದಿಪುರುಷ್: ಟ್ರೋಲ್ ಬಳಿಕ ಉಲ್ಟ ಹೊಡೆದ ಪ್ರಭಾಸ್ 'ಆದಿಪುರುಷ್' ತಂಡ

Latest Videos
Follow Us:
Download App:
  • android
  • ios